ತಪ್ಪು ಮಾಹಿತಿ ಹಂಚುತ್ತಿರೋರಿಗೆ 'ಕೆಜಿಎಫ್‌' ನಟಿಯ ಬಹಿರಂಗ ಪತ್ರ.. "ನಾನು ಎಂದಿಗೂ ಯಶ್‌ ಫ್ಯಾನ್ ಎಂದ ಶ್ರೀನಿಧಿ

'ಕೆಜಿಎಫ್' ಸಿನಿಮಾ ಸಿನಿಪ್ರಿಯರ ಮನಗೆದ್ದಿರೋ ನಟಿ ಶ್ರೀನಿಧಿ ಶೆಟ್ಟಿ. ಮೊದಲ ಸಿನಿಮಾ ಮೂಲಕವೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿಯೀಕೆ. 'ಕೆಜಿಎಫ್ 2' ಬಳಿಕ ಶ್ರೀನಿಧಿ ಶೆಟ್ಟಿ ಹೊಸ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ನಟಿಸಿದ್ದು ಮೂರೇ ಸಿನಿಮಾಗಳು ಆಗಿದ್ರೂ, ಶ್ರೀನಿಧಿ ಶೆಟ್ಟಿ 50 ಸಿನಿಮಾಗಳಿಗೆ ಆಗುವಷ್ಟು ಹೆಸರನ್ನು ಗಳಿಸಿದ್ದಾರೆ. ಇನ್ನೇನು ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದರು. ಅಷ್ಟರಲ್ಲೇ ಶ್ರೀನಿಧಿ ಶೆಟ್ಟಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸುತ್ತಿದ್ದರು.

Srinidhi Shetty wrote a letter to Yash and said, I shall always be your fan

ಇದೇ ವಿಷಯಕ್ಕೆ ಸಂಬಂಧಿಸಿದಂತೆ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಇದೇ ಪತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಅಲ್ಲದೆ ರಾಕಿಂಗ್‌ಸ್ಟಾರ್ ಜೊತೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದು, ಎಂದೆಂದಿಗೂ ಅಭಿಮಾನಿಯಾಗಿ ಇರುತ್ತೇನೆ ಎಂದು ಆ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಪ್ರೀತಿ ಹಂಚಲು ಬಯಸುತ್ತೇನೆ

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಶ್ರೀನಿಧಿ ಶೆಟ್ಟಿ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದರು ಎನ್ನಲಾಗಿದೆ. ಶ್ರೀನಿಧಿ ಶೆಟ್ಟಿ ಯಶ್ ಬಗ್ಗೆ ಹೇಳಿದ್ದಾರೆ ಎನ್ನಲಾದ ವಿಷಯವನ್ನು ಹಬ್ಬಿಸುತ್ತಿದ್ದು, ಆ ಬಗ್ಗೆ ಸ್ಪಷ್ಣನೆ ನೀಡಿದ್ದಾರೆ ಅನ್ನೋ ಮಾತು ಹೇಳಿಬರುತ್ತಿದೆ. ಆದರೆ, ಕೆಜಿಎಫ್ ನಟಿ ಈ ಪತ್ರ ಬರೆದಿದ್ದು ಯಾಕೆ ಅಂತ ನೇರವಾಗಿ ಹೇಳಿಕೊಂಡಿಲ್ಲ.

"ಇದು ಸಾಧನವಲ್ಲ.. ಆದರೆ ಅದನ್ನು ಬಳಸುವ ವ್ಯಕ್ತಿ ವ್ಯತ್ಯಾಸಗಳನ್ನು ತರುತ್ತಾರೆಂದು ಕೆಲವರು ಹೇಳುತ್ತಾರೆ. ಈ ಮಧ್ಯೆ ಕೆಲವರು ಸೋಶಿಯಲ್ ಮೀಡಿಯಾ ಟೂಲ್‌ಗಳನ್ನು ಕೆಟ್ಟದನ್ನು ಹಾಗೂ ತಪ್ಪು ಮಾಹಿತಿಯನ್ನು ಹಬ್ಬಿಸಲು ಬಳಸುತ್ತಿದ್ದಾರೆ. ಆದರೆ, ನಾನು ನನ್ನ ಜೀವನದಲ್ಲಿ ಪ್ರಮುಖರು ಎನಿಸಿಕೊಂಡಿರುವವರಿಗೆ ಸೋಶಿಯಲ್ ಮೀಡಿಯಾವನ್ನು ಪ್ರೀತಿ, ಮಸ್ತಿ ಹಾಗೂ ಮೆಚ್ಚುಗೆಯನ್ನು ಸೂಚಿಸುವುದಕ್ಕೆ ಬಳಸುತ್ತೇನೆ." ಎಂದು ಶ್ರೀನಿಧಿ ಶೆಟ್ಟಿ ಬಹಿರಂಗ ಪತ್ರದಲ್ಲಿ ಬರೆದುಕೊಂಡಿದ್ದಾರೆ.

"ಎಂದೆಂದಿಗೂ ಯಶ್ ಅಭಿಮಾನಿ"

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ತಮ್ಮ ನಿಲುವುಗಳೇನು ಅನ್ನೋದನ್ನು ನಟಿ ಶ್ರೀನಿಧಿ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ. 'ಕೆಜಿಎಫ್' ಪ್ರಪಂಚ ಸೃಷ್ಟಿಸುವಾಗ ಅವರೊಂದಿಗೆ ನಟಿಸಿದ್ದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ಅಲ್ಲದೆ ಎಂದೆಂದಿಗೂ ನಾನು ಅವರ ಅಭಿಮಾನಿಯಾಗಿ ಇರುತ್ತೇನೆಂದು ಹೇಳಿದ್ದಾರೆ.

"ಪ್ರತಿಬಾರಿ ಇದೇ ಧ್ವನಿ ಮರುಕಳಿಸುತ್ತಿರುವ ಬೆನ್ನಲ್ಲೇ ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕೆಜಿಎಫ್ ಪ್ರಪಂಚವನ್ನು ಸೃಷ್ಟಿಸುವಾಗ, ರಾಕಿಂಗ್‌ ಸ್ಟಾರ್ ಯಶ್ ಜೊತೆ ಸಿನಿಮಾದಲ್ಲಿ ನಟಿಸಿದ್ದು ಹೆಮ್ಮೆ ಹಾಗೂ ಗೌರವವಿದೆ. ಅವರು ನಿಜವಾದ ಜೆಂಟಲ್‌ಮ್ಯಾನ್, ಮಾರ್ಗದರ್ಶಕ, ಸ್ನೇಹಿತ ಹಾಗೇ ಪ್ರೇರಣೆ. ರಾಕಿಂಗ್ ಸ್ಟಾರ್ ಯಶ್ ನಾನು ಯಾವಾಗಲೂ ನಿಮ್ಮ ಅಭಿಮಾನಿಯಾಗಿ ಇರುತ್ತೇನೆ." ಎಂದು ಯಶ್ ಹೇಳಿದ್ದಾರೆ.

More from Filmibeat

English summary
Srinidhi Shetty wrote a letter to Yash and said, I shall always be your fan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X