"ರಾಜಮೌಳಿ ಬುದ್ದಿವಂತ ನಿರ್ದೇಶಕನಲ್ಲ": ತೆಲುಗು ನಿರ್ದೇಶಕನ ವಿವಾದಾತ್ಮಕ ಹೇಳಿಕೆ
ಟಾಲಿವುಡ್‌ನ ಟಾಪ್ ನಿರ್ದೇಶಕರಲ್ಲಿ ತೇಜ ಕೂಡ ಒಬ್ಬರು. ಕಥೆ ಹಾಗೂ ಸ್ಟ್ರೀನ್ ಪ್ಲೇಯಿಂದಲೇ ಪ್ರೇಕ್ಷಕರನ್ನು ಗೆಲ್ಲುವ ನಿರ್ದೇಶಕ. ಒಂದು ಕಾಲದಲ್ಲಿ ಹೊಸ ನಟರನ್ನು ಪರಿಚಯಿಸಿ ಗೆದ್ದ ನಿರ್ದೇಶಕರಿವರು.
ಟಾಲಿವುಡ್‌ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿರೋ ತೇಜ ನೇರ ನುಡಿಗಳಿಗೂ ಅಷ್ಟೇ ಫೇಮಸ್. ಇತ್ತೀಚೆಗೆ ರಾಜಮೌಳಿ ಬಗ್ಗೆ ಈ ಸ್ಟಾರ್ ನಿರ್ದೇಶಕ ನೀಡಿರೋ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ತೇಜ 'ಬಾಹುಬಲಿ' ನಿರ್ದೇಶಕನಿಗೆ ಹೇಳಿದ್ದೇನು?

ತೇಜಾ ಸಿನಿಮಾಗಳಿಗೆ ಕ್ರೇಜ್
ಟಾಲಿವುಡ್‌ನ ಈ ಸ್ಟಾರ್ ನಿರ್ದೇಶಕ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಮೊದಲು ಕೆಲಸ ಆರಂಭಿಸಿದ್ದರು. ಆರ್‌ಜಿವಿ ಸಿನಿಮಾಗಳಿಗೆ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದರು. ಇವರ ಕೆಲಸ ಜನಪ್ರಿಯವಾಗುತ್ತಿದ್ದಂತೆ, ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಯಿತು. ಆ ಬಳಿಕ ನಿರ್ದೇಶನಕ್ಕೆ ಮರಳಿದ ತೇಜಾ 'ಚಿತ್ರಂ', 'ಜಯಂ', 'ನಿಜಂ', 'ಧೈರ್ಯಂ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅದ್ರೀಗ ಇವರ ಸಿನಿಮಾ ಆ ಮಟ್ಟಿಗೆ ಸಕ್ಸಸ್ ಕಂಡಿಲ್ಲ. ಈಗ ಅಹಿಂಸಾ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಎರಡೂ ಸಿನಿಮಾಗಳಿಗೆ ಸಾಮ್ಯತೆಯಿದೆ
'ಅಹಿಂಸಾ' ಸಿನಿಮಾದ ಪ್ರಚಾರದ ವೇಳೆ ತೇಜಾ ಅಚ್ಚರಿಯ ಕಮೆಂಟ್‌ಗಳನ್ನು ನೀಡಿದ್ದಾರೆ. ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ತೇಜ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. 'ಬಾಹುಬಲಿ' ಹಾಗೂ RRR ನಿರ್ದೇಶಕ ರಾಜಮೌಳಿ ಬಗ್ಗೆ ಅಚ್ಚರಿ ಕಮೆಂಟ್ ಮಾಡಿ ಸುದ್ದಿಯಾಗಿದ್ದಾರೆ. 'ಅಹಿಂಸಾ' ಸಿನಿಮಾದ ಪ್ರಚಾರದ ವೇಳೆ ತೇಜಗೆ 'ಅಹಿಂಸಾ' ಹಾಗೂ 'ಜಯಂ' ಎರಡೂ ಹತ್ತಿರವಾದಂತಿದೆ ಎಂದು ಪ್ರಶ್ನೆ ಮಾಡಿದ್ದರು. ಆಗ ತೇಜ ಎರಡು ಸಿನಿಮಾಗಳ ನಿರ್ದೇಶಕ ತಾನೇ ಆಗಿದ್ದರಿಂದ ಸಾಮ್ಯತೆ ಇರುತ್ತೆ ಎಂದು ಹೇಳಿದ್ದರು.

ರಾಜಮೌಳಿ ಸಿನಿಮಾಗಳಲ್ಲೂ ಹೋಲಿಕೆ ಇದೆ
ಇದೇ ಪ್ರಶ್ನೆಗೆ ಉತ್ತರಿಸುವಾಗ, "ಕೆಲವು ದೃಶ್ಯಗಳು ಅವರ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಇರುತ್ತೆ. ಸ್ಟಾರ್ ಡೈರೆಕ್ಟರ್ ರಾಜಮೌಳಿ ಸಿನಿಮಾಗಳಲ್ಲೂ ಒಂದೇ ಆಗಿರುತ್ತವೆ. ಅವರ ಆರಂಭದ ಸಿನಿಮಾದಿಂದ ಇಲ್ಲಿಯವರೆಗಿನ ಸಿನಿಮಾಗಳನ್ನು ನೋಡಿ ಎಲ್ಲದರಲ್ಲೂ ಒಂದೇ ರೀತಿಯ ಆ್ಯಕ್ಷನ್ ಎಮೋಷನ್ ಇರುತ್ತದೆ" ಎಂದು ಹೇಳಿದ್ದಾರೆ. ಹಾಗೇ "ರಾಜಮೌಳಿ ಅಷ್ಟೇ ಅಲ್ಲ. ಗೌತಮ್ ಮೆನನ್ ಸಿನಿಮಾಗಳೂ ಹಾಗೆ ಇರುತ್ತವೆ" ಎಂದು ನಿರ್ದೇಶಕ ತೇಜ ಕಿಡಿ ಹಾರಿಸಿದ್ದಾರೆ.
ಇವರೆಲ್ಲ ಬುದ್ದಿವಂತ ನಿರ್ದೇಶಕರಲ್ಲ
ಇಷ್ಟೇ ಅಲ್ಲದೆ 'ಪುಷ್ಪ' ನಿರ್ದೇಶಕ ಸುಕುಮಾರ್, 'ಬಾಹುಬಲಿ' ನಿರ್ದೇಶಕ ರಾಜಮೌಳಿ, ಬೋಯಪತಿ ಶ್ರೀನು, ವಿವಿ ವಿನಾಯಕ್ ಇವರೆಲ್ಲ ಬುದ್ದಿವಂತ ನಿರ್ದೇಶಕರಲ್ಲ. ಅವರೆಲ್ಲ ಯಶಸ್ವಿ ನಿರ್ದೇಶಕರು" ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕೆಲವರು ತೇಜಾ "ನೀವು ಬುದ್ದಿವಂತ ನಿರ್ದೇಶಕರಾಗಿದ್ದರೆ, ಇತ್ತೀಚೆಗೆ ಫ್ಲಾಪ್ ಸಿನಿಮಾಗಳೇಕೆ ಕೊಡುತ್ತಿದ್ದೀರಿ" ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











