For Quick Alerts
  ALLOW NOTIFICATIONS  
  For Daily Alerts

  ಮಾಣಿಕ್ಯ ನಂತರ ಸುದೀಪ್ ಮುಂದಿನ ಚಿತ್ರ ಯಾವುದು?

  |

  ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ 'ಮಾಣಿಕ್ಯ' ಚಿತ್ರದ ನಂತರ ಮುಂದಿನ ಚಿತ್ರ ಯಾವುದು? ಈ ಬಗ್ಗೆ ವಿಷಯವೊಂದು ಹೊರಬಿದ್ದಿದೆ.

  ಸುಮಾರು ಒಂದು ವರ್ಷದಿಂದ ಸುದೀಪ್ ಕಾಲ್ಶೀಟಿಗಾಗಿ ಕಾಯುತ್ತಿದ್ದ ನಂದಕಿಶೋರಿಗೆ ಈಗ ಕಿಚ್ಚ ಸುದೀಪ್ ಡೇಟ್ಸ್ ನೀಡಿದ್ದಾರೆ. ಕಾಲಿ ಕ್ವಾಟ್ರು 'ವಿಕ್ಟರಿ' ಚಿತ್ರವನ್ನು ನಿರ್ದೇಶಿಸಿದ್ದ ನಂದ ಕಿಶೋರ್, ಸುದೀಪ್ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

  ಈ ಚಿತ್ರಕ್ಕೆ ಬಂಡವಾಳ ಹೂಡುವವರು ಚಂದ್ರು. ಮಾಣಿಕ್ಯ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದ ವೇಳೆ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆಯಿದೆ ಎಂದು ಚಿತ್ರಲೋಕ ಡಾಟ್ ಕಾಂ ವರದಿ ಮಾಡಿದೆ.

  ಕೆಲವು ತಿಂಗಳ ಹಿಂದೆಯೇ ನಂದಕಿಶೋರ್ ನಿರ್ದೇಶನದಡಿಯ ಚಿತ್ರಕ್ಕೆ ಒಪ್ಪಿದ್ದ ಸುದೀಪ್, ಈಗ ಡೇಟ್ಸ್ ನೀಡಿದ್ದಾರೆ. ನಂದಕಿಶೋರ್ ಪೊಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಂಡಿದ್ದಾರೆ.

  ಹಾಗಿದ್ದರೆ ಸುದೀಪ್ ಅವರ ಖ್ಯಾತ ತಮಿಳು ನಿರ್ದೇಶಕ ರವಿಕುಮಾರ್ ಜೊತೆಗಿನ ಚಿತ್ರದ ಅಪ್ಡೇಟ್ಸ್ ಏನಾಯಿತು? ಮುಂದೆ ಓದಿ...

  ಲೇಟಾಗುವ ಸಾಧ್ಯತೆ ಹೆಚ್ಚು

  ಲೇಟಾಗುವ ಸಾಧ್ಯತೆ ಹೆಚ್ಚು

  ಮಾಣಿಕ್ಯ ಚಿತ್ರದ ನಂತರ ಸುದೀಪ್, ಖ್ಯಾತ ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ನಿರ್ದೇಶನದ ಚಿತ್ರದಲ್ಲಿ ನಟಿಸುವುದು ಹೆಚ್ಚುಕಮ್ಮಿ ಕನ್ಫರ್ಮ್ ಆಗಿತ್ತು. ಆದರೆ ಈಗ ಚಿತ್ರ ಸೆಟ್ಟೇರುವುದು ಸ್ವಲ್ಪ ಲೇಟಾಗುವ ಸಾಧ್ಯತೆಯಿದೆ.

  ರವಿಕುಮಾರ್ ಬ್ಯೂಸಿ ಶೆಡ್ಯೂಲ್

  ರವಿಕುಮಾರ್ ಬ್ಯೂಸಿ ಶೆಡ್ಯೂಲ್

  ರವಿಕುಮಾರ್ ಈಗ ರಜನೀಕಾಂತ್ ಅಭಿನಯದ ಚಿತ್ರದಲ್ಲಿ ಬ್ಯೂಸಿಯಾಗಿರುವುದರಿಂದ ಚಿತ್ರ ಆರೇಳು ತಿಂಗಳು ಲೇಟಾಗುವ ಸಾಧ್ಯತೆ ಹೆಚ್ಚು. ರವಿಕುಮಾರ್ - ಸುದೀಪ್ ಕಾಂಬಿನೇಶನಿನ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುವುದು ಖಾತ್ರಿಯಾಗಿತ್ತು.

  ಮಾಣಿಕ್ಯ ಶೂಟಿಂಗ್

  ಮಾಣಿಕ್ಯ ಶೂಟಿಂಗ್

  ಮಾಣಿಕ್ಯ ಚಿತ್ರದ ಶೂಟಿಂಗ್ ಸದ್ಯ ಭರದಿಂದ ಸಾಗಿದೆ. ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಬೈಕ್ ಸ್ಟಂಟ್ ವೇಳೆ ಸುದೀಪ್ ಗಾಯಗೊಂಡು, ಚೇತರಿಸಿ ಕೊಂಡಿದ್ದರು.

  ಯುಗಾದಿ ವೇಳೆ ಮಾಣಿಕ್ಯ

  ಯುಗಾದಿ ವೇಳೆ ಮಾಣಿಕ್ಯ

  ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಮಾಣಿಕ್ಯ ಚಿತ್ರ ಇದೇ ಯುಗಾದಿ ಹಬ್ಬದ ವೇಳೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದರು.

  ರವಿಮಾಮನ ಜೊತೆ ಸುದೀಪ್

  ರವಿಮಾಮನ ಜೊತೆ ಸುದೀಪ್

  ಮಾಣಿಕ್ಯ ಚಿತ್ರದ ಮೂಲಕ ಮೊದಲ ಬಾರಿಗೆ ಕನಸುಗಾರ ರವಿಚಂದ್ರನ್ ಮತ್ತು ಸುದೀಪ್ ಒಟ್ಟಾಗಿ ನಟಿಸಲಿದ್ದಾರೆ. ತೆಲುಗಿನ ಮಿರ್ಚಿ ಚಿತ್ರದ ರಿಮೇಕಾಗಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸುದೀಪ್, ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ.

  English summary
  Sudeep next movie with Victory movie director Nanda Kishore. Schedule date of shooting of this upcoming movie will be announced during Manikya audio release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X