»   » ದುಬೈ, ಅಬುಧಾಬಿ, ಶಾರ್ಜಾದಲ್ಲಿ ಸುದೀಪ್ ಬಚ್ಚನ್

ದುಬೈ, ಅಬುಧಾಬಿ, ಶಾರ್ಜಾದಲ್ಲಿ ಸುದೀಪ್ ಬಚ್ಚನ್

Posted By:
Subscribe to Filmibeat Kannada

ಸುದೀಪ್ ಅಭಿನಯದ ಬಚ್ಚನ್ ಚಿತ್ರ ಗಲ್ಫ್ ದೇಶಗಳಲ್ಲಿ ಬಿಡುಗಡೆ ಕಾಣುತ್ತಿದೆ. ಇದೇ ಏಪ್ರಿಲ್ 18, 19 ಹಾಗೂ 20ರಂದು ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ಚಿತ್ರ ತೆರೆಕಾಣುತ್ತಿದೆ. (ಬಚ್ಚನ್ ಚಿತ್ರದ ವಿಮರ್ಶೆ)

ದುಬೈನ ಗ್ಯಾಲೆರಿಯಾ, ಅಲ್ ಕ್ವಾಜ್ ಮಾಲ್ ನಲ್ಲಿ ಏಪ್ರಿಲ್ 19ರಂದು ಹಾಗೂ ಶಾರ್ಜಾದ ಸ್ಟಾರ್ ಸಿನೆಪ್ಲಕ್ಸ್ ಹಾಗೂ ಅಬುಧಾಬಿಯಲ್ಲಿ ಎಲ್ಡೋವ್ಡೋ ಸಿನಿಮಾದಲ್ಲಿ ಏಪ್ರಿಲ್ 18ರಂದು ಬಚ್ಚನ್ ತೆರೆಕಾಣುತ್ತಿದೆ.


ಯು.ಎ.ಇಯಲ್ಲಿರುವ ಎಲ್ಲಾ ಕನ್ನಡ ಸಂಘ ಸಂಸ್ಥೆಗಳ ಪ್ರೋತ್ಸಾಹದೊಂದಿ ಬಚ್ಚನ್ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ದರ್ಶನ್ ಸೋಮಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಚ್ಚನ್ ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಬಾಕ್ಸ್ ಆಫೀಸ್ ರಿಪೋರ್ಟ್ ಸಹ ಆಶಾದಾಯವಾಗಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ.

ಸುದೀಪ್, ಪಾರೂಲ್ ಯಾದವ್, ತುಲಿಪ್ ಜೋಶಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ. (ಒನ್ಇಂಡಿಯಾ ಕನ್ನಡ)

English summary
Kichcha Sudeep's successfully showing Kannada film Bachchan releases in Dubai, Sharjah and Abu Dhabi on 18th, 19th and 20 April. The film directed by Shashank featuring Sudeep, Bhavana, Tulip Joshi and Parul Yadav in the lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada