ನೆಚ್ಚಿನ ಇಬ್ಬರು ಕನ್ನಡ ನಟರನ್ನು ಹೆಸರಿಸಿದ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಮಯಾಂಕ್ ಅಗರ್ವಾಲ್‌

ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮ್ಯಾನ್. ಟೆಸ್ಟ್ ಹಾಗೂ ಏಕ ದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಕ್ರಿಕೆಟಿಗ. ಈ ಯುವ ಆಟಗಾರ ಇತ್ತೀಚೆಗೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ನ್ಯೂಜಿಲ್ಯಾಂಡ್ ಜೊತೆ ನಡೆದ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಕರ್ನಾಟಕ ಈ ಕ್ರಿಕೆಟಿಗ ಕನ್ನಡಿಗರ ಹೆಮ್ಮೆ ಏನಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತಿದ್ದಾರೆ.

ಮಯಾಂಕ್ ಅಗರ್ವಾಲ್ ಕ್ರಿಕೆಟ್ ಅಲ್ಲದೆ ಮತ್ತೊಂದು ವಿಷಯಕ್ಕೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತನ್ನ ಇಬ್ಬರು ಅಚ್ಚು ಮೆಚ್ಚಿನ ಇಬ್ಬರು ಕನ್ನಡದ ನಟರ ಹೆಸರನ್ನು ಮಯಾಂಕ್ ಅಗರ್ವಾಲ್ ಹೆಸರಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದೊಂದಿಗೆ ಒಡನಾಟ ಇಟ್ಟುಕೊಂಡಿರುವ ಈ ಕ್ರಿಕೆಟರ್ ಬಗ್ಗೆ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ, ಮಯಾಂಕ್ ಅಗರ್ವಾಲ್ ಮೆಚ್ಚಿದ ಆ ಇಬ್ಬರು ನಟರು ಯಾರು? ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಮಯಾಂಕ್ ಮೆಚ್ಚಿದ ಕನ್ನಡ ನಟರು ಯಾರು?

ಮಯಾಂಕ್ ಮೆಚ್ಚಿದ ಕನ್ನಡ ನಟರು ಯಾರು?

ಇಂಡಿಯಾ ಆಟಗಾರ ಮಯಾಂಕ್ ಅಗರ್ವಾಲ್ ಕನ್ನಡದ ಇಬ್ಬರು ನಟರು ಇಷ್ಟ ಈ ಮಾತನ್ನು ಸ್ವತಃ ಮಯಾಂಕ್ ಅಗರ್ವಾಲ್ ಅವರೇ ಹೇಳಿಕೊಂಡಿದ್ದಾರೆ. ಮಯಾಂಕ್ ಮೆಚ್ಚಿದ ಇಬ್ಬರು ಕನ್ನಡದ ನಟರೆಂದರೆ, ಒಬ್ಬರು ಕಿಚ್ಚ ಸುದೀಪ್, ಮತ್ತೊಬ್ಬರು ರಾಕಿ ಭಾಯ್ ಯಶ್. ಈ ಇಬ್ಬರು ನಟರೂ ತನ್ನ ಅಚ್ಚು ಮೆಚ್ಚಿನ ಕನ್ನಡದ ನಟರು ಎಂದು ಮಯಾಂಕ್ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇನ್‌ಸ್ಟಾದಲ್ಲಿ ಅಭಿಮಾನಿಗೆ ಉತ್ತರ

ಇನ್‌ಸ್ಟಾದಲ್ಲಿ ಅಭಿಮಾನಿಗೆ ಉತ್ತರ

ಟೀಂ ಇಂಡಿಯಾ ಆಟಗಾರ ಮಯಾಂಕ್ ಅಗರ್ವಾಲ್ ಇನ್‌ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಆಹ್ವಾನ ನೀಡಿದ್ದರು. ಈ ವೇಳೆ ಅಭಿಮಾನಿಯೊಬ್ಬ ನೀವು ಇಷ್ಟ ಪಡುವ ಕನ್ನಡದ ಅಚ್ಚು ಮೆಚ್ಚಿನ ನಟ ಯಾರು ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಟೀಂ ಇಂಡಿಯಾದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ಯಶ್ ಅಚ್ಚುಮೆಚ್ಚಿನ ನಟರು ಎಂದು ಹೇಳಿದ್ದಾರೆ. ಇದು ಯಶ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಬೆಂಗಳೂರು ಬುಲ್ಸ್ ವಿಡಿಯೋದಲ್ಲಿ ಕಿಚ್ಚ

ಬೆಂಗಳೂರು ಬುಲ್ಸ್ ವಿಡಿಯೋದಲ್ಲಿ ಕಿಚ್ಚ

ಇನ್ನೇನು ಕೆಲವೇ ದಿನಗಳಲ್ಲಿ ಪ್ರೊ ಕಬಡ್ಡಿ ಆರಂಭ ಆಗಲಿದೆ. ಅದಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಹಾಗೇ ಆಯಾ ತಂಡಗಳು ಪ್ರಚಾರವನ್ನೂ ಆರಂಭಿಸಿವೆ. ಈ ಬಾರಿ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಪ್ರಮೋಷನಲ್ ವಿಡಿಯೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಮೂರು ನಾಲ್ಕು ಗೆಟಪ್‌ಗಳಲ್ಲಿ ನಟಿಸಿರುವ ಕಿಚ್ಚನ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದೇ ಇನ್ನೊಂದು ಕಡೆ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರಕ್ಕೆ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ.

KGF2 ಗಾಗಿ ಕಾಯುತ್ತಿರುವ ಯಶ್

KGF2 ಗಾಗಿ ಕಾಯುತ್ತಿರುವ ಯಶ್

ಇತ್ತ ರಾಕಿಂಗ್ ಸ್ಟಾರ್ ಯಶ್ ಬಹು ನಿರೀಕ್ಷಿತ ಸಿನಿಮಾ 'ಕೆಜಿಎಫ್ 2'ಗಾಗಿ ಕಾಯುತ್ತಿದ್ದಾರೆ. 'ಕೆಜಿಎಫ್ ಚಾಪ್ಟರ್ 1' ಕನ್ನಡ ಚಿತ್ರರಂಗದಲ್ಲಿಯೇ ಹೊಸ ದಾಖಲೆಗಳನ್ನು ಬರೆದಿತ್ತು. ಈಗ ಚಾಪ್ಟರ್ 2 ಕೂಡ ಹೊಸ ಇತಿಹಾಸ ಸೃಷ್ಟಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಏಪ್ರಿಲ್ 14 ರಂದು ಬಿಡುಗಡೆಯಾಗಲಿರುವ ಸಿನಿಮಾಗಾಗಿ ಯಶ್ ಅಭಿಮಾನಿಗಳು ಕಾತರದಿಂದ ಕಾದು ಕೂತಿದ್ದಾರೆ.

More from Filmibeat

English summary
Sudeep and Yash is my favorite Kannada actors says cricketer Mayank Agarawal. In Instagram Mayank was asked a question about his favorite kannada actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X