Sudeep: ಅಮೃತಾ ಜೊತೆ ಮೂರ್ಮೂರು ಸಿನಿಮಾ ಮಾಡಿದ್ದೇಕೆ? ಕಿಚ್ಚನ ಪ್ರಶ್ನೆಗೆ ಧನಂಜಯ್ ತಬ್ಬಿಬ್ಬು!
ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ರಿಲೀಸ್‌ಗೆ ರೆಡಿಯಾಗಿದೆ. ಮುಂದಿನವಾರ ಇದೇ ಸಿನಿಮಾ ಗ್ರ್ಯಾಂಡ್ ಆಗಿ ಎಂಟ್ರಿಕೊಡುತ್ತಿದೆ. ಹೀಗಾಗಿ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ನಿನ್ನೆ (ಮಾರ್ಚ್ 20) ಟ್ರೈಲರ್ ಲಾಂಚ್ ಕೂಡ ಆಗಿದೆ.
ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯಾಗಿ ನಟಿಸುತ್ತಿರುವ ಮೂರನೇ ಸಿನಿಮಾವಿದು. ಸ್ಯಾಂಡಲ್‌ವುಡ್‌ನ ಈ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ಇದೇ ಜೋಡಿ ಮತ್ತೆ ತೆರೆಮೇಲೆ ಜಾದು ಮಾಡುವುದಕ್ಕೆ ಬರುತ್ತಿದೆ.

'ಹೊಯ್ಸಳ' ಸಿನಿಮಾದ ಟ್ರೈಲರ್ ಲಾಂಚ್‌ಗೆ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಧನಂಜಯ್ ನಾಯಕಿ ಅಮೃತಾ ಅಯ್ಯಂಗಾರ್ ಬಗ್ಗೆ ಒಂದೇ ಒಂದು ಮಾತೂ ಹೇಳಿರಲಿಲ್ಲ. ಇದನ್ನು ಗಮನಿಸಿದ ಕಿಚ್ಚ ಸುದೀಪ್ ತಮಾಷೆಯಾಗಿ ಅಮೃತಾ ಅಯ್ಯಂಗಾರ್ ಹಾಗೂ ಡಾಲಿ ಧನಂಜಯ್ ಇಬ್ಬರ ಕಾಲೆಳೆದಿದ್ದಾರೆ. ಈ ವೇಳೆ ನಡೆದ ಸಂಭಾಷಣೆಯ ಬಗ್ಗೆ ಸಾರಾಂಶ ಹೀಗಿದೆ.
ಡಾಲಿಯನ್ನು ಹೊಗಳಿದ ಅಮೃತಾ ಅಯ್ಯಂಗಾರ್
'ಹೊಯ್ಸಳ' ಟ್ರೈಲರ್ ರಿಲೀಸ್ ಬಳಿಕ ಸಿನಿಮಾದ ನಾಯಕಿ ಅಮೃತಾ ಅಯ್ಯಂಗಾರ್ ವೇದಿಕೆ ಮೇಲೆ ಡಾಲಿಯನ್ನು ಹಾಡಿ ಹೊಗಳಿದ್ರು. ಧನಂಜಯ್ ಚೆನ್ನಾಗಿ ಕಾಣಿಸುತ್ತಿದ್ದಾರೆ. ಧನಂಜಯ್ ಪತ್ನಿ ಪಾತ್ರದಲ್ಲಿ ನಟಿಸಿದ್ದೀನಿ ಅಂತೆಲ್ಲ ಹೇಳಿದ್ರು. ಅದೇ ಧನಂಜಯ್ ವೇದಿಕೆ ಮೇಲೆ ಅಮೃತಾ ಬಗ್ಗೆ ಹೇಳುವುದನ್ನೇ ಮರೆತಿದ್ದರು. ಆಗ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದರು.

"ಅಮೃತಾ ಅವರು ಇಲ್ಲಿಗೆ ಬಂದು ಧನಂಜಯ್ ಅವರ ಬಗ್ಗೆ ಮಾತಾಡಿದ್ರು. ಅದು ಪಾತ್ರಕ್ಕೆ ಹೊಗಳುತ್ತಿದ್ರೋ, ಪರ್ಸನಲ್ ಆಗಿ ಹೊಗಳುತ್ತಿದ್ರೋ ಗೊತ್ತಾಗಿಲ್ಲ. ಇತ್ತ ಇವರು ತುಂಬಾನೇ ಖುಷಿಯಾಗಿದ್ದರು. ತುಂಬಾನೇ ಬೇಜರಾಗಿದ್ದು ಏನಂದ್ರೆ, ಧನಂಜಯ್ ನಿಮ್ಮ ಬಗ್ಗೆ ಒಂದೇ ಒಂದು ಮಾತು ಕೂಡ ಹೇಳಿಲ್ಲ. ಈಗ ಇವರಿಗೊಂದು ಅವಕಾಶ, ನೀವೆಷ್ಟು ಬ್ಯೂಟಿಫುಲ್ ಅಂತ ಇವರು ನಿಮ್ಮ ಮುಂದೆ ಹೇಳಬೇಕು." ಅಂತ ಕಿಚ್ಚ ಡಾಲಿ ಧನಂಜಯ್ ಅವರ ಕಾಲೆಳೆದ್ರು.
"ಬಂದಾಗಿಂದ ನೋಡ್ದೆ.. ಗುರುದೇವ್ ಹಿಂದೆ ಧನಂಜಯ್ ಇದ್ದಾನೆ. ಧನಂಜಯ್ ಹೆಂಡ್ತಿ ಕ್ಯಾರೆಕ್ಟರ್ ಮಾಡುವುದಕ್ಕೆ ಇಷ್ಟ ಆಯ್ತು. ವಿಜಯ್ ಅವರು ಹೆಲ್ಪ್ ಮಾಡಿದ್ರು. ವಾಪಾಸ್ ಹೋಗಬೇಕಾದರೆ, ಧನಂಜಯ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ಧೀರಾ ಅಂದ್ರು. ಧನಂಜಯ್ ಮಾತ್ರ ಏನೂ ಹೇಳಿಲ್ಲ. ಅಮೃತಾ ಅವರೊಂದಿಗೆ ನಟಿಸಿದ್ದು ಖುಷಿ ಆಯ್ತು ಅಂತ ಹೇಳಿದ್ರು. ಅವರು ನಟಿ, ಒಂದೆರಡು ಲೈನ್ ಹೊಗಳಿ." ಎಂದು ಧನಂಜಯ್‌ಗೆ ಕಿಚ್ಚ ಹೇಳುತ್ತಿದ್ದಂತೆ ನಾಚಿ ನೀರಾದ್ರು.
ಡಾಲಿ ಜೊತೆನೇ ಅಮೃತಾ ಸಿನಿಮಾ ಮಾಡೋದೇಕೆ?
ಕಿಚ್ಚ ಸುದೀಪ್ ಕಾಲೆಳೆಯಲು ಆರಂಭಿಸುತ್ತಿದ್ದಂತೆ ಡಾಲಿ ಧನಂಜಯ್ ಅವರಿಗೋಸ್ಕರ ಹಾಡು ಬರೆದಿದ್ದೇನೆ ಎಂದು ಹೇಳಲು ಆರಂಭಿಸಿದ್ರು. "ಅವರಿಗೋಸ್ಕರ ಬಡವ ರಾಸ್ಕಲ್ ಸಾಂಗೇ ಬರೆದಿದ್ದೀನಿ. ಮೂರನೇ ಸಿನಿಮಾ ಒಟ್ಟಿಗೆ ಮಾಡುತ್ತಿರೋದು. ತುಂಬಾ ಅದ್ಭುತವಾಗಿ ನಟಿಸಿದ್ದಾರೆ." ಎಂದು ಹೇಳಿ ಸುಮ್ಮನಾದ್ರು.
ಆದರೆ, ಕಿಚ್ಚ ಸುದೀಪ್ ಇಲ್ಲಿಗೆ ಬಿಡುವ ಹಾಗಿರಲಿಲ್ಲ. ಅಮೃತಾ ಅಯ್ಯಂಗಾರ್‌ಗೆ ತಮಾಷೆಯಾಗಿ ಪ್ರಶ್ನೆ ಮಾಡಲು ಆರಂಭಿಸಿದ್ರು. "ಅಮೃತಾ ಅವರೇ ನೀವು ಧನಂಜಯ್ ಅವರೊಂದಿಗೆ ಯಾಕೆ ಸಿನಿಮಾ ಮಾಡುತ್ತೀರಾ? ಬೇರೆ ಕಲಾವಿದರೊಂದಿಗೆ ನಟಿಸಿ, ಬೇರೆ ಕಲಾವಿದರಿಗೆ ಡೇಟ್ಸ್ ಕೊಡಿ. ಮೂರ್ಮೂರು ಸಿನಿಮಾ ಇವರೊಟ್ಟಿಗೆ ಮಾಡುತ್ತಿದ್ದರೆ, ಬೇರೆಯವರಿಗೆ ಹೇಗೆ ಸಿಗೋದು ತಾವು? ಇಷ್ಟೆಲ್ಲಾ ಮಾಡಿನೂ ಅವರು ನಿಮ್ಮ ಬಗ್ಗೆ ಹೊಗಳುತ್ತಿಲ್ಲ. ನಮ್ಮೊಟ್ಟಿಗೆ ಕೆಲಸ ಮಾಡಿದ್ರೆ, ಅರ್ಧ ಗಂಟೆ ಮಾತಾಡುತ್ತಿದ್ದೆವು." ಎಂದಿದ್ದಾರೆ.
ಆಗ ಡಾಲಿ ಧನಂಜಯ್ ಮೂರು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು ಯಾಕೆ? ಅಂತ ಕಿಚ್ಚ ಸುದೀಪ್‌ಗೆ ವಿವರಿಸಿದ್ರು. "ಪಾಪ್ ಕಾರ್ನ್ ಮಂಕಿ ಟೈಗರ್ ನೋಡಿ ಶಂಕರ್ ಅವರು ಬಡವ ರಾಸ್ಕಲ್‌ಗೆ ಆಯ್ಕೆ ಮಾಡಿದ್ದರು. ಬಡವ ರಾಸ್ಕಲ್ ಹಿಟ್ ಆಯ್ತಲ್ಲ ಅಂತ. ನಮ್ಮ ಯೋಗಿ,ಕಾರ್ತಿಕ್ ಹಾಗೂ ವಿಜಯ್ ಅವರು ಅದೇ ಪೇರ್‌ನ ಕಂಟಿನ್ಯೂ ಮಾಡ್ತು." ಎಂದು ಹೇಳಿದ್ದಾರೆ.


Click it and Unblock the Notifications











