»   » 'ಹೆಬ್ಬುಲಿ 2'ಗೆ ಟ್ವಿಟರ್ ನಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್

'ಹೆಬ್ಬುಲಿ 2'ಗೆ ಟ್ವಿಟರ್ ನಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್

Posted By:
Subscribe to Filmibeat Kannada

'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಶ್ರೀನಿವಾಸ್ 'ಕೆಂಪೇಗೌಡ 2' ಟೈಟಲ್ ಸಿಗದ ಕಾರಣ ಸುದೀಪ್ ಅಭಿನಯದಲ್ಲಿ 'ಹೆಬ್ಬುಲಿ 2' ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಅಲ್ಲದೇ 'ಹೆಬ್ಬುಲಿ 2' ಸಿನಿಮಾವನ್ನು ಸುದೀಪ್ ಅವರೇ ನಿರ್ದೇಶನ ಮಾಡುತ್ತಾರೆ ಎಂದು ತಿಳಿಸಿದ್ದರು.['ಕೆಂಪೇಗೌಡ 2' ಬದಲು ಬರಲಿದೆ ಸುದೀಪ್ 'ಹೆಬ್ಬುಲಿ 2']

ಆದರೆ. ಉಮಾಪತಿ ರವರು ರಿಮೇಕ್ ಅಲ್ಲದ, ಸೀಕ್ವೆಲ್ ಅಲ್ಲದ ಹೊಸ ಸ್ಕ್ರಿಪ್ಟ್ ರೆಡಿ ಮಾಡಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ 'ಹೆಬ್ಬುಲಿ 2' ಚಿತ್ರಕ್ಕೆ ಸಂಬಂಧಿಸಿದಂತೆ, ಕಿಚ್ಚ ಸುದೀಪ್ ಈಗ ಹೊಸ ಟ್ವಿಸ್ಟ್ ನೀಡಿದ್ದಾರೆ. ಅದೇನು ಅಂತ ತಿಳಿದುಕೊಳ್ಳೋ ಕುತೂಹಲ ಇರುವವರು ಮುಂದೆ ಓದಿ...

ಸ್ಮಾಲ್ ಕನ್ ಫ್ಯೂಶನ್ ಇದೆ!

'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಬೇಕು ಎಂದುಕೊಂಡಿರುವ 'ಹೆಬ್ಬುಲಿ 2' ಚಿತ್ರವನ್ನು ಸುದೀಪ್ ಡೈರೆಕ್ಷನ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಹೆಬ್ಬುಲಿ 2' ನಿರ್ದೇಶನದ ಬಗ್ಗೆ ಸಣ್ಣ ಗೊಂದಲ ಇದೆ ಎಂದು ಹೇಳಿ ಟ್ವಿಟರ್ ನಲ್ಲಿ ಹೊಸ ಟ್ವಿಸ್ಟ್ ನೀಡಿದ್ದಾರೆ.

'ಹೆಬ್ಬುಲಿ' ಎಸ್.ಕೃಷ್ಣ ನಿರ್ದೇಶನದ ಚಿತ್ರ

'ಹೆಬ್ಬುಲಿ 2' ಚಿತ್ರವನ್ನು ಸುದೀಪ್ ಡೈರೆಕ್ಟ್ ಮಾಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸುದೀಪ್, " 'ಹೆಬ್ಬುಲಿ' ಎಸ್.ಕೃಷ್ಣ ನಿರ್ದೇಶನದ ಚಿತ್ರ. ಆದ್ದರಿಂದ ಅದೇ ಟೈಟಲ್ ಇರುವ 'ಹೆಬ್ಬುಲಿ 2' ಚಿತ್ರವನ್ನು ಎಸ್.ಕೃಷ್ಣ ಅವರೇ ನಿರ್ದೇಶನ ಮಾಡಲಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಉಮಾಪತಿ ಫಿಲ್ಮ್ ಗೆ ಬೇರೆ ಸಿನಿಮಾ ಮಾಡ್ತಾರಂತೆ ಸುದೀಪ್

'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರವರ 'ಉಮಾಪತಿ ಫಿಲ್ಮ್' ಬ್ಯಾನರ್ ಅಡಿಯಲ್ಲಿ ಸುದೀಪ್ ಬೇರೊಂದು ಸಿನಿಮಾ ಮಾಡುವುದಾಗಿ ಟ್ವಿಟರ್ ನಲ್ಲಿ ಹೇಳಿದ್ದಾರೆ.

ಎಸ್.ಕೃಷ್ಣ ಡೈರೆಕ್ಷನ್ ನಲ್ಲಿ 'ಹೆಬ್ಬುಲಿ 2'

ಅಂದಹಾಗೆ 'ಹೆಬ್ಬುಲಿ 2' ಚಿತ್ರವನ್ನು ಎಸ್.ಕೃಷ್ಣ ರವರೇ ನಿರ್ದೇಶನ ಮಾಡಲಿದ್ದಾರೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ ಅಷ್ಟೆ. ಆದ್ರೆ ಸುದೀಪ್ ರವರ ಈ ಟ್ವೀಟ್ ಗೆ ಸಂಬಂಧಿಸಿದಂತೆ ನಿರ್ಮಾಪಕರಾಗಲಿ, ಎಸ್.ಕೃಷ್ಣ ಆಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
Kannada Actor Kiccha Sudeep Clarifies about Umapathy Srinivas producing 'Hebbuli 2' Movie Direction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada