Bagheera Box Office Day 12:12 ದಿನಗಳ 'ಬಘೀರ' ಕಲೆಕ್ಷನ್ ಎಷ್ಟು? ಶ್ರೀಮುರಳಿ ಸಿನಿಮಾ ಹಿಟ್/ಫ್ಲಾಪ್?

ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಎರಡು ವಾರಗಳ ಹಿಂದೆ ರಿಲೀಸ್ ಆಗಿದೆ. 'ಉಗ್ರಂ' ಸಿನಿಮಾದ ಬಳಿಕ ಪ್ರಶಾಂತ್ ನೀಲ್ ಕಥೆಯನ್ನು ಹೆಣೆದಿದ್ದರಿಂದ ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲವಿತ್ತು. ಅದರಲ್ಲೂ ಕನ್ನಡದ ಮೊದಲ ಸೂಪರ್‌ ಹೀರೊ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರಿಗೆ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು.

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 'ಬಘೀರ' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಮೂರು ವರ್ಷಗಳ ಕಾಲ ಸಮಯ ತೆಗೆದುಕೊಂಡು ಸಿನಿಮಾ ಮಾಡಲಾಗಿತ್ತು. ಬೆಳಕಿನ ಹಬ್ಬ ದೀಪಾವಳಿಗೆ ಈ ಸಿನಿಮಾ ತೆರೆಕಂಡಿದ್ದು ರಜೆಯ ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್ ಅನ್ನು ಲೂಟಿ ಮಾಡಿತ್ತು.

Srimurali Prashanth Neel movie Bagheera Karnataka Box office collection day 12 report

ಎಲ್ಲಕ್ಕಿಂತ ಹೆಚ್ಚಾಗಿ 'ಬಘೀರ' ಸಿನಿಮಾ ಗಮನ ಸೆಳೆದಿದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ ಲುಕ್ ಹಾಗೂ ಗೆಟಪ್ ಅವರ ಫ್ಯಾನ್ಸ್‌ಗೆ ಕಿಕ್ ಕೊಟ್ಟಿತ್ತು. ಡಾ.ಸೂರಿ ನಿರ್ದೇಶಿಸಿದ ಈ ಸಿನಿಮಾ ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಅದೇ ವೀಕ್ ಡೇಸ್‌ನಲ್ಲಿ ಗಣನೀಯವಾಗಿ ಇಳಿಕೆ ಕಂಡಿತ್ತು. ಸದ್ಯ ಈ ಸಿನಿಮಾ ರಿಲೀಸ್ ಆಗಿ ಇಂದಿಗೆ (ನವೆಂಬರ್ 12) 13 ದಿನಗಳಾಗಿವೆ. ಇದರಲ್ಲಿ12 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.

12ನೇ ದಿನ 'ಬಘೀರ'ನ ಭವಿಷ್ಯ ಹೇಗಿದೆ?

ರೋರಿಂಗ್ ಸ್ಟಾರ್ ಶ್ರೀಮುರಳಿಗೆ 'ಬಘೀರ' ಕಮ್‌ಬ್ಯಾಕ್ ಸಿನಿಮಾ. ಸದಾ ಸೋಲಿನ ಸುಳಿಗೆ ಸಿಲುಕಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಿಟ್ ಸಿನಿಮಾವನ್ನು ಕೊಟ್ಟಿದೆ. ಸದ್ಯ 12ನೇ ದಿನದಲ್ಲಿ ಮುನ್ನುಗ್ಗುತ್ತಿರುವ ಈ ಸಿನಿಮಾ ನಿನ್ನೆ (ನವೆಂಬರ್ 12) ಅಂದರೆ, ಎರಡನೇ ಸೋಮವಾರ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯ ಹಾಕಿದ ಲೆಕ್ಕ. ಇನ್ನು ಇಂಡಸ್ಟ್ರಿ ಟ್ರ್ಯಾಕರ್ sacnilk ಪ್ರಕಾರ 22 ಲಕ್ಷ ರೂಪಾಯಿ ಆಗಿದೆ.

Srimurali Prashanth Neel movie Bagheera Karnataka Box office collection day 12 report

12 ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು?

'ಬಘೀರ' ಸಿನಿಮಾ 12 ದಿನಗಳಲ್ಲಿ ಒಟ್ಟು ಎಷ್ಟು ಗಳಿಕೆ ಮಾಡಿರಬಹುದು? ಅನ್ನೋ ಕುತೂಹಲವಿದೆ. ಕನ್ನಡದ ಮೊದಲ ಸೂಪರ್ ಹೀರೊ ಸಿನಿಮಾ ಎರಡನೇ ವೀಕೆಂಡ್‌ನಲ್ಲಿ ಎರಡು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗಾಗಿ ಗಳಿಕೆಯಲ್ಲಿ ದಿಢೀರ್ ಏರಿಕೆಯಾಗಿದೆ. ಚಿತ್ರತಂಡಕ್ಕೆ ಆಪ್ತರಾಗಿರುವವರ ಕೊಟ್ಟ ಮಾಹಿತಿ ಪ್ರಕಾರ ಇಲ್ಲಿವರೆಗೂ 23 ರಂದ 24 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಅದೇ sacnilk 19.52 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಿದೆ.

ತೆಲುಗು ಕಲೆಕ್ಷನ್ ಎಷ್ಟು?

'ಬಘೀರ' ಸಿನಿಮಾಗೆ ಪ್ರಶಾಂತ್ ನೀಲ್ ಬ್ರ್ಯಾಂಡ್ ಬಿದ್ಮೇಲೆ ಟಾಲಿವುಡ್‌ನಲ್ಲೂ ವರ್ಕ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ನಿರೀಕ್ಷಿತ ಮಟ್ಟಕ್ಕೆ ಈ ಸಿನಿಮಾ ಸದ್ದು ಮಾಡಲಿಲ್ಲ. ಆದರೂ, 'ಬಘೀರ' ಸಿನಿಮಾ ಒಂದು ವಾರದಲ್ಲಿ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೂ, ಈ ಕಲೆಕ್ಷನ್ ಶ್ರೀಮುರಳಿಯ ಮುಂದಿನ ಸಿನಿಮಾಗೆ ಅನುಕೂಲ ಆಗಲಿದೆ ಎನ್ನಲಾಗಿದೆ.

ಭರ್ಜರಿ ಕಾಂಪಿಟೇಷನ್

ಶ್ರೀಮುರಳಿ 'ಬಘೀರ' ಸಿನಿಮಾಗೆ ಎರಡು ವಾರಗಳು ಸಿಕ್ಕಿತ್ತು. ಒಂದು ವಾರದ ಬಳಿಕ 'ನವಗ್ರಹ' ಸಿನಿಮಾ ರೀ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ 'ಬಘೀರ'ನಿಗೆ ಹೆಚ್ಚು ಟ್ರಬಲ್ ಮಾಡಿಲ್ಲ. ಆದರೆ, ಈ ವಾರ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಿತ್ತಿದೆ. ಹೀಗಾಗಿ 'ಬಘೀರ' ಕಲೆಕ್ಷನ್ ಮತ್ತಷ್ಟು ಡ್ರಾಪ್ ಆಗಬಹುದು.

More from Filmibeat

English summary
Srimurali, Rukmini Vasanth movie Bagheera Karnataka Box office collection day 12 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X