ಡಿ ಕೆ ರವಿ ಅಕಾಲಿಕ ಮರಣಕ್ಕೆ ಚಿತ್ರೋದ್ಯಮದ ಪ್ರತಿಕ್ರಿಯೆ

ಐಎಎಸ್ ಅಧಿಕಾರಿ ಡಿ ಕೆ ರವಿ ಅನುಮಾನಾಸ್ಪದ ಸಾವಿಗೆ ನಾಡಿನ ಜನತೆ ಕಂಬನಿ ಮಿಡಿಯುತ್ತಿರುವುದರ ಜೊತೆಗೆ, ಕೇಸನ್ನು ಸಿಬಿಐಗೆ ವರ್ಗಾಯಿಸಬೇಕೆನ್ನುವ ಕೂಗೂ ಮುಗಿಲು ಮುಟ್ಟಿದೆ.

ಕನ್ನಡ ಚಿತ್ರೋದ್ಯಮದ ಅನ್ನದಾತರು 'ಡಿ ಕೆ ರವಿ' ಟೈಟಲಿಗೆ ವಾಣಿಜ್ಯ ಮಂಡಳಿ ಬಾಗಿಲು ಬಡಿಯುತ್ತಿದ್ದರೆ, ಅವರ ದುರಂತ ಸಾವಿಗೆ ಸೆಲೆಬ್ರಿಟಿಗಳು ತೀವ್ರ ದುಃಖ ವ್ಯಕ್ತ ಪಡಿಸಿದ್ದಾರೆ. (ಡಿಕೆ ರವಿ ಟೈಟಲಿಗೆ ನೂಕುನೂಗ್ಗಲು)

ಪುನೀತ್ ತನ್ನ ನಲವತ್ತನೇ ಹುಟ್ಟುಹಬ್ಬದ ನಡುವೆ ಶಿವಣ್ಣ ಮತ್ತು ಚಿತ್ರೋದ್ಯಮದಕ್ಕೆ ಸಂಬಂಧ ಪಟ್ಟವರ ಜೊತೆಗೂಡಿ ಸದಾಶಿವನಗರದ ಮನೆಯಲ್ಲಿ ಎರಡು ನಿಮಿಷದ ಮೌನಾಚರಣೆ ಮಾಡುವ ಮೂಲಕ ಪ್ರಾಮಾಣಿಕ ಅಧಿಕಾರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಚಿತ್ರೋದ್ಯಮದ ಹಲವರು ಡಿ ಕೆ ರವಿ ಸಾವಿಗೆ ಶಾಕ್ ಜೊತೆ ತೀವ್ರ ನೋವು ತೋಡಿಕೊಂಡಿದ್ದಾರೆ. ಸಾಮಾಜಿಕ ತಾಣದಲ್ಲಿ ಸೆಲೆಬ್ರಿಟಿಗಳು ತಮ್ಮ ವಿಷಾದವನ್ನು ವ್ಯಕ್ತ ಪಡಿಸಿಕೊಂಡಿದ್ದು ಹೀಗೆ..

ಅನುಪಮ್ ಖೇರ್

ಅನುಪಮ್ ಖೇರ್

ಡಿಕೆ ರವಿ ಸಾವಿಗೆ ಕಾರಣರಾದವರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಲೇ ಬೇಕು. ಕರ್ನಾಟಕ ಸರಕಾರ ಈ ಕೇಸನ್ನು ಸಿಬಿಐಗೆ ಹಸ್ತಾಂತರಿಸಬೇಕು. ಈ ಅಧಿಕಾರಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗದೇ ಇದ್ದಲ್ಲಿ ಅದು ದೇಶದ ಅತಿದೊಡ್ದ ದುರಂತ.

ದರ್ಶನ್ ತೂಗುದೀಪ

ಐಎಎಸ್ ಅಧಿಕಾರಿ ರವಿ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದೇನೆ. ರವಿಯವರ ಸಾವು ದೇಶಕ್ಕಾದ ಅತಿದೊಡ್ಡ ನಷ್ಟ.

ತ್ರಿಷಾ ಕೃಷ್ಣನ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ನಾಯಕಿಯಾಗಿ ಪವರ್ ಸ್ಟಾರ್ ಚಿತ್ರದಲ್ಲಿ ನಟಿಸಿದ್ದ ತ್ರಿಷಾ ಕೃಷ್ಣನ್, ಡಿಕೆ ರವಿ ಸಾವಿಗೆ ಟ್ವೀಟ್ ಮಾಡಿದ್ದು ಹೀಗೆ...

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗ

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗ

ಫೇಸ್ ಬುಕ್ ನಲ್ಲಿ : ಮನಕಲಕುವ ದೃಶ್ಯ. ಈ ಸಾವು ನ್ಯಾಯವೇ? ಡಿ ಕೆ ರವಿಯವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ. ಈ ಪ್ರಕರಣವನ್ನು ಸಿಬಿಐ ಗೆ ವಹಿಸಲು ಆಗ್ರಹಿಸೋಣ.

ನಟಿ ಸಂಜನಾ

ನಟಿ ಸಂಜನಾ ಟ್ವೀಟ್ ಮಾಡಿದ್ದು ಹೀಗೆ..

ನಿರ್ದೇಶಕ ಶಶಾಂಕ್

ನಿರ್ದೇಶಕ ಶಶಾಂಕ್

ಡಿಕೆ ರವಿ ಕೇಸನ್ನು ಸಿಬಿಐಗೆ ಹಸ್ತಾಂತರಿಸ ಬೇಕೆನ್ನುವ ಪಿಟಿಷನ್ ಗೆ ನಾನು ಈಗ ಸಹಿ ಮಾಡಿದ್ದೇನೆ.

ನಟಿ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ

#DKRavi RIP .....Sad to hear of all what's happening .... Fight for justice and the right don't commercialise it .....Be Human

ಐಂದ್ರಿತಾ ರೇ

ನಟಿ ಐಂದ್ರಿತಾ ರೇ, ಡಿ.ಕೆ.ರವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಭ್ರಷ್ಟರ ವಿರುದ್ಧ ದನಿಯೆತ್ತಬೇಕು ಅನ್ನುವ ಸಂದೇಶದೊಂದಿಗೆ ಟ್ವೀಟ್ ಕೂಡ ಮಾಡಿದ್ದಾರೆ.

More from Filmibeat

English summary
Sudden demise of IAS officer and former Kolar DC, D K Ravi: Celebrities reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X