Bagheera Box Office Day 7: 7ನೇ ದಿನದ 'ಬಘೀರ' ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು?

ಕನ್ನಡ ಚಿತ್ರರಂಗ ಸತತ ಸೋಲುಗಳಿಂದ ಕಂಗೆಟ್ಟು ಹೋಗಿತ್ತು. ಒಳ್ಳೆಯ ಸಿನಿಮಾ ಬಂದರೂ ಥಿಯೇಟರ್‌ನಲ್ಲಿ ಹೆಚ್ಚು ಪ್ರದರ್ಶನ ಕಾಣಲಿಲ್ಲ. ಇನ್ನೊಂದು ಕಡೆ ತೆರೆಕಂಡ ಸ್ಟಾರ್‌ ಸಿನಿಮಾಗಳೇ ಜೋರಾಗಿ ಸದ್ದು ಮಾಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸೂಪರ್‌ಸ್ಟಾರ್ ಸಿನಿಮಾಗಳು ವರ್ಷಕ್ಕೆ ಒಂದೂ ರಿಲೀಸ್ ಆಗುತ್ತಿಲ್ಲ.

ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ಗೆ 'ಬಘೀರ' ಭರವಸೆಯ ಬೆಳಕಾಗಿ ಬಂದಿದೆ. ದೀಪಾವಳಿ ಹಬ್ಬದಂದು ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದೆ. ಚಿತ್ರತಂಡ ಕೂಡ ಇದೇ ಖುಷಿಯಲ್ಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಡಾ. ಸೂರಿ ಜೋಡಿ ಹಿಟ್ ಆಗಿದ್ದು, ಕನ್ನಡಕ್ಕೊಂದು ಹಿಟ್ ಕಾಂಬಿನೇಷನ್ ಸಿಕ್ಕಂತೆ ಆಗಿದೆ.

Srimurali Prashanth Neel movie Bagheera Karnataka Box office collection day 7 report

ಮೊದಲ ನಾಲ್ಕೈದು ದಿನ ಕಲೆಕ್ಷನ್ ಈಗಲೂ ಇದೆಯಾ ಅನ್ನೋದೇ ಪ್ರಶ್ನೆ. ಬ್ಯೂಸಿ ದಿನಗಳಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿಲ್ಲ. ಹೀಗಾಗಿ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಆಗಿದ್ದು, ಈ ವೀಕೆಂಡ್‌ನಲ್ಲಿ ಮತ್ತೆ ಪಿಕ್‌ಅಪ್ ಆಗುವ ಸಾಧ್ಯತೆ ಇದೆ ಅಂತ ವಿತರಕರ ವಲಯದ ಲೆಕ್ಕಚಾರ. ಇನ್ನು 7ನೇ ದಿನ 'ಬಘೀರ' ಕಲೆಕ್ಷನ್ ಎಷ್ಟು ಅಂದರೆ,

7ನೇ ದಿನ 'ಬಘೀರ' ಕಲೆಕ್ಷನ್

ರೋರಿಂಗ್ ಸ್ಟಾರ್ ಶ್ರೀಮುರಳಿ 'ಬಘೀರ' ಬಾಕ್ಸಾಫೀಸ್‌ ಸಕ್ಸಸ್ ಅಂತ ಡಿಕ್ಲೇರ್ ಆಗಿದೆ. ಕನ್ನಡದ ಮೊದಲ ಸೂಪರ್‌ ಹೀರೋಗೆ ಭವಿಷ್ಯಯಿದೆ ಅನ್ನೋದು ಸಾಬೀತಾಗಿದೆ. ಸದ್ಯ 'ಬಘೀರ'ನಿಗೆ ಸಿಕ್ಕ ಸಕಸ್ಸ್ ಚಿತ್ರತಂಡಕ್ಕಂತೂ ಹೊಸ ಸಕ್ಸಸ್ ಕೊಟ್ಟಿದೆ ಅನ್ನೋದಂತೂ ಸತ್ಯ. ವೀಕ್ ಡೇಸ್‌ನಲ್ಲಿ 'ಬಘೀರ' ಬಾಕ್ಸಾಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರೆ ಅದರ ಖದರ್ ಬೇರೆನೇ ಇರುತ್ತಿತ್ತು. ಅಂದ್ಹಾಗೆ, 7ನೇ ದಿನ 'ಬಘೀರ' ಕರ್ನಾಟಕದಲ್ಲಿ ಗಳಿಸಿದ್ದು 80 ಲಕ್ಷದಿಂದ 1 ಕೋಟಿ ರೂಪಾಯಿ ಎಂದು ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕ.

Srimurali Prashanth Neel movie Bagheera Karnataka Box office collection day 7 report

7 ದಿನಗಳ ಒಟ್ಟು ಕಲೆಕ್ಷನ್

'ಬಘೀರ' ರಿಲೀಸ್ ಆಗಿ ಒಂದು ವಾರ ಕಳೆದಿದೆ. ಅಸಲಿಗೆ ಇಂದಿನಿಂದ (ನವೆಂಬರ್ 7) ಹೊಸ ಲೆಕ್ಕ ಆರಂಭ. ಎರಡನೇ ವಾರವೂ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದರೆ, ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಹಿಟ್ ಕೊಟ್ಟಂತೆ. ಸದ್ಯ ಏಳು ದಿನಗಳಲ್ಲಿ ಈ ಸಿನಿಮಾ 17 ರಿಂದ 18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

'ಬಘೀರ' 7 ದಿನಗಳ ಕಲೆಕ್ಷನ್ ಹೀಗಿದೆ

ಮೊದಲ ದಿನ 3.25 ಕೋಟಿ ರೂ.
ಎರಡನೇ ದಿನ 3.30 ಕೋಟಿ ರೂ.
ಮೂರನೇ ದಿನ 3.50 ಕೋಟಿ ರೂ.
ನಾಲ್ಕನೇ ದಿನ 3.15 ಕೋಟಿ ರೂ.
ಐದನೇ ದಿನ 1.50 ಕೋಟಿ ರೂ.
ಆರನೇ ದಿನ 1.00 ಕೋಟಿ ರೂ.
ಏಳನೇ ದಿನ 1.00 ಕೋಟಿ ರೂ.
ಒಟ್ಟು 16.65 ಕೋಟಿ ರೂ. (ತಂಡದ ಲೆಕ್ಕ 18-20 ಕೋಟಿ)

'ಬಘೀರ' ಟೀಮ್ ಲೆಕ್ಕಚಾರವೇನು?

ಸಿನಿಮಾ ಗೆದ್ದ ಖುಷಿಯಲ್ಲಿ ಇರುವ 'ಬಘೀರ' ಸಕ್ಸಸ್ ಅನ್ನು ಎಂಜಾಯ್ ಮಾಡುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಖುಷಿಯಾಗಿದ್ದಾರೆ. ಇನ್ನೊಂದು ಕಡೆ ಡಾ. ಸೂರಿ ಬಹಳ ದಿನಗಳ ಬಳಿಕ ನಿರ್ದೇಶಿಸಿದ ಸಿನಿಮಾ ಗೆದ್ದಿದೆ. ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಸಕ್ಸಸ್ ಸಿಕ್ಕಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಇಲ್ಲಿವರೆಗೂ 18 ಕೋಟಿಯಿಂದ 20 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ನಿರ್ದೇಶಕ ಡಾ.ಸೂರಿ ಹೇಳಿದ್ದಾರೆ.

ವೀಕೆಂಡ್ ಕಲೆಕ್ಷನ್ ಮುಖ್ಯ

ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಮೂರು ವರ್ಷಗಳ ಬಳಿಕ ಮತ್ತೊಂದು ಸಕ್ಸಸ್ ಸಿಕ್ಕಿದೆ. ಮೊದಲ ವಾರ ಒಳ್ಳೆಯ ಕಲೆಕ್ಷನ್ ಆಗಿದೆ. ಅದೇ ಇನ್ನೊಂದು ಕಡೆ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಐದು ಕೋಟಿ ರೂಪಾಯಿ ಮೇಲಾದರೆ, ಸಿನಿಮಾದ ಕಲೆಕ್ಷನ್ 25 ಕೋಟಿ ರೂ. ದಾಟಬಹುದು. ಎರಡನೇ ವಾರದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇದೆ.

More from Filmibeat

English summary
Srimurali, Rukmini Vasanth movie Bagheera Karnataka Box office collection day 7 report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X