ಗಜಪಡೆ ID ಸುದೀಪ್ ಅಭಿಮಾನಿ ಆಯ್ತು; "ಇವೆಲ್ಲ ನಮ್ಮತ್ರ ಬೇಡ" ಅಂತ ವಾರ್ನಿಂಗ್ ಕೊಟ್ಟ ಕಿಚ್ಚನ ಫ್ಯಾನ್ಸ್!

ಕಳೆದ ಕೆಲವು ದಿನಗಳಿಂದ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರ ಅಭಿಮಾನಿಗಳು ಕೂಡ ತಮ್ಮ ಮನಸ್ಸಿಗೆ ಬಂದಂತೆ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ. ಕೆಲವು ದಿನ ಸೈಲೆಂಟ್ ಆಗಿದ್ದ ಈ ಫ್ಯಾನ್ಸ್ ವಾರ್ ಈಗ ಮತ್ತೆ ಶುರುವಾಗಿದೆ. ಅದಕ್ಕೆ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಡಿದ ಟ್ವೀಟ್.

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪತ್ನಿ ಬಗ್ಗೆ ಕಿಡಿಗೇಡಿಯೊಬ್ಬ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾನೆ. ಇದು ವೈರಲ್ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಸದ್ಯ ಆರ್‌ಸಿಬಿ ತಂಡ ಒಂದರ ಹಿಂದೊಂದು ಪಂದ್ಯಗಳಲ್ಲಿ ಸೋಲುಂಡಿದೆ. ಇದಕ್ಕೆ ಅಪ್ಪು ಪತ್ನಿಯನ್ನು ಕರೆಸಿದ್ದೇ ಕಾರಣ ಅಂತ ಕಿಡಿಗೇಡಿಯೊಬ್ಬ ಟ್ವೀಟ್ ಮಾಡಿದ್ದನು.

Sudeep fans are angry at Darshan fans for changing DP after a tweet against Ashwini Puneeth Rajkumar

ಆರಂಭದಲ್ಲಿ 'ಗಜಪಡೆ' ಅನ್ನುವ ಹೆಸರಿನಲ್ಲಿ ಈ ಟ್ವೀಟ್ ಮಾಡಲಾಗಿತ್ತು. ಅಪ್ಪು ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆ ಟ್ವಿಟರ್ ಐಡಿಯನ್ನು ಸುದೀಪ್ ಅಭಿಮಾನಿ ಎಂದು ಬದಲಾಯಿಸಿದ್ದಾನೆ. ಇದನ್ನು ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದಿದ್ದಾರೆ. ದರ್ಶನ್ ಅಭಿಮಾನಿ ಎನ್ನಲಾಗುತ್ತಿರುವ ವ್ಯಕ್ತಿಯ ವಿರುದ್ಧ ತಿರುಗಿಬಿದ್ದಿದ್ದಾರೆ.

ಅಶ್ವಿನಿ ಪುನೀತ್‌ರಾಜ್‌ಕುಮಾರ್ ಬಗ್ಗೆ ಕೀಳುಮಟ್ಟದ ಪೋಸ್ಟ್ ಮಾಡುತ್ತಿದ್ದಂತೆ ಐಡಿ ಹಾಗೂ ಡಿಪಿಯನ್ನು ಬದಲಾಯಿಸಲಾಗಿತ್ತು. ಗಜಪಡೆ ಅಂತಿದ್ದ ಐಡಿ ಸುದೀಪ್ ಅಭಿಮಾನಿ ಅಂತ ಬದಲಾವಣೆ ಆಗಿತ್ತು. ಜೊತೆಗೆ ಕಿಚ್ಚ ಸುದೀಪ್ ಫೋಟೊವನ್ನು ಹಾಕಿ ಡಿಪಿಯನ್ನೂ ಬದಲಾಯಿಸಲಾಗಿತ್ತು. ಕೂಡಲೇ ಕಿಚ್ಚನ ಅಭಿಮಾನಿಗಳು ಮೊದಲ ಹಾಗೂ ನಂತರದ ಪೋಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದರು. ಇಲ್ಲಿಂದ ಕಿಚ್ಚ ಅಭಿಮಾನಿಗಳು ದರ್ಶನ್ ಫ್ಯಾನ್ ವಿರುದ್ಧ ಕಿಡಿಕಾರುತ್ತಿದ್ದಾರೆ.

ಸುದೀಪ್ ಅಭಿಮಾನಿಗಳು ಈಗಿನ ಹಾಗೂ ಹಿಂದಿನ ಪೋಸ್ಟ್ ಎರಡನ್ನೂ ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. "ದರ್ಶನ್ ಅಭಿಮಾನಿಯಾಗಿ ಕಚಡ ಕೆಲಸ ಮಾಡಿದಲ್ಲದೆ,ID ಚೇಂಜ್ ಮಾಡಿ ಕಿಚ್ಚ ಬಾಸ್ DP ಹಾಕಿದಿಯಲ್ಲ ಎಂತಾ ನಾಮ** ನನ್ನ ಮಗನೋ ನೀನು. ನೀವು ಈ ತರ ಎಷ್ಟೇ ಕಚಡಾ ಕೆಲಸ ಮಾಡಿದ್ರೂ, ಕಿಚ್ಚ ಬಾಸ್‌ದು ಒಂದೂ ಕೂದ್ಲೂ ಕೂಡ ಕಿತ್ಕೊಳ್ಳಕ್ಕಾಗಲ್ಲ. ಇವೆಲ್ಲ ನಮ್ಮತ್ರ ಬೇಡ." ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನೊಬ್ಬ ನೆಟ್ಟಿಗರು ಕೂಡ ದುರಾಭಿಮಾನ ಎಂದು ಜರಿದಿದ್ದಾರೆ. "ಹೀನ ಮನಸ್ಥಿತಿಗಳು, ಯಾರನ್ನ ಮೆಚ್ಚಿಸೋಕೆ ಈ ತರದ ಪೋಸ್ಟ್ ಹಾಕ್ತಿದ್ದೀರ?? ಅವ್ರು ಪುನೀತ್ ರಾಜಕುಮಾರ್ ಅವರ ಹೆಂಡತಿ ಅನ್ನೋದ್ ಬಿಟ್ಟು ನಿಮ್ ಮನೆ ಅಕ್ಕನೋ, ತಂಗಿನೋ ಅಂತ ಯೋಚನೆ ಮಾಡಿ. ನಿಮ್ ದುರಭಿಮಾನಕ್ಕೆ ಇವರನ್ನ ಬಳಸಿಕೊಳ್ಳಬೇಡಿ" ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಅಣ್ಣಾವ್ರ ಕುಟುಂಬದ ಅಭಿಮಾನಿಗಳು ಕೂಡ ಸಿಟ್ಟಿಗೆದ್ದಿದ್ದಾರೆ. ದರ್ಶನ್ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಅಭಿಮಾನಿ ಮಾಡಿದ ತಪ್ಪಿಗೆ ದರ್ಶನ್‌ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೂಡ ಆ ಕಿಡಿಗೇಡಿ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದಾರೆ.

More from Filmibeat

English summary
Sudeep fans are angry at Darshan fans:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X