»   » ಕೊನೆಗೂ ನಟ ಕಿಚ್ಚ ಸುದೀಪ್ ಗೆ ಕ್ಷಮೆ ಕೇಳಿದ ಕಿರಿಕ್ ಅಭಿಮಾನಿ

ಕೊನೆಗೂ ನಟ ಕಿಚ್ಚ ಸುದೀಪ್ ಗೆ ಕ್ಷಮೆ ಕೇಳಿದ ಕಿರಿಕ್ ಅಭಿಮಾನಿ

Posted By:
Subscribe to Filmibeat Kannada

ನಟ ಸುದೀಪ್ 'ಈ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದೇ ಕೆಲ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಅದರಲ್ಲಿಯೂ ಒಬ್ಬ ಅಭಿಮಾನಿ ಸುದೀಪ್ ವಿರುದ್ಧ ಕೆಂಡಕಾರಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅಭಿಮಾನಿಯ ಆ ವಿಡಿಯೋ ನೋಡಿ ಸುದೀಪ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ತಾವು ಯಾಕೆ ಹುಟ್ಟುಹಬ್ಬ ಬೇಡ ಎಂದು ನಿರ್ಧಾರ ಮಾಡಿದ್ದು ಎಂದು ಅಭಿಮಾನಿಗೆ ಅರ್ಥ ಮಾಡಿಸಿದ್ದರು. ಸುದೀಪ್ ಅವರ ಆ ಮಾತು ಈಗ ಆ ಅಭಿಮಾನಿಗೆ ಅರ್ಥವಾಗಿದೆ ಅಂತ ಅನಿಸುತ್ತಿದೆ. ಯಾಕಂದ್ರೆ ಸುದೀಪ್ ವಿರುದ್ಧ ಮಾತನಾಡಿದ್ದ ಈ ಅಭಿಮಾನಿ ಈಗ ಅವರಿಗೆ ಕ್ಷಮೆ ಕೇಳಿದ್ದಾರೆ. ಮುಂದಿದೆ ಓದಿ...

ಕ್ಷಮಿಸಿ ಅಣ್ಣ

''ಸುದೀಪ್ ಅಣ್ಣ ನನ್ನಿಂದ ನಿಮಗೆ ತುಂಬ ಬೇಜಾರಾಗಿದೆ. ಅದಕ್ಕೆ ಕ್ಷಮಿಸಿ ಅಣ್ಣ. ನಾನು ಯಾವುದೇ ಉದ್ದೇಶದಿಂದ ಆ ರೀತಿ ಮಾತನಾಡಿಲ್ಲ. ನಿಮ್ಮ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂಬ ವಿಷಯ ಕೇಳಿ ನನಗೆ ತುಂಬ ಬೇಜಾರಾಗಿತ್ತು.'' ಎಂದು ಅಭಿಮಾನಿ ತನ್ನ ಮನದಾಳವನ್ನು ಹಂಚಿಕೊಂಡಿದ್ದಾರೆ.

ನಿಮ್ಮಲ್ಲಿ ವಿಷ್ಣು ಸರ್ ಅವರನ್ನು ನೋಡುತ್ತಿದ್ದೇವೆ

''ನೀವು ಅಂದರೆ ನನಗೆ ತುಂಬ ಇಷ್ಟ. ನಿಮಗೋಸ್ಕರ ನಾವು ಪ್ರಾಣ ಕೊಡುವುದಕ್ಕೆ ರೆಡಿ. ನಮಗೆ ನೀವು ಬೇಕು ಅಷ್ಟೆ. ಮತ್ತೇನು ಬೇಡ. ನಾವು ವಿಷ್ಣುವರ್ಧನ್ ಸರ್ ಅವರನ್ನು ಇಷ್ಟ ಪಡುತ್ತಿದ್ವಿ. ಈಗ ಅವರು ಇಲ್ಲ. ನಾವು ಈಗ ನಿಮ್ಮಲ್ಲಿ ವಿಷ್ಣು ಸರ್ ಅವರನ್ನು ನೋಡುತ್ತಿದ್ದೇವೆ.'' ಅಂತ ಸುದೀಪ್ ಅಭಿಮಾನಿ ಮಾತನಾಡಿದ್ದಾರೆ. 'ಸಿನಿಮಾ ಮಾಡಬೇಡಿ' ಎಂದು ಸುದೀಪ್ ವಿರುದ್ಧ ಉರಿದುಬಿದ್ದ ಓರ್ವ ಅಭಿಮಾನಿ

ನಿಮ್ಮ ಸಿನಿಮಾ ನೋಡುತ್ತೇನೆ

''ನಾನು ಅಂದು ಕೋಪದಲ್ಲಿ ಆ ರೀತಿ ಮಾತನಾಡಿದ್ದೆ. ನೀವೇ ಸಿನಿಮಾ ನೋಡಬೇಡಿ ಅಂತ ಹೇಳಿದರೂ ನಾನು ನೋಡುತ್ತೇನೆ. ನೀವು ಅಂದರೆ ನನಗೆ ಪ್ರಾಣ. ನೀವು ಹೇಳಿದನ್ನು ನಾವು ಕೇಳುತ್ತೇವೆ. ನೀವು ಒಳ್ಳೆಯದಕ್ಕೆ ಹೇಳಿದ್ರಿ. ಅದನ್ನು ನಾವು ಅರ್ಧ ಮಾಡಿಕೊಂಡಿರಲಿಲ್ಲ. ಅಂದಿನ ಪರಿಸ್ಥಿತಿ ಹಾಗಿತ್ತು. ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ. ನೀವು ಇನ್ನು ಮೇಲೆ ಬೆಳೆಯಬೇಕು ಎನ್ನುವುದು ನಮ್ಮ ಆಸೆ'' ಎಂದು ಅಭಿಮಾನಿ ಸುದೀಪ್ ಅವರಿಗೆ ಕ್ಷಮೆ ಕೇಳಿದ್ದಾರೆ.

'ಮಾಣಿಕ್ಯ' ಕಿಚ್ಚ ಸುದೀಪ್ ಹೃದಯದಲ್ಲಿಯೂ ಶ್ರೀಮಂತ: ಸಾಕ್ಷಿ ಬೇಕಾ.?

ಘಟನೆಯ ಬಗ್ಗೆ

ನಟ ಸುದೀಪ್ ಈ ವರ್ಷ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ದೂರ ಇದ್ದರು. ''ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ದಾನ ಮಾಡಿ'' ಅಂತ ಸುದೀಪ್ ಹೇಳಿದ್ದರು. ಆದರೆ ಇದರ ವಿರುದ್ಧ ಕೋಪಗೊಂಡಿದ್ದ ಅಭಿಮಾನಿ ''ಇನ್ನು ಮುಂದೆ ನೀವು ಸಿನಿಮಾ ಮಾಡಬೇಡಿ. ನಾವು ನಿಮ್ಮ ಸಿನಿಮಾ ನೋಡುವುದಿಲ್ಲ'' ಅಂತ ಹೇಳಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

English summary
Kannada actor Sudeep fan apologized for speaking against Kiccha over Birthday issue.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada