For Quick Alerts
  ALLOW NOTIFICATIONS  
  For Daily Alerts

  'ಕೆಂಪೇಗೌಡ 2' ಬದಲು ಬರಲಿದೆ ಸುದೀಪ್ 'ಹೆಬ್ಬುಲಿ 2'

  By Suneel
  |

  ಕಿಚ್ಚ ಸುದೀಪ್ ಅಭಿನಯದಲ್ಲಿ ಸದ್ಯದಲ್ಲೇ 'ಕೆಂಪೇಗೌಡ 2' ಚಿತ್ರ ಬರಲಿದೆ, ಈ ಚಿತ್ರವನ್ನು 'ಹೆಬ್ಬುಲಿ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಉಮಾಪತಿ ಶ್ರೀನಿವಾಸ್ ಅವರೇ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿ ಈಗ ಅಂತೆ ಕಂತೆಗಳಿಗಷ್ಟೇ ಸೀಮಿತವಾಗಿದ್ದು, 'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರವರು ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ.['ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಎಂಟ್ರಿ! 'ಸಂತೋಷ್' ಯಾರಿಗೆ?]

  ಕಿಚ್ಚ ಸುದೀಪ್ ಅಭಿನಯದಲ್ಲಿ 'ಕೆಂಪೇಗೌಡ 2' ಬದಲು 'ಹೆಬ್ಬುಲಿ 2' ಚಿತ್ರ ನಿರ್ಮಾಣ ಮಾಡುವುದಾಗಿ ನಿರ್ಮಾಪಕ ಉಮಾಪತಿ ಅವರು ಹೇಳಿದ್ದಾರೆ. ಮುಂದೆ ಓದಿರಿ..

  'ಕೆಂಪೇಗೌಡ 2' ಮಾಡಬೇಕು ಎಂದುಕೊಂಡಿದ್ದು ನಿಜ

  'ಕೆಂಪೇಗೌಡ 2' ಮಾಡಬೇಕು ಎಂದುಕೊಂಡಿದ್ದು ನಿಜ

  ಅಂದಹಾಗೆ 'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಅವರು 'ಕೆಂಪೇಗೌಡ 2' ಸ್ವಮೇಕ್ ಚಿತ್ರ ನಿರ್ಮಾಣ ಮಾಡಲು ರೆಡಿಯಾಗಿದ್ದು ನಿಜವಂತೆ. ಆದರೆ 'ಕೆಂಪೇಗೌಡ 2' ಟೈಟಲ್ ಅನ್ನು ನಿರ್ಮಾಪಕ ಶಂಕರೇಗೌಡ ರವರು ಮೊದಲು ನೀಡುವುದಾಗಿ ಹೇಳಿ, ಈಗ ನಿರಾಕರಿಸಿದರಂತೆ.['ಹೆಬ್ಬುಲಿ' ನಿರ್ಮಾಪಕನ ಸಾರಥ್ಯದಲ್ಲಿ ಬರಲಿದೆ ಸುದೀಪ್ 'ಕೆಂಪೇಗೌಡ 2'?]

  'ಕೆಂಪೇಗೌಡ 2' ಬದಲು 'ಹೆಬ್ಬುಲಿ 2'

  'ಕೆಂಪೇಗೌಡ 2' ಬದಲು 'ಹೆಬ್ಬುಲಿ 2'

  ನಿರ್ಮಾಪಕ ಉಮಾಪತಿ ರವರು ಈಗ 'ಕೆಂಪೇಗೌಡ 2' ಟೈಟಲ್ ಸಿಗದ ಕಾರಣ 'ಹೆಬ್ಬುಲಿ 2' ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

  'ಹೆಬ್ಬುಲಿ 2' ಡೈರೆಕ್ಟರ್ ಯಾರು?

  'ಹೆಬ್ಬುಲಿ 2' ಡೈರೆಕ್ಟರ್ ಯಾರು?

  ರಘುನಾಥ್ ಮತ್ತು ಉಮಾಪತಿ ಶ್ರೀನಿವಾಸ್ ನಿರ್ಮಾಣದ 'ಹೆಬ್ಬುಲಿ' ಚಿತ್ರಕ್ಕೆ ಛಾಯಾಗ್ರಾಹಕ ಕಮ್ ನಿರ್ದೇಶಕರಾದ ಎಸ್.ಕೃಷ್ಣ ರವರು ಆಕ್ಷನ್ ಕಟ್ ಹೇಳಿದ್ದರು. ಆದ್ದರಿಂದ ''ಹೆಬ್ಬುಲಿ 2' ಚಿತ್ರವನ್ನು ಅವರೇ ನಿರ್ದೇಶನ ಮಾಡುತ್ತಾರೆ ಅಂತ ನೀವು ಅಂದುಕೊಂಡರೇ ಅದು ತಪ್ಪು. ಯಾಕಂದ್ರೆ......

  ಸುದೀಪ್ ನಿರ್ದೇಶನದಲ್ಲಿ 'ಹೆಬ್ಬುಲಿ 2'

  ಸುದೀಪ್ ನಿರ್ದೇಶನದಲ್ಲಿ 'ಹೆಬ್ಬುಲಿ 2'

  ಹೌದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಹೆಬ್ಬುಲಿ 2' ಚಿತ್ರದಲ್ಲಿ ಅಭಿನಯದ ಜೊತೆಗೆ ಅವರೇ ನಿರ್ದೇಶನ ಮಾಡಲಿದ್ದಾರಂತೆ. ಹೀಗೆಂದು ಫಿಲ್ಮಿಬೀಟ್ ಜೊತೆ ನಿರ್ಮಾಪಕ ಉಮಾಪತಿ ರವರು ಹೇಳಿದ್ದಾರೆ.

  ಹೊಸ ಸ್ಕ್ರಿಪ್ಟ್ ನಲ್ಲಿ 'ಹೆಬ್ಬುಲಿ 2'

  ಹೊಸ ಸ್ಕ್ರಿಪ್ಟ್ ನಲ್ಲಿ 'ಹೆಬ್ಬುಲಿ 2'

  'ಹೆಬ್ಬುಲಿ 2' ಪಕ್ಕಾ ಸ್ವಮೇಕ್ ಚಿತ್ರವಾಗಿದ್ದು, ಹೊಸ ಸ್ಕ್ರಿಪ್ಟ್ ರೆಡಿ ಮಾಡಿ ಚಿತ್ರ ನಿರ್ಮಾಣ ಮಾಡುವುದಾಗಿ ಉಮಾಪತಿ ತಿಳಿಸಿದ್ದಾರೆ.

  'ದಿ ವಿಲನ್' ನಂತರ 'ಹೆಬ್ಬುಲಿ 2'

  'ದಿ ವಿಲನ್' ನಂತರ 'ಹೆಬ್ಬುಲಿ 2'

  ಪ್ರಸ್ತುತದಲ್ಲಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ನಟಿಸುತ್ತಿರುವ 'ಜೋಗಿ' ಪ್ರೇಮ್ ನಿರ್ದೇಶನದ 'ದಿ ವಿಲನ್' ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರ ಪೂರ್ಣಗೊಂಡ ನಂತರ 'ಹೆಬ್ಬುಲಿ 2' ಚಿತ್ರ ಆರಂಭಿಸಲಾಗುತ್ತದೆಯಂತೆ.

  'ಹೆಬ್ಬುಲಿ 2' ತಾರಾಬಳಗ!

  'ಹೆಬ್ಬುಲಿ 2' ತಾರಾಬಳಗ!

  ಚಿತ್ರದ ತಾರಾಬಳಗ ಬಗ್ಗೆ ಇನ್ನೂ ಚಿಂತಿಸಿಲ್ಲವಂತೆ. ಒಮ್ಮೆ ಚಿತ್ರದ ಸ್ಕ್ರಿಫ್ಟ್ ಕಂಪ್ಲೀಟ್ ಆದ ನಂತರ ತಾರಾಬಳಗದ ಬಗ್ಗೆ ಯೋಚಿಸುವುದಾಗಿ ಉಮಾಪತಿ ಹೇಳಿದ್ದಾರೆ.

  ಸುದೀಪ್ ಗೆ ಇನ್ನೂ ಇಬ್ಬರು ನಿರ್ದೇಶಕರು ಕಮಿಟ್ ಆಗಿದ್ದಾರಲ್ಲಾ...!

  ಸುದೀಪ್ ಗೆ ಇನ್ನೂ ಇಬ್ಬರು ನಿರ್ದೇಶಕರು ಕಮಿಟ್ ಆಗಿದ್ದಾರಲ್ಲಾ...!

  'ದಿ ವಿಲನ್' ನಂತರ ಕಿಚ್ಚ ಸುದೀಪ್ ಗೆ ಆಕ್ಷನ್ ಕಟ್ ಹೇಳಲು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರು ಸಹ ಕಮಿಟ್ ಆಗಿದ್ದಾರೆ. ಆದ್ದರಿಂದ ಸುದೀಪ್ ತಾವೇ 'ಹೆಬ್ಬುಲಿ 2' ಚಿತ್ರ ನಿರ್ದೇಶನ ಮತ್ತು ಅಭಿನಯದಲ್ಲಿ ತೊಡಗಿಕೊಳ್ಳುತ್ತಾರಾ ಅಥವಾ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಚಿತ್ರಗಳಲ್ಲಿ ಅಭಿನಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  ಉಮಾಪತಿಯವರಿಗೆ ನಿರಾಸೆ ಉಂಟುಮಾಡಿದ 'ಕೆಂಪೇಗೌಡ 2'

  ಉಮಾಪತಿಯವರಿಗೆ ನಿರಾಸೆ ಉಂಟುಮಾಡಿದ 'ಕೆಂಪೇಗೌಡ 2'

  ಕಿಚ್ಚ ಸುದೀಪ್ ಅಭಿನಯದಲ್ಲಿ 'ಕೆಂಪೇಗೌಡ 2' ಚಿತ್ರ ನಿರ್ಮಾಣ ಮಾಡಲು ಟೈಟಲ್ ಸಿಗುವ ಭರವಸೆಯಲ್ಲಿ ಉಮಾಪತಿಯವರು ಖುಷಿಯಾಗಿದ್ದರು. ಅಲ್ಲದೇ ಚಿತ್ರದಲ್ಲಿ ಅಭಿನಯಿಸಲು ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದ ಕಾರಣ ಉಮಾಪತಿ " 'ಕೆಂಪೇಗೌಡ 2' ನನ್ನ ಅಣ್ಣ(ಸುದೀಪ್) ನನಗೆ ನೀಡಿದ ಗಿಫ್ಟ್, ಯುಗಾದಿಗೆ ಅಭಿಮಾನಿಗಳಿಗೂ ನೀಡಿರುವ ಉಡುಗೊರೆ" ಎಂದು ಹೇಳಿಕೊಂಡಿದ್ದರೂ. ಆದರೆ ಈಗ ಟೈಟಲ್ ಸಿಗದ ಕಾರಣ ಉಮಾಪತಿಯವರಿಗೆ 'ಕೆಂಪೇಗೌಡ 2' ನಿರಾಸೆಯಾಗಿದೆ.

  English summary
  'Hebbuli' producer Umapathy Srinivas will produce 'Hebbuli 2' under the direction of Kiccha Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X