ಕಾಂಚನಾ.. ಕಲ್ಪನಾ ಆಗಿದ್ದು.. ಕಲ್ಪನಾ ಹೋಗಿ ಸುಲೋಚನಾ ಆಗಿದ ಇಂಟ್ರೆಸ್ಟಿಂಗ್ ಸ್ಟೋರಿ ಬಗ್ಗೆ ಗೊತ್ತೇ?

'ಸು ಫ್ರಮ್ ಸೋ' ಇಡೀ ಇಂಡಿಯಾದ ಗಮನ ಸೆಳೆದಿದೆ. ಕನ್ನಡದ ಮತ್ತೊಂದು ಸಿನಿಮಾವನ್ನು ಭಾರತದಾದ್ಯಂತ ಹೊಗಳುತ್ತಿದ್ದಾರೆ. ಸಿನಿಮಾ ಆರಂಭದಿಂದ ಕೊನೆಯವರೆಗೂ ನಗಿಸೋ 'ಸು ಫ್ರಮ್ ಸೋ'ಗೆ ಪ್ರತ್ಯೇಕ ಫ್ಯಾನ್ ಹುಟ್ಟಿಕೊಂಡಿದ್ದಾರೆ. ಸ್ಟಾರ್‌ಗಳೇ ಇಲ್ಲದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 60 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ಇತಿಹಾಸವನ್ನೇ ಬರೆದಿದೆ.

ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಿದೆ. ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಿದರೆ, ಬಾಕ್ಸಾಫೀಸ್‌ನಲ್ಲಿ ಗೆಲ್ಲಬಹುದು ಎನ್ನುವ ಫಾರ್ಮೂಲವನ್ನು ಮತ್ತೆ ಸಾಬೀತು ಮಾಡಿ ತೋರಿಸಿದೆ. ಕೇವಲ ಕನ್ನಡ ಅಷ್ಟೇ ಅಲ್ಲ. ಮಲಯಾಳಂ ಹಾಗೂ ತೆಲುಗಿನಲ್ಲಿಯೂ ಈ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ.

su-from-so-scene-where-the-word-kalpana-is-altered-to-kanchana-and-finally-to-sulochana

ಇಷ್ಟೊಂದು ಸದ್ದು ಮಾಡುತ್ತಿರುವ 'ಸು ಫ್ರಮ್ ಸೋ' ಸಿನಿಮಾದಲ್ಲೊಂದು ಇಂಟ್ರೆಸ್ಟಿಂಗ್ ಸ್ಟೋರಿಯಿದೆ. ಸಿನಿಮಾ ಟೈಟಲ್‌ನಲ್ಲಿ ಸುಲೋಚನಾ ಬಂದ್ಮೇಲೆ ಕಾಂಚನಾ ಅಂತ ಇದ್ದ ಡೈಲಾಗ್ ಕಲ್ಪನಾ ಆಗಿದ್ದು, ಬಳಿಕ ಕಲ್ಪನಾ ಅನ್ನೋದು ಸುಲೋಚನಾ ಆಗಿ ಬದಲಾಗಿತ್ತು. ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೆಲುಗು ವರ್ಷನ್ ಬಿಡುಗಡೆ ವೇಳೆ ನಿರ್ದೇಶಕ ಜೆಪಿ ತುಮಿನಾಡು ರಿವೀಲ್ ಮಾಡಿದ್ದಾರೆ.

ಕಲ್ಪನಾ ಸುಲೋಚನಾ ಆಗಿದ್ದೀಗೆ?

"ಕಲ್ಪನಾ ಸಿನಿಮಾ ಅಂದರೆ, ಅದು ಉಪೇಂದ್ರ ಸರ್ ಅವರ ಸಿನಿಮಾ. ಡೋರ್ ಓಪನ್ ಆದಾಗ ಎದುರಿಗೆ ಇರುವ ಜನರಿಗೆ ಭಯ ಇರುತ್ತೆ. ಆಗ ಅವರಿಗೆ ಕಲ್ಪನಾ ಅಂತ ಹೇಳಿದ್ದು ಗೊತ್ತಾಗುವುದಿಲ್ಲ. ಹೀಗಾಗಿ ಅವರಿಗೆ ಕೇಳಿದ್ದು ನಾ ಮಾತ್ರ. ಬಸ್ಮ ಎಲ್ಲ ತೆಗೆದುಕೊಂಡು ಹೋಗಿದ್ದ ವಯಸ್ಸಾದವರು ಕಲ್ಪನಾ ಅನ್ನೋದನ್ನು ಸುಲೋಚನಾ ಅಂತ ಅಂದುಕೊಳ್ಳುತ್ತಾರೆ. ಈ ಸೀನ್ ಅನ್ನು ಮಾಡುವಾಗಲೇ ತುಂಬಾನೇ ಎಂಜಾಯ್ ಮಾಡಿದ್ದೇವೆ." ಎಂದು ನಿರ್ದೇಶಕ ಜೆಪಿ ತುಮಿನಾಡ್ ಹೇಳಿಕೊಂಡಿದ್ದಾರೆ.

ಕಾಂಚನಾ ಕಲ್ಪನಾ ಆಗಿ ಬದಲಾಗಿದ್ದೇಗೆ?

"ಕಲ್ಪನಾ ಅನ್ನೋದು ನಮಗೆ ಗೊತ್ತಿರಲಿಲ್ಲ. ಮೊದಲು ತಮಿಳಿನ ಕಾಂಚನಾ ಸಿನಿಮಾವನ್ನು ನೋಡಿದ್ವಿ. ಆ ಡೈಲಾಗ್‌ನಲ್ಲಿ ಕಾಂಚನಾ ಬರಬೇಕಿತ್ತು. ನಾವು ಸ್ಕ್ರಿಪ್ಟ್ ಬರೆಯುವಾಗ ಕಾಂಚನಾ ಅಂತಲೇ ಇತ್ತು. ಶೂಟಿಂಗ್‌ಗೆ ಹೋಗುವಾಗ ಇದು ಕನ್ನಡದಲ್ಲಿ ಕಾಂಚನಾ ಅಲ್ವಲ್ಲ. ಇದು ಕಲ್ಪನಾ ಅಂತ ಆಗ ಗೊತ್ತಾಯ್ತು. ಮತ್ತೆ ಕಲ್ಪನಾಗೂ ಸುಲೋಚನಾಗೂ ತುಂಬಾನೇ ಹತ್ತಿರವಿತ್ತು. ಆಗ ಕಾಂಚನಾವನ್ನು ತೆಗೆದು ಕಲ್ಪನಾ ಅಂತ ಮಾಡಿದ್ವಿ." ಎಂದು ಜೆಪಿ ತುಮಿನಾಡ್ ಹೇಳಿದ್ದಾರೆ.

su-from-so-scene-where-the-word-kalpana-is-altered-to-kanchana-and-finally-to-sulochana

ರವಿಯಣ್ಣನ ಕೆನ್ನೆಗೆ ರಿಯಲ್ ಏಟು

"ನನ್ನ ಹಿಂದಿನಿಂದ ಶೂಟ್ ಮಾಡುವಾಗ ಆ ಸೀನ್‌ನಲ್ಲಿ ಜಪಿ ತುಮಿನಾಡ್ ನನಗೆ ಹೊಡೆದಿರಲಿಲ್ಲ. ಅದೇ ನನ್ನ ಮುಂದೆ ಕ್ಯಾಮರಾ ಬಂದಾಗ, ನೀವು ನನಗೆ ನೇರವಾಗಿ ಹೊಡೆಯಿರಿ. ಇಲ್ಲಾ ಅಂದರೆ, ನನಗೆ ರಿಯಾಕ್ಷನ್ ಬರುವುದಿಲ್ಲ ಎಂದು ಹೇಳಿದೆ. ಅವರು ಹೇಗೆ ಹೊಡೆದರು ಅಂದರೆ, ನನಗೆ ಎಚ್ಚರನೇ ತಪ್ಪುವಂತಾಗಿತ್ತು. ಅವರು ಹೊಡೆದ ಏಟಿಗೆ ರಿಯಾಕ್ಷನ್ ಸಿಕ್ಕಿತ್ತು. ಅವರಿಗೆ ಹೊಡೆಯುವ ಹಕ್ಕು ಇದೆ. ಯಾಕಂದ್ರೆ, ಅವರು ಅಂತಹ ಪಾತ್ರವನ್ನು ನನಗೆ ಕೊಟ್ಟಿದ್ದರು. ಅದಕ್ಕಾಗಿ ನನಗೆ ಖುಷಿಯಿದೆ." ಎಂದು ರವಿಯಣ್ಣ ಪಾತ್ರದಲ್ಲಿ ಮಿಂಚಿರುವ ಶನೀಲ್ ಗೌತಮ್ ಹೇಳಿದ್ದಾರೆ.

ಭಾನು ಪಾತ್ರ ಎಂಟ್ರಿ ಹೇಗಾಯ್ತು?

ಹಾಗೇ 'ಸು ಫ್ರಮ್ ಸೋ' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ಭಾನು ಪಾತ್ರ ಹುಟ್ಟಿದ್ದು ಹೇಗೆ ಎಂದೂ ಹೇಳಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ 'ಸುಲೋಚನಾ ಫ್ರಮ್ ಸೋಮೇಶ್ವರ' (ಸು ಫ್ರಮ್ ಸೋ) ಅಂತ ಟೈಟಲ್ ಇಟ್ಟಾಗ ನಿರ್ದೇಶಕ ಜೆಪಿ ತುಮಿನಾಡ್ ಸುಲೋಚನಾ ಮನೆಯನ್ನು ಹುಡುಕುವುದಕ್ಕೆ ಶುರು ಮಾಡಿದ್ದರು. ಅವರ ಮನೆಯಲ್ಲಿ ಯಾರಿರಬಹುದು? ಎಲ್ಲಿಯ ಪರಿಸ್ಥಿತಿ ಏನು? ಅನ್ನೋ ಕಲ್ಪನೆಗೆ ಬಿದ್ದರು. ಆಗ ಹುಟ್ಟಿಕೊಂಡಿದ್ದೇ ಭಾನು ಪಾತ್ರ ಎಂದು ಹೇಳಿದ್ದಾರೆ.

More from Filmibeat

English summary
The pivotal scene in the film Su from So shows the transformation of the word Kanchana to Kalpana and then to Sulochana, emphasising its importance in the narrative.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X