ಬಳ್ಳಾರಿಯಲ್ಲಿ ಯಶ್, ರಾಜಮೌಳಿ; ಸೆಲೆಬ್ರೆಟಿಗಳನ್ನು ನೋಡಲು ಮುಗ್ಗಿಬಿದ್ದ ಫ್ಯಾನ್ಸ್!

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಹಾಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ರಾಜಮೌಳಿ ಒಂದೇ ದಿನ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಬ್ಬರೂ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಮುಂದಿನ ಸಿನಿಮಾ 'ಟಾಕ್ಸಿಕ್' ಮಾಡುತ್ತಿದ್ದಾರೆ. ಅದೇ ಎಸ್‌ ಎಸ್‌ ರಾಜಮೌಳಿ, ಮಹೇಶ್ ಬಾಬು ಸಿನಿಮಾ ಮಾಡುವುದಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇಬ್ಬರೂ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡ ಬಳ್ಳಾರಿ ಕಡೆಗೆ ಪಯಣ ಬೆಳೆಸಿದ್ದರು. ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನವನ್ನು ಉದ್ಘಾಟನೆ ಮಾಡಲು ಭಾಗಿಯಾಗಿದ್ದರು. ಹಾಗೇ ಪ್ಯಾನ್ ಇಂಡಿಯಾ ಡೈರೆಕ್ಟರ್ ರಾಜಮೌಳಿ ಕೂಡ ಪತ್ನಿ ಸಮೇತರಾಗಿ ಬಂದು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಿದ್ದರು. ಈ ವೇಳೆ ಇಬ್ಬರನ್ನು ನೋಡುವುದಕ್ಕೆ ಬಳ್ಳಾರಿಯ ಜನರು ಮುಗಿಬಿದ್ದಿದ್ದರು.

SS Rajamouli and Yash in Bellary for Amrutheshwara temple pran pratishtha ceremony

ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ನೋಡಿ ಫ್ಯಾನ್ಸ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈ ವೇಳೆ ಅಭಿಮಾನಿಗಳಿಗೆ ಸ್ಪಂದಿಸಿದ ಯಶ್ ಇಂತಹ ಬ್ಯುಸಿ ಶೆಡ್ಯೂಲ್‌ನಲ್ಲೂ ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆಗೆ ಬಂದಿದ್ದೇಕೆ? ಅನ್ನೋದನ್ನು ಹೇಳಿಕೊಂಡಿದ್ದಾರೆ.

"ದೇವರ ದರ್ಶನ ಮಾಡುವುದಕ್ಕೆಂದು ಇಲ್ಲಿಗೆ ಬಂದಿದ್ದೇನೆ. ಸಾಯಿ ಅವರು ನನಗೆ ತುಂಬಾನೇ ಆತ್ಮೀಯರು. ನನ್ನ ಸಿನಿಮಾ 'ಕೆಜಿಎಫ್​ ಚಾಪ್ಟರ್ 1' ಅನ್ನು ಟಾಲಿವುಡ್‌ನಲ್ಲಿ ವಿತರಣೆ ಮಾಡಿದ್ದು ಇವರೇ. 'ಕೆಜಿಎಫ್ 1' ಸಿನಿಮಾವನ್ನು ತೆಲುಗಿನಲ್ಲಿ ವಿತರಣೆ ಮಾಡಿದ್ದರು. ನಮ್ಮ ಸಿನಿಮಾ ಗೆಲ್ಲುವುದಕ್ಕೆ ಅವರೇ ಕಾರಣ. ಹಾಗೇ ತುಂಬಾನೇ ದೈವ ಭಕ್ತರು. ಹೀಗಾಗಿ ಮೊದಲ ತಮ್ಮೂರಿನಲ್ಲಿ ದೇವಸ್ತಾನ ಕಟ್ಟುವ ಬಗ್ಗೆ ಹೇಳಿದ್ದರು. ಈ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದ ಖುಷಿ ಕೊಟ್ಟಿದ್ದು, ದೇವರ ಪೂಗಯಯಲ್ಲಿ ಭಾಗಿಯಾಗಿದ್ದು ಖುಷಿಕೊಟ್ಟಿದೆ" ಎಂದು ಯಶ್ ಹೇಳೀದ್ದಾರೆ.

ಇನ್ನೊಂದು ಕಡೆ ಎಸ್‌ ಎಸ್‌ ರಾಜಮೌಳಿ ಕೂಡ ಪತ್ನಿ ರಮ ಜೊತೆ ಆಗಮಿಸಿದ್ದರು. ಇಬ್ಬರು ಪ್ಯಾನ್ ಇಂಡಿಯಾ ದಿಗ್ಗಜರು ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಿದ್ದು, ಕಾರ್ಯಕ್ರಮಕ್ಕೆ ತಾರಾ ಮೆರುಗು ಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಯಶ್ ಹಾಗೂ ರಾಜಮೌಳಿ ಆಗಮಿಸಿದ್ದ ವಿಡಿಯೋಗಳು ಹಾಗೂ ಫೋಟೊಗಳು ಹರಿದಾಡುತ್ತಿದೆ.

ಪ್ಯಾನ್ ಇಂಡಿಯಾ ನಿರ್ದೇಶಕ ರಾಜಮೌಳಿ ಬಿಳಿ ಬಣ್ಣ ದೋತಿ ಹಾಗೂ ಶಲ್ಯವನ್ನು ಧರಿಸಿದ್ದರು. ಹಾಗೇ ಇವರ ಪತ್ನಿ ರಮಾ ಕೂಡ ಪಕ್ಕಾ ಟ್ರೆಡಿಷನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಯಶ್ ಕೂಡ ಸೆಮಿ ಟ್ರೆಡಿಷನ್ಲ್ ಲುಕ್‌ ಖುರ್ತಾ ಪೈಜಾಮದಲ್ಲಿ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದ್ಹಾಗೆ ಈ ದೇವಸ್ಥಾನವನ್ನು ವರಾಹಿ ಚಲನ ಚಿತ್ರಂ ನಿರ್ಮಾಣ ಸಂಸ್ಥೆಯ ಸಾಯಿ ಕೊರ್ರಪಟ್ಟು ನಿರ್ಮಾಣ ಮಾಡಿದ್ದಾರೆ.

ಇನ್ನು ಇವರಿಬ್ಬರ ಕೆಲಸದ ವಿಚಾರಕ್ಕೆ ಬರೋದಾದರೆ, ರಾಜಮೌಳಿ ಇನ್ನೂ ಹೆಸರಿಡದ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದರೆ, ಇತ್ತ ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣದ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
SS Rajamouli and Yash in Amrutheshwara temple pran pratishtha ceremony
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X