"ಕರ್ನಾಟಕದಲ್ಲಿ ಜನರು ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್ ಅಂತಾರೆ.. ನೀನು ಒಂದು ಗ್ಯಾಂಗ್ ಕಟ್ಟು ಬ್ರದರ್": ರಾಜ್ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ನಟನಾಗಿ ಅಷ್ಟೇ ಅಲ್ಲ ನಿರ್ಮಾಪಕನಾಗಿಯೂ ಗೆದ್ದಿದ್ದಾರೆ. ಮೊದಲ ಬಾರಿಗೆ ತಮ್ಮ ಲಾಫಿಂಗ್ ಬುದ್ದ ಸಂಸ್ಥೆಯಿಂದ ಬ್ಲಾಕ್‌ ಬಸ್ಟರ್ ಸಿನಿಮಾವನ್ನು ಕೊಟ್ಟಿದ್ದಾರೆ. 'ಸು ಫ್ರಮ್ ಸೋ' ಕರ್ನಾಟಕದ ಥಿಯೇಟರ್‌ಗಳಲ್ಲಿ ಎರಡನೇ ವಾರದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ತೆರೆಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಭಾರತದಾದ್ಯಂತ ಈ ಸಿನಿಮಾಗೆ ಬೇಡಿಕೆನೂ ಹೆಚ್ಚಾಗಿದೆ.

ಹೀಗಾಗಿ ರಾಜ್ ಬಿ ಶೆಟ್ಟಿ ಈಗ ನಟನಾಗಿ, ಹೀರೋ ಆಗಿ ಎಂಜಾಯ್ ಮಾಡಿದ್ದಕ್ಕಿಂತ ನಿರ್ಮಾಪಕನಾಗಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಇದೇ ಖುಷಿಯಲ್ಲಿ ಕೆಲವು ಯೂಟ್ಯೂಬ್‌ ಚಾನೆಲ್‌ಗಳಿಗೆ ರಾಜ್ ಬಿ ಶೆಟ್ಟಿ ಸಂದರ್ಶನ ನೀಡಿದ್ದು, ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅದರಲ್ಲೂ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ 'ಶೆಟ್ಟಿ ಮಾಫಿಯಾ', 'ಶೆಟ್ಟಿ ಗ್ಯಾಂಗ್' ಟೀಕೆಗಳ ಬಗ್ಗೆ ಮಾತಾಡಿದ್ದಾರೆ.

Su from So movie producer Raj B Shetty said people call them Shetty Mafia Shetty gang

ಈ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಜೊತೆಗಿನ ಸಂಬಂಧದ ಬಗ್ಗೆನೂ ಓಪನ್ ಆಗಿ ಮಾತಾಡಿದ್ದಾರೆ. ಇಷ್ಟೇ ಅಲ್ಲದೆ, ತಾನು ರಕ್ಷಿತ್ ಶೆಟ್ಟಿಯ ಫ್ಯಾನ್ ಅನ್ನೋದನ್ನು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ರಾಜ್ ಬಿ ಶೆಟ್ಟಿ 'ಶೆಟ್ಟಿ ಮಾಫಿಯಾ' ಹಾಗೂ 'ಶೆಟ್ಟಿ ಗ್ಯಾಂಗ್' ಟೀಕೆಗಳ ಬಗ್ಗೆ ಹೇಳಿದ್ದೇನು? ರಕ್ಷಿತ್ ಶೆಟ್ಟಿ ಬಗ್ಗೆ ಏನಂದ್ರು? ತಿಳಿಯುವುದಕ್ಕೆ ಮುಂದೆ ಓದಿ.

'ಸು ಫ್ರಮ್ ಸೋ' ರಾಜ್ ಬಿ ಶೆಟ್ಟಿಗೆ ನಿರೀಕ್ಷೆಗೂ ಮೀರಿದ ಸಕ್ಸಸ್ ಕೊಟ್ಟಿದೆ. ಕರ್ನಾಟಕದಲ್ಲಿ ರಿಲೀಸ್‌ ಆಗಿ ಎರಡು ವಾರ ಆಗಿದ್ದರೂ ಇನ್ನೂ ಥಿಯೇಟರ್‌ನಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮೂರನೇ ವಾರದತ್ತ ಮುನ್ನುಗುತ್ತಿರುವ ಸಿನಿಮಾಗೆ ಪ್ರೇಕ್ಷಕರ ಸಂಖ್ಯೆ ಹರಿದು ಬರುತ್ತಿದೆ. ಇನ್ನೊಂದು ಕಡೆ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಹೀಗಾಗಿ ರಾಜ್‌ ಬಿ ಶೆಟ್ಟಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ಸಂದರ್ಶನ ನೀಡಿದ್ದು, ಶೆಟ್ಟಿ ಗ್ಯಾಂಗ್ ಕಮೆಂಟ್ ಬಗ್ಗೆ ಮಾತಾಡಿದ್ದಾರೆ.

"ಕರ್ನಾಟಕದಲ್ಲಿ ಜನರು ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್ ಅಂತೆಲ್ಲ ಹೇಳುತ್ತಾರೆ. ನಾನು ಏನು ಹೇಳುತ್ತೇನೆ ಅಂದರೆ, ನಿನ್ನೊಂದು ಗ್ಯಾಂಗ್ ಕಟ್ಟು ಬ್ರದರ್. ನೀನು ಒಂಟಿಯಾಗಿ ಸುತ್ತಾಡಬೇಕು ಅಂತ ನಿನ್ನನ್ನು ಯಾರು ತಡೆದಿದ್ದಾರೆ. ನಿನಗೂ ಹೆಸರು, ಹಣ ಎಲ್ಲವೂ ಬೇಕು. ಆದರೆ, ನೀನು ಯಾರೊಂದಿಗೂ ಸೇರುವುದಿಲ್ಲ. ಅದು ನಿನ್ನ ಸಮಸ್ಯೆ. ಅದು ನಮ್ಮ ಸಮಸ್ಯೆ ಅಲ್ಲ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಇದೇ ವೇಳೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಯೊಂದಿಗಿನ ಸ್ನೇಹದ ಬಗ್ಗೆನೂ ರಾಜ್ ಬಿ ಶೆಟ್ಟಿ ಇಂಟ್ರೆಸ್ಟಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. "ನಮ್ಮ ನಡುವೆ ಕಾಂಪಿಟೇಷನ್ ಇಲ್ಲ. ಯಾರು ಮೊದಲು, ಯಾರು ಸೆಕೆಂಡ್ ಅಂತಿಲ್ಲ. ರಕ್ಷಿತ್ ಶೆಟ್ಟಿ ಬೆಳ್ಳಗ್ಗೆ ಫೋನ್ ಮಾಡಿದ್ದರು. ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದರು. ಈ ಇಂಟಸ್ಟ್ರಿಯಲ್ಲಿ ಭ್ರಷ್ಟರಾಗಿರದೇ ಇದ್ದವರು ಕೆಲವರು ಮಾತ್ರ. ಇವರೊಂದಿಗೆ ನಾನು ಭ್ರಷ್ಟಾಚಾರವಿಲ್ಲದ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ನಾನು ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ರಕ್ಷಿತ್ ಶೆಟ್ಟಿಯ ದೊಡ್ಡ ಫ್ಯಾನ್ ಆಗಿದ್ದೆ. ಇದು ನಮ್ಮ ಸ್ನೇಹ." ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

ಇದರ ಜೊತೆಗೆ ಸ್ಟಾರ್‌ಗಳಿಗೆ ತನ್ನಿಂದ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ತನಗೆ ಅಷ್ಟೊಂದು ತಾಳ್ಮೆ ಇಲ್ಲ ಎಂದೂ ಹೇಳಿಕೊಂಡಿದ್ದಾರೆ.

More from Filmibeat

English summary
Su from So movie producer Raj B Shetty said people call them Shetty Mafia, Shetty gang.
Read more about: raj b shetty karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X