Bagheera Box Office Day 6: 6ನೇ ದಿನ 'ಬಘೀರ' ಕಲೆಕ್ಷನ್ ಏರಿಕೆ ಆಯ್ತಾ? ಇಳಿಕೆ ಆಯ್ತಾ? ಹೇಗಿದೆ ಬಾಕ್ಸಾಫೀಸ್ ಭವಿಷ್ಯ?

ಕಳೆದ ವಾರ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಬಘೀರ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಸುಮಾರು 210ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಕರ್ನಾಟಕದಲ್ಲಿ ಮೊದಲ ದಿನವೇ 'ಬಘೀರ'ನಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಕನ್ನಡದ ಮೊದಲ ಸೂಪರ್ ಹೀರೋ ಸಿನಿಮಾ ಆಗಿದ್ದರಿಂದ ಜನರು ಕೂಡ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದರು.

ಶ್ರೀಮುರಳಿ ನಟಿಸಿದ 'ಬಘೀರ' ರಿಲೀಸ್ ಆಗಿ ಇಂದಿಗೆ (ನವೆಂಬರ್ 6) ಏಳು ದಿನಗಳು ಆಗಿವೆ. ಸಿನಿಮಾ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದರು 6ನೇ ದಿನ ಅಂದರೆ, ನಿನ್ನೆಯಿಂದ (ನವೆಂಬರ್ 5) ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. 'ಬಘೀರ' ಕನ್ನಡ ಚಿತ್ರರಂಗದ ಮಟ್ಟಿಗೆ ಒಂದೊಳ್ಳೆ ಪ್ರಯತ್ನ ಹೀಗಾಗಿ ಜನರು ಕೂಡ ಸಿನಿಮಾಗೆ ಕೈ ಹಿಡಿದಿದ್ದಾರೆ. ಶ್ರೀಮುರಳಿಯ ಡಬಲ್ ಶೇಡ್ ಪ್ರೇಕ್ಷಕರಿಗೆ ಇಷ್ಟ ಆಗಿದೆ.

Srimurali Prashanth Neel movie Bagheera Karnataka Box office collection day 6 report

ರೋರಿಂಗ್ ಶ್ರೀಮುರಳಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಕಾಶ್ ರಾಜ್ ಅಂತಹ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಇರುವ ಸಿನಿಮಾಗೆ ಆರಂಭದಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, 6ನೇ ದಿನ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಹಾಗಿದ್ದರೆ 6ನೇ ದಿನ ಈ ಸಿನಿಮಾದ ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ.

6ನೇ ದಿನ 'ಬಘೀರ' ಗಳಿಸಿದ್ದೆಷ್ಟು?

ರೋರಿಂಗ್ ಸ್ಟಾರ್ ಶ್ರೀಮುರಳಿಯ ಸೂಪರ್‌ ಹೀರೋ ಅವತಾರ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಮೊದಲ ನಾಲ್ಕು ದಿನ ಉತ್ತಮ ಕಲೆಕ್ಷನ್ ಮಾಡಿತ್ತು. ವಾರದ ಆರಂಭದ ದಿನಗಳಲ್ಲಿ ಕಲೆಕ್ಷನ್ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಈ ವ್ಯತ್ಯಾಸ ಎಲ್ಲಾ ಸಿನಿಮಾಗಳಲ್ಲೂ ಆಗುತ್ತೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆಯಿದೆ. 6ನೇ ದಿನ 'ಬಘೀರ' ಕರ್ನಾಟಕದಲ್ಲಿ 1 ಕೋಟಿ ರೂಪಾಯಿ ಆಸು ಪಾಸಿನಲ್ಲಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯ ನೀಡಿದ ಲೆಕ್ಕ.

Srimurali Prashanth Neel movie Bagheera Karnataka Box office collection day 6 report

ಆರು ದಿನಗಳ ಒಟ್ಟು ಕಲೆಕ್ಷನ್

'ಬಘೀರ' ಎಲ್ಲಾ ತರಹ ಆಡಿಯನ್ಸ್ ಅನ್ನೂ ಚಿತ್ರಮಂದಿರಕ್ಕೆ ಸೆಳೆದ ಸಿನಿಮಾ. ಮಾಸ್ ಪ್ರಿಯರಿಗೆ ಆಕ್ಷನ್ ಇದೆ. ಕ್ಲಾಸ್ ಪ್ರಿಯರಿಗೆ ಲವ್ ಸ್ಟೋರಿಯಿದೆ. ಅದರಲ್ಲೂ ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಜೋಡಿ ಕನ್ನಡಿಗರಿಗೆ ಇಷ್ಟ ಆಗಿದೆ. ಇನ್ನು ಕಳೆದ ಆರು ದಿನಗಳಲ್ಲಿ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಒಟ್ಟಾರೆ ಗಳಿಸಿದ್ದು 15.65 ಕೋಟಿ ರೂಪಾಯಿ. ಆ ಆರು ದಿನಗಳ ಕಲೆಕ್ಷನ್ ಹೀಗಿದೆ.

'ಬಘೀರ' 6 ದಿನಗಳ ಕಲೆಕ್ಷನ್ ಹೀಗಿದೆ

ಮೊದಲ ದಿನ 3.25 ಕೋಟಿ ರೂ.
ಎರಡನೇ ದಿನ 3.30 ಕೋಟಿ ರೂ.
ಮೂರನೇ ದಿನ 3.50 ಕೋಟಿ ರೂ.
ನಾಲ್ಕನೇ ದಿನ 3.15 ಕೋಟಿ ರೂ.
ಐದನೇ ದಿನ 1.50 ಕೋಟಿ ರೂ.
ಆರನೇ ದಿನ 1.00 ಕೋಟಿ ರೂ.
ಒಟ್ಟು 15.65 ಕೋಟಿ ರೂ.

ತೆಲುಗು ಕಲೆಕ್ಷನ್ ಹೇಗಿದೆ?

ಪ್ರಶಾಂತ್ ನೀಲ್ ಕಥೆ ಹೆಣೆದಿದ್ದರಿಂದ ತೆಲುಗಿನ ಮಂದಿನೂ ಸಿನಿಮಾ ನೋಡಿದ್ದಾರೆ. ಆದರೆ, ಸಿನಿಮಾವನ್ನು ಲಿಮಿಟೆಡ್ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಹೀಗಾಗಿ ಕಲೆಕ್ಷನ್ ಕೂಡ ದೊಡ್ಡ ಮಟ್ಟಲ್ಲಿ ನಿರೀಕ್ಷೆ ಮಾಡುವಂತೆ ಇರಲಿಲ್ಲ. ಆದರೂ, 'ಬಘೀರ' ತೆಲುಗು ಬಾಕ್ಸಾಫೀಸ್‌ನಲ್ಲಿ ಸುಮಾರು 1.50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ನಿನ್ನೆ 10 ರಿಂದ 15 ಲಕ್ಷ ರೂಪಾಯಿ ಗಳಿಕೆ ಕಂಡಿರಬಹುದೆಂಬ ನಿರೀಕ್ಷೆಯಿದೆ.

2ನೇ ವೀಕೆಂಡ್‌ ಮೇಲೆ ನಿರೀಕ್ಷೆ

ಕನ್ನಡದ ಮೊದಲ ಹೀರೋ 'ಬಘೀರ' 6ನೇ ದಿನ ಶೇ. 50ರಷ್ಟು ಡ್ರಾಪ್ ಆಗಿದೆ. ಇದು ಮತ್ತೆ ಶುಕ್ರವಾರದಿಂದ ಏರಿಕೆ ಆಗುವ ಸಾಧ್ಯತೆಯಿದೆ. ಎರಡನೇ ವೀಕೆಂಡ್‌ನಲ್ಲಿ ಈ ಸಿನಿಮಾ ಮತ್ತೆ ಉತ್ತಮ ಕಲೆಕ್ಷನ್ ಮಾಡಬಹುದು. ಅಂದ್ಹಾಗೆ, ಈ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಚಿತ್ರರಂಗ ಅಧಿಕೃತವಾಗಿ ಇನ್ನೂ ಮಾಹಿತಿಯನ್ನು ಹಂಚಿಕೊಂಡಿಲ್ಲ.

More from Filmibeat

English summary
Srimurali, Rukmini Vasanth movie Bagheera Karnataka Box office collection day 6 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X