ಕನ್ನಡದ 'ಬಿಗ್ ಬಾಸ್':ಕಿಚ್ಚ ಸುದೀಪ್ ನೀಡಿದ ಸ್ಪಷ್ಟನೆ

ಈ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ನಾನೇ ನಿರೂಪಕ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡುವ ಮೂಲಕ ರಿಯಾಲಿಟಿ ಶೋಬಗ್ಗೆ ಇದ್ದ ಎಲ್ಲಾ ಅಂತಕಂತೆಗಳಿಗೆ ತೆರೆಬಿದ್ದಿದೆ.
ಜನಶ್ರೀ ಟಿವಿಗೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸುದೀಪ್, ಈ ರಿಯಾಲಿಟಿ ಶೋ ನಾನು ನಡೆಸಿ ಕೊಡುತ್ತಿದ್ದೇನೆ. ಈ ಹಿಂದೆ ನಾನು ಕಿರುತೆರೆಯಲ್ಲಿ 'ಪ್ಯಾಟೆ ಹುಡ್ಗೀರಾ ಹಳ್ಳಿ ಲೈಫು' ಎನ್ನುವ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ.
ನಾನು ಈ ಬಗ್ಗೆ ಟ್ವೀಟ್ ಮಾಡಿದ್ದಾಗ ಬೇರೆ ಭಾಷೆಯಲ್ಲಿ ಬಂದ ಮೇಲೆ ಕನ್ನಡದಲ್ಲಿ ಬರುತ್ತಿರುವುದು ಏನಕ್ಕೆ ಎಂದು ಕೆಲವರು ನನ್ನನ್ನು ಪ್ರಶ್ನಿಸಿದರು. ಕನ್ನಡದವರು ಮಾಡಿದರೆ ಮಾತ್ರ ರಿಮೇಕ್ ಬೇರೆಯವರು ಮಾಡಿದರೆ ರಿಮೇಕ್ ಆಗುವುದಿಲ್ಲವೇ ಎಂದು ಸುದೀಪ್ ಬೇಸರ ವ್ಯಕ್ತ ಪಡಿಸಿದರು.
ಸಿನಿಮಾ ರಂಗಕ್ಕಿಂತ ಕಿರುತೆರೆ ವ್ಯಾಪ್ತಿ ವಿಶಾಲವಾದದ್ದು. ಜನ ಚಿತ್ರ ನೋಡದಿದ್ದರೂ ಟಿವಿ ನೋಡೇ ನೋಡುತ್ತಾರೆ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿದ್ದೆ, ನಾನು ಇಷ್ಟ ಪಟ್ಟ ರಿಯಾಲಿಟಿ ಶೋವದು. ಹಾಗಾಗಿ ಅದಕ್ಕೆ ಒಪ್ಪಿಗೆ ನೀಡಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ಈಟಿವಿ ಕನ್ನಡ ವಾಹಿನಿ ಕಲರ್ಸ್ ವಾಹಿನಿ ನಡೆಸಿಕೊಡುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋವನ್ನು ಕನ್ನಡದಲ್ಲಿ ಪ್ರಸಾರಮಾಡಲು ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ 'ಬಿಗ್ ಬಾಸ್ ಶೋ' ನಿರೂಪಕರು ಎಂಬುದು ಈಗಾಗಲೆ ಎಲ್ಲೆಡೆ ಭಾರೀ ಸುದ್ದಿಯಾಗಿತ್ತು, ಸುದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದು ಅಧಿಕೃತ: ರಾಮ್ ಗೋಪಾಲ್ ವರ್ಮಾ ಕನ್ನಡಕ್ಕೆ - ಹಿಂದಿನ ಪುಟ ಕ್ಲಿಕ್ಕಿಸಿ


Click it and Unblock the Notifications











