'ಬಾಹುಬಲಿ' ಮುಂದೆ ಸೆಟ್ಟೆದು ನಿಂತಿದ್ದ 'ರಂಗಿತರಂಗ'; ಇತಿಹಾಸ ನೆನಪಿಸಿದ 'ಸು ಫ್ರಮ್ ಸೋ'!

ಕೊನೆಗೂ ಕನ್ನಡ ಚಿತ್ರರಂಗಕ್ಕೆ ಅಂಟಿದ್ದ ವಕ್ರದೃಷ್ಟಿ ಹೋದಂತೆ ಕಾಣುತ್ತಿದೆ. ಒಂದರ ಹಿಂದೊಂದು ಸಿನಿಮಾಗಳು ಹಿಟ್ ಲಿಸ್ಟ್ ಸೇರುತ್ತಿವೆ. 'ಮಾದೇವ'ದಿಂದ ಶುರುವಾಗಿದ್ದ ಗೆಲುವಿನ ಪರ್ವ 'ಎಕ್ಕ', 'ಜೂನಿಯರ್' ನಿಂದ ಮುಂದುವರೆದು ಈಗ 'ಸು ಫ್ರಮ್ ಸೋ'ವರೆಗೂ ಬಂದು ನಿಂತಿದೆ. ಸಿನಿಮಾದಲ್ಲಿ ಕಂಟೆಂಟ್ ಕಿಂಗ್ ಅನ್ನೋದನ್ನು ಮತ್ತೊಮ್ಮೆ 'ಸು ಫ್ರಮ್ ಸೋ' ಸಾಬೀತು ಮಾಡುತ್ತಿದೆ. ಒಂದೇ ದಿನ ಮತ್ತೆ ಅಕ್ಕ ಪಕ್ಕದವರೂ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿದೆ.

ಹಾಗಂತ ಹೀಗಾಗುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಸಾಕಷ್ಟು ಚಮತ್ಕಾರಗಳು ನಡೆದಿವೆ. ಅದರಲ್ಲಿ 'ಬಾಹುಬಲಿ' ಎದುರು 'ರಂಗಿತರಂಗ' ಗೆದ್ದಿದ್ದು ಕೂಡ ಒಂದು ಒಳ್ಳೆಯ ಉದಾಹರಣೆಯಾಗುತ್ತೆ. 'ರಂಗಿತರಂಗ' ಸಿನಿಮಾ ಕೂಡ ಅಪ್ಪಟ ಹೊಸಬರ ಸಿನಿಮಾ ಆಗಿತ್ತು. ಕಂಟೆಂಟ್‌ ಅನ್ನೇ ನಂಬಿಕೊಂಡು 'ಬಾಹುಬಲಿ' ಅಂತಹ ದೈತ್ಯ ಸಿನಿಮಾ ಮುಂದೆ ಅಖಾಡಕ್ಕೆ ಇಳಿದಿತ್ತು. ಮುಂದೆ ಸೃಷ್ಟಿಯಾಗಿದ್ದು ಇತಿಹಾಸ.

Su From So movie repeats Bahubali Rangitaranga history

ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಅಂತಹ ಸಿನಿಮಾದ ಮುಂದೆ ಚಿತ್ರರಂಗಕ್ಕೆ ಪರಿಚಯವೇ ಇರದ 'ರಂಗಿತರಂಗ' ಟೀಮ್ ಫೈಟ್ ಮಾಡೋದು ಅಂದರೇನು? ಹೀಗಂದುಕೊಂಡವರ ನಿದ್ದೆ ಕೆಡಿಸಿತ್ತು ಈ ಸಿನಿಮಾ. ಈಗ ಮತ್ತೆ ಇಂತಹದ್ದೇ ಇತಿಹಾಸವನ್ನು ನಿರ್ಮಾಣ ಮಾಡುತ್ತಿದೆ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ'. ಪರ ಭಾಷೆಯ ಬಿಗ್ ಬಜೆಟ್ ಸಿನಿಮಾದ ಮುಂದೆ ತೆರೆಕಂಡು ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ.

'ಬಾಹುಬಲಿ' Vs 'ರಂಗಿತರಂಗ'

ಭಾರತೀಯ ಚಿತ್ರರಂಗದಲ್ಲಿ 'ಬಾಹುಬಲಿ' ಹೊಸ ಟ್ರೆಂಡ್ ಅನ್ನು ಹುಟ್ಟಾಕಿದ ಸಿನಿಮಾ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ಗೆ ಕಮರ್ಷಿಯಲ್ ಟಚ್ ಕೊಟ್ಟ ಸಿನಿಮಾವಿದು. ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿಗೆ ಹೊಸ ಇಮೇಜ್ ಕೊಟ್ಟಿತ್ತು. ನೂರಾರು ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದಲ್ಲಷ್ಟೇ ಅಲ್ಲದೆ, ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಮುಂದೆ ಕನ್ನಡದ ಸ್ಟಾರ್‌ಗಳ ಸಿನಿಮಾಗಳೇ ರಿಲೀಸ್‌ಗೆ ಹಿಂದೇಟು ಹಾಕಿದ್ದವು. ಆ ವೇಳೆ ಹೊಸಬರ ಸಿನಿಮಾ 'ರಂಗಿತರಂಗ' ರಿಲೀಸ್ ಆಗಿತ್ತು.

ಹಾರರ್ ಕಮ್ ಸಸ್ಪೆನ್ಸ್ ಸಿನಿಮಾ 'ರಂಗಿತರಂಗ' ಅದಾಗಲೇ ಟ್ರೈಲರ್‌ನಿಂದ ಗಮನ ಸೆಳೆದಿತ್ತು. ನಿರೂಪ್ ಭಂಡಾರಿ, ಅನೂಪ್ ಭಂಡಾರಿ ಸಹೋದರರ ಈ ಸಿನಿಮಾ 'ಬಾಹುಬಲಿ' ಎದುರು ರಿಲೀಸ್ ಆಗಿತ್ತು. ಆಗ ಎಲ್ಲರ ಗಮನ 'ಬಾಹುಬಲಿ' ಮೇಲೆನೇ ಇತ್ತು. ಈ ಗ್ಯಾಪ್‌ನಲ್ಲಿ 'ರಂಗಿತರಂಗ' ಸಿನಿಮಾ ನಿಧಾನವಾಗಿ ಕನ್ನಡಿಗರಿಗೆ ತಲುಪುವುದಕ್ಕೆ ಶುರುವಾಗಿತ್ತು. ಈ ಸ್ಮಾಲ್ ಬಜೆಟ್ ಸಿನಿಮಾ ಬಾಹುಬಲಿ ಮುಂದೆ ಕೇವಲ ಕರ್ನಾಟಕದಲ್ಲಿಯೇ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇಂದಿಗೆ ಅದು ಮೂವತ್ತು ಕೋಟಿಗೆ ಸಮ ಎನ್ನಬಹುದು.

Su From So movie repeats Bahubali Rangitaranga history

ಹರಿ ಹರ ವೀರಮಲ್ಲು ಮಣಿಸಿದ 'ಸು ಫ್ರಮ್ ಸೋ'

ಈಗ ಅದೇ ಇತಿಹಾಸವನ್ನು ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಸಿನಿಮಾ ಮಾಡುತ್ತಿದೆ. ಪವನ್ ಕಲ್ಯಾಣ್ ಐದು ವರ್ಷಗಳ ಬಳಿಕ ನಟಿಸಿದ 'ಹರಿ ಹರ ವೀರಮಲ್ಲು' ಸಿನಿಮಾ ಕರ್ನಾಟಕದಲ್ಲೂ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಜೊತೆಗೆ ಹೊಸಬರ ಸಿನಿಮಾ 'ಸು ಫ್ರಮ್ ಸೋ' ಕೂಡ ಬಿಡುಗಡೆ ಆಯ್ತು. ಹಂಟ್ರೆಡ್‌ ಪರ್ಸೆಂಟ್ ಕಾಮಿಡಿ ಕಂಟೆಂಟ್ ಇರುವ ಈ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡರು. ರಿಲೀಸ್ ಆದ ಒಂದೇ ದಿನಕ್ಕೆ ಸಿನಿಮಾ ಶೋಗಳು ದುಪ್ಪಟ್ಟಾಗಿವೆ.

'ಸು ಫ್ರಮ್ ಸೋ' ಸಿನಿಮಾಗೆ ಮೊದಲ ದಿನವೇ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಎರಡನೇ ದಿನದಿಂದ ಶೋಗಳ ಸಂಖ್ಯೆ ಏರಿಕೆಯಾಗಿದೆ. ಇಂದು (ಜುಲೈ 27) ಭಾನುವಾರ ಕೂಡ ಬೆಳಗ್ಗೆ 6 ಗಂಟೆ ಹಾಗೂ 10 ಗಂಟೆಯ ಶೋಗಳನ್ನು ಮತ್ತೆ ಏರಿಸಲಾಗಿದೆ. ಕರ್ನಾಟಕದಾದ್ಯಂತ ಸುಮಾರು 263 ಶೋಗಳನ್ನು ಏರಿಸಲಾಗಿದೆ. ಇನ್ನು 10 ಗಂಟೆ ಬಳಿಕ 290 ಶೋಗಳು ಏರಿಕೆಯಾಗಿವೆ ಎನ್ನುತ್ತಿದೆ ವಿತರಕರ ವಲಯ. ಇಷ್ಟೇ ಅಲ್ಲದೆ 'ಹರ ಹರ ವೀರಮಲ್ಲು' ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

More from Filmibeat

English summary
Su From So movie repeats Bahubali-Rangitaranga history. Here is the details.
Read more about: raj b shetty sandalwood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X