ಶ್ರೀಮುರಳಿ 'ಮದಗಜ' ಸ್ಯಾಟಲೈಟ್ ಹಕ್ಕು ಸೇಲ್: ನಿರ್ಮಾಪಕರಿಗೆ ಸಿಕ್ಕಿದ್ದು ಎಷ್ಟು ಕೋಟಿ?

ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಮದಗಜ' ಬಿಡುಗಡೆಗೂ ಮುನ್ನವೇ ಬೇಜಾನ್ ಸದ್ದು ಮಾಡುತ್ತಿದೆ. ಶ್ರೀಮುರಳಿಯ ರಗಡ್ ಲುಕ್.. ಮಸ್ತಾಗಿರುವ ಆಕ್ಷನ್ ತುಣುಕುಗಳನ್ನು ಕೇವಲ ಟ್ರೈಲರ್‌ನಲ್ಲಿ ನೋಡಿ ಫಿದಾ ಆಗಿರುವ ಜನರು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು 5 ದಿನಗಳಲ್ಲಿ ಮದಗಜ ಥಿಯೇಟರ್‌ಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಡಲಿದೆ. ಈ ಮಧ್ಯೆ ಸಿನಿಮಾ ವ್ಯಾಪಾರನೂ ಚೆನ್ನಾಗಿ ಕುದುರಿದೆ. ಕೆಲವು ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಿದ್ದ ತಂಡ ಈಗ ಸ್ಯಾಟಲೈಟ್ ಹಕ್ಕುಗಳನ್ನು ಸೇಲ್ ಮಾಡಿದೆ.

ವರ್ಷದ ಕೊನೆಯ ತಿಂಗಳು ಸ್ಯಾಂಡಲ್‌ವುಡ್‌ಗೆ ಲಕ್ಕಿ. ಈ ತಿಂಗಳಲ್ಲಿ ತೆರೆಕಂಡ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಈಗ 'ಮದಗಜ' ಕೂಡ ಇದೇ ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಶ್ರೀಮುರಳಿ ಅಭಿಮಾನಿಗಳು ಡಿಸೆಂಬರ್ ಮೂರರಂದು ಥಿಯೇಟರ್ ಮುಂದೆ ಜಾತ್ರೆ ಮಾಡುವುದಕ್ಕೆ ಕಾದು ಕೂತಿದ್ದಾರೆ. ಈ ಮಧ್ಯೆ ಭಾರೀ ಮೊತ್ತಕ್ಕೆ ಸಿನಿಮಾದ ಒಂದೊಂದೇ ಹಕ್ಕುಗಳು ಮಾರಾಟವಾಗುತ್ತಿವೆ.

'ಮದಗಜ' ಸ್ಯಾಟಲೈಟ್ ಹಕ್ಕು 6 ಕೋಟಿಗೆ ಸೇಲ್

'ಮದಗಜ' ಸ್ಯಾಟಲೈಟ್ ಹಕ್ಕು 6 ಕೋಟಿಗೆ ಸೇಲ್

ಚೇತನ್ ನಿರ್ದೇಶಿಸಿದ 'ಭರ್ಜರಿ' ಸಿನಿಮಾ ಬಳಿಕ ಶ್ರೀಮುರಳಿಯ 'ಮದಗಜ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಭರ್ಜರಿಯಂತಹ ಫ್ಯಾಮಿಲಿ ಮಾಸ್ ಸಿನಿಮಾ ಶ್ರೀಮುರಳಿಗೆ ಅಷ್ಟಾಗಿ ಯಶಸ್ಸು ತಂದುಕೊಟ್ಟಿರಲಿಲ್ಲ. ಅದಕ್ಕೀಗ ಮತ್ತೆ ಪಕ್ಕಾ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಸಿನಿಮಾದಲ್ಲಿ ಖಡಕ್ ಆಗಿ ಎಂಟ್ರಿ ಕೊಡಲಿದ್ದಾರೆ. ಈಗಾಗೇ 'ಮದಗಜ' ಟ್ರೈಲರ್ ಸಿನಿಪ್ರಿಯರ ಕಾತರವನ್ನು ದುಪ್ಪಟ್ಟು ಮಾಡಿದೆ. ಈ ಮಧ್ಯೆ ಸಿನಿಮಾಗೆ ಬೇರೆ ಬೇರೆ ಕಡೆಯಿಂದ ಬೇಡಿಕೆ ಹೆಚ್ಚಾಗಿದೆ. 'ಮದಗಜ' ಸಿನಿಮಾ ಬರೋಬ್ಬರಿ 6 ಕೋಟಿಗೆ ಸ್ಯಾಟಲೈಟ್ ಹಕ್ಕು ಸೇಲ್ ಆಗಿದೆ.

ಕಲರ್ಸ್ ಕನ್ನಡ ಪಾಲಾದ 'ಮದಗಜ' ಹಕ್ಕು

ಕಲರ್ಸ್ ಕನ್ನಡ ಪಾಲಾದ 'ಮದಗಜ' ಹಕ್ಕು

'ಮದಗಜ' ಮಾಸ್ ಸಿನಿಮಾ ಅಷ್ಟೇ ಅಲ್ಲ. ಇದರಲ್ಲಿ ಲವ್‌ಸ್ಟೋರಿಯಿದೆ. ಶ್ರೀಮುರಳಿ, ಆಶಿಕಾ ರಂಗನಾಥ್ ಜೋಡಿ ಈಗಾಗಲೇ ಒಂದೇ ಒಂದು ಹಾಡಿನಿಂದ ಮೋಡಿ ಮಾಡಿದೆ. ಅಲ್ಲದೆ, ಚಿಕ್ಕಣ್ಣ, ಶಿವು ಕೆ.ಆರ್ ಪೇಟೆ, ಧರ್ಮಣ್ಣರಂತಹ ಕಾಮಿಡಿ ಕಾಂಬಿನೇಷನ್ ಈ ಸಿನಿಮಾದಲ್ಲಿದೆ. ಹೀಗಾಗಿ 'ಮದಗಜ' ಸಿನಿಮಾದ ಸ್ಯಾಟಲೈಟ್ ಹಕ್ಕು ಕೊಂಡುಕೊಳ್ಳಲು ಪೈಪೋಟಿ ಇತ್ತು. ಕೊನೆಗೂ ಈ ಹಕ್ಕು ಕಲರ್ಸ್ ಕನ್ನಡದ ಪಾಲಾಗಿದ್ದು, ದುಬಾರಿ ಮೊತ್ತಕ್ಕೆ ಸಿನಿಮಾ ಕೊಂಡುಕೊಂಡಿದೆ. "ನಮ್ಮ ಸಿನಿಮಾವನ್ನು ಮೆಚ್ಚಿ ಪ್ರೀತಿಯಿಂದ ದೊಡ್ಡ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳನ್ನು ಹೇಳುತ್ತೇನೆ. ದೊಡ್ಡ ಮೊತ್ತಕ್ಕೆ ವ್ಯಾಪಾರ ಆಗಿದ್ದು ಖುಷಿಕೊಟ್ಟಿದೆ." ಅಂತ ಫಿಲ್ಮಿ ಬೀಟ್‌ಗೆ ಮಹೇಶ್ ತಿಳಿಸಿದ್ದಾರೆ.

ಥಿಯೇಟರ್ ಮುಂದೆ ಶ್ರೀಮುರಳಿ ಅಭಿಮಾನಿಗಳ ಸಂಭ್ರಮ

ಥಿಯೇಟರ್ ಮುಂದೆ ಶ್ರೀಮುರಳಿ ಅಭಿಮಾನಿಗಳ ಸಂಭ್ರಮ

ಡಿಸೆಂಬರ್ 3ರಂದು 'ಮದಗಜ' ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಥಿಯೇಟರ್ ಮುಂದೆ ಮದಗಜನ ಮಹೋತ್ಸವ ಮಾಡಲು ಸಜ್ಜಾಗಿದ್ದಾರೆ. ಕರ್ನಾಟಕ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳ ಒಕ್ಕೂಟ, ಕೇಂದ್ರ ಸಮಿತಿಯಿಂದ ಪ್ರಮುಖ ಚಿತ್ರಮಂದಿರದ ಮುಂದೆ ಅನ್ನಸಂತರ್ಪಣೆ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ 80 ಸಾವಿರ ರೂಪಾಯಿಯ ಸೇಬು ಹಣ್ಣಿನ ಹಾರವನ್ನು ಶ್ರೀಮುರಳಿಗೆ ಥಿಯೇಟರ್‌ನಲ್ಲಿ ಹಾಕಲಿದ್ದಾರೆ.

ಶ್ರೀಮುರಳಿ 21ನೇ ಸಿನಿಮಾಗೆ 21 ಕೆಜಿ ಕೇಕ್

ಶ್ರೀಮುರಳಿ 21ನೇ ಸಿನಿಮಾಗೆ 21 ಕೆಜಿ ಕೇಕ್

'ಮದಗಜ' ಶ್ರೀಮುರಳಿಯ 21ನೇ ಸಿನಿಮಾ. ಹೀಗಾಗಿ ಬಿಡುಗಡೆ ದಿನ 21 ಕೆಜಿ ಕೇಕ್ ಕಟ್ ಮಾಡಲಿದ್ದಾರೆ. ಅನುಪಮ ಚಿತ್ರಮಂದಿರದ ಮುಂದೆ 21 ಸಾವಿರ ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ. ಇದರೊಂದಿಗೆ ಶ್ರೀಮುರಳಿ ಕಟೌಟ್‌ಗೆ 21 ಕುಂಬಳಕಾಯಿ ಒಡೆದು ಪೂಜೆ ಮಾಡಲಿದ್ದಾರೆ.

More from Filmibeat

English summary
Roaring Star Sri Murali new movie Madagaja sattelite rights sold for huge amount of 6 crore to colors kannada. Ayogya fame Mahesh Kumar is director and Ashika Ranganath is the lead actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X