ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ರಜೆ ಕೋರಿ ಪ್ರಿನ್ಸಿಪಾಲ್‌ಗೆ ಪತ್ರ ಬರೆದ ವಿದ್ಯಾರ್ಥಿ

ಅಭಿಮಾನಿಗಳ ಅಭಿಮಾನಕ್ಕೆ ಮಿತಿ ಎಲ್ಲಿದೆ? ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆಗಲಿ. ಹುಟ್ಟುಹಬ್ಬ ಬರಲಿ. ಅವರ ಮನೆಯಲ್ಲಿ ಸಂಭ್ರಮವಿರಲಿ. ಡೈ ಹಾರ್ಡ್ ಫ್ಯಾನ್ಸ್ ತಮ್ಮದೇ ಹುಟ್ಟುಹಬ್ಬವೆಂದು ಆಚರಿಸಿ ಸಂಭ್ರಮಿಸುತ್ತಾರೆ. ಕೆಲವೊಮ್ಮೆ ತಮ್ಮ ಫೇವರಿಟ್ ನಟನ ಸಿನಿಮಾ ನೋಡುವುದಕ್ಕೆ ರಜೆ ಕೊಡಿ ಅಂತ ಅಭಿಮಾನಿಗಳು ಪತ್ರ ಬರೆದಿದ್ದೂ ಇದೆ. ಆದರೆ, ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯೊಬ್ಬ ಹುಟ್ಟುಹಬ್ಬ ಆಚರಣೆ ಮಾಡಬೇಕು ರಜೆ ಕೊಡಿ ಅಂತ ಪತ್ರ ಬರೆದಿದ್ದಾನೆ.

Recommended Video

ಯಶ್ ಹುಟ್ಟುಹಬ್ಬ ಮಾಡ್ಬೇಕು ರಜೆ ಕೊಡಿ ಅಂತ ಪ್ರಿನ್ಸಿಪಾಲ್ ಗೆ ಪತ್ರ ಬರೆದ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನವಷ್ಟೇ ಬಾಕಿಯಿದೆ. ಆಗಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅದೇ ಒಂದು ವೇಳೆ ಕೊರೊನಾ ಹಾವಳಿ ಇರದೇ ಹೋಗಿದ್ದರೆ, ರಾಕಿ ಭಾಯ್ ಮನೆಯ ಮುಂದೆ ಹಬ್ಬವನ್ನೇ ಮಾಡಿಬಿಡುತ್ತಿದ್ದರು. ಆದರೆ, ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಆದರೂ, ಬಳ್ಳಾರಿಯ ಅಭಿಮಾನಿಯೊಬ್ಬ ರಜೆ ಕೋರಿ ಅಂತ ಪತ್ರ ಬರೆದಿದ್ದಾನೆ.

ಯಶ್ ಹುಟ್ಟುಹಬ್ಬ ಆಚರಿಸಲು ರಜೆ ಕೊಡಿ

ಯಶ್ ಹುಟ್ಟುಹಬ್ಬ ಆಚರಿಸಲು ರಜೆ ಕೊಡಿ

ಸೂಪರ್‌ಸ್ಟಾರ್ ಅಭಿಮಾನಿಗಳು ನಿಜಕ್ಕೂ ಕ್ರೇಜಿಯಾಗಿರುತ್ತಾರೆ. ಅವರ ಅಲೋಚನೆಗಳು, ಕ್ರಿಯೇಟಿವಿಗೆ ಸೂಪರ್‌ಸ್ಟಾರ್‌ಗಳೇ ಅಚ್ಚರಿ ಪಟ್ಟ ಅದೆಷ್ಟೋ ಉದಾಹರಣೆಗಳು ಇವೆ. ಅವರಂತೆ ಬಳ್ಳಾರಿಯ ಯಶ್ ಅಭಿಮಾನಿಯೊಬ್ಬ ರಾಕಿಂಗ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ತಾನು ಓದುತ್ತಿರುವ ಕಾಲೇಜಿನ ಪ್ರಿನ್ಸಿಪಾಲ್‌ಗೆ ಪತ್ರ ಬರೆದಿದ್ದಾರೆ. ಕೆ ಶಿವಕುಮಾರ್ ಎಂಬ ವಿದ್ಯಾರ್ಥಿ ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್‌ಚಂದ್ರ ಅಗರ್ವಾಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ ಕಾಂ ಮೂರನೇ ಸೆಮಿಸ್ಟರ್ ಓದುತ್ತಿದ್ದಾನೆ. ಈತನೇ ಹುಟ್ಟುಹಬ್ಬಕ್ಕೆ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾನೆ.

24 ಗಂಟೆ ಟ್ರೆಂಡ್‌ನಲ್ಲಿ ಅಭಿಮಾನಿ ಭಾಗಿ

24 ಗಂಟೆ ಟ್ರೆಂಡ್‌ನಲ್ಲಿ ಅಭಿಮಾನಿ ಭಾಗಿ

ಜನವರಿ 8ನೇ ತಾರೀಕಯ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳು 24 ಗಂಟೆಗಳ ಕಾಲ ಯಶ್ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಭಾಗವಹಿಸಬೇಕು. ಹೀಗಾಗಿ ಜನವರಿ 7ನೇ ತಾರೀಕು ರಜೆ ಕೊಡಿ ಎಂದು ಪ್ರಿನ್ಸಿಪಾಲ್‌ಗೆ ಮನವಿ ಮಾಡಿಕೊಂಡಿದ್ದಾನೆ. ಇದರೊಂದಿಗೆ ತನ್ನ ಸ್ನೇಹಿತರಿಗೂ ರಜೆಯನ್ನು ನೀಡುವಂತೆ ಕೇಳಿಕೊಂಡಿದ್ದು, ನಾವೆಲ್ಲರೂ ಸೇರಿ ಒಟ್ಟಿಗೆ ಮನೆಯಲ್ಲಿ ಯಶ್ ಹುಟ್ಟುಹಬ್ಬವನ್ನು ಆಚರಿಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾನೆ.

ಪ್ರಿನ್ಸಿಪಾಲರಿಗೂ ವಿಶ್ ಮಾಡಲು ಕೋರಿಕೆ

ಪ್ರಿನ್ಸಿಪಾಲರಿಗೂ ವಿಶ್ ಮಾಡಲು ಕೋರಿಕೆ

ಜನವರಿ 7ನೇ ತಾರೀಕು ಸಂಜೆ 7 ಗಂಟೆಯಿಂದ ಜನವರಿ 8ನೇ ತಾರೀಕು ಸಂಜೆ 7 ಗಂಟೆಯವರೆಗೂ ಯಶ್ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಯಶ್ ಫ್ಯಾನ್ಸ್ ಹಬ್ಬ ಮಾಡಲು ಮುಂದಾಗಿದ್ದಾರೆ. ಈ ಟ್ರೆಂಡ್‌ನಲ್ಲಿ ಭಾಗವಹಿಸಲು ನಿರ್ಧರಿಸಿರುವ ಅಭಿಮಾನಿ ಪ್ರಿನ್ಸಿಪಾಲರಿಗೂ ಯಶ್‌ಗೆ ವಿಶ್ ಮಾಡುವಂತೆ ರಜೆ ಕೋರಿ ಬರೆದು ಅರ್ಜಿಯಲ್ಲಿ ಕೇಳಿಕೊಂಡಿದ್ದಾನೆ. ಯಶ್ ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲೇ ಬಳ್ಳಾರಿಯ ಅಭಿಮಾನಿ ಸದ್ಯ ಟ್ರೆಂಡಿಂಗ್‌ನಲ್ಲಿದ್ದಾನೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಯಶ್

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಯಶ್

ಕೊರೊನಾ ಹಾಗೂ ಓಮಿಕ್ರಾನ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಗಳು ಎಲ್ಲಿದ್ದೀರೋ ಅಲ್ಲಿಂದಲೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಂದು ಯಶ್ ಈ ಹಿಂದೆನೇ ಹೇಳಿಕೊಂಡಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಇನ್ನೊಂದು ಕಡೆ 'ಕೆಜಿಎಫ್ 2' ಸಿನಿಮಾದ ಟೀಸರ್, ಟ್ರೈಲರ್ ಕೂಡ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಯಶ್ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಆವರಿಸಿದೆ.

More from Filmibeat

English summary
Student and Yash fan from Bellary wrote leave letter to principal for Rocking Star Birthday Celebration. If principal granted leave he and is friends will celebrate Yash Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X