ಕೋಟಿಗೊಬ್ಬ-3 ಎಲ್ಲಿಯವರೆಗೆ ಬಂತು?: ಕಿಚ್ಚ ಸುದೀಪ್ ನೀಡಿದ ಮಾಹಿತಿ

ನಟ ಸುದೀಪ್ ಈಗ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಅದರ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಕಂಡು ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Recommended Video

ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Filmibeat Kannada

ಕೊರೊನಾ ವೈರಸ್ ಸಂಕಷ್ಟದ ನಡುವೆ ಕನ್ನಡ ಚಿತ್ರರಂಗದ ಅನೇಕರು ಸಿನಿಮಾ ಚಿತ್ರೀಕರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಕಾರ್ಮಿಕರು ಯಾರಿಗೂ ಕೆಲಸವಿಲ್ಲದಂತೆ ಆಗುತ್ತದೆ ಎಂಬ ಕಾರಣಕ್ಕೆ ಸುದೀಪ್, ರಿಸ್ಕ್ ತೆಗೆದುಕೊಂಡು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಶಿವ ಕಾರ್ತಿಕ್ ನಿರ್ದೇಶನದ 'ಕೋಟಿಗೊಬ್ಬ 3' ಚಿತ್ರದ ಕುರಿತು ಯಾವುದೇ ಮಾಹಿತಿ ಬಂದಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೋಟಿಗೊಬ್ಬ 3 ಅಪ್‌ಡೇಟ್ ನೀಡಿ

ಕೋಟಿಗೊಬ್ಬ 3 ಅಪ್‌ಡೇಟ್ ನೀಡಿ

'ಕೋಟಿಗೊಬ್ಬ 3' ಚಿತ್ರದಿಂದ ಒಂದಾದರೂ ಹಾಡು ಬಿಡುಗಡೆ ಮಾಡಿ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆ ಇರಿಸುತ್ತಿದ್ದಾರೆ. ಮೂರು ತಿಂಗಳಿನಿಂದ ಕೋಟಿಗೊಬ್ಬ 3 ಚಿತ್ರದ ಯಾವುದೇ ಅಪ್‌ಡೇಟ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಫ್ಯಾಂಟಮ್ ಚಿತ್ರತಂಡವನ್ನು ನೋಡಿದ ಇವರು ಕಲಿಯಬೇಕು ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರೀಕರಣ ಮುಗಿದಿದೆ

ಚಿತ್ರೀಕರಣ ಮುಗಿದಿದೆ

ಈ ನಡುವೆ 'ಕೋಟಿಗೊಬ್ಬ 3' ನಾಯಕ ನಟ ಸುದೀಪ್ ಅಭಿಮಾನಿಗಳ ಕೋಪವನ್ನು ತಣಿಸಲು ಪ್ರಯತ್ನಿಸಿದ್ದಾರೆ. ಅನೇಕರು ಟ್ವೀಟ್ ಮೂಲಕ ಕೋಟಿಗೊಬ್ಬ 3 ಚಿತ್ರದ ಬಗ್ಗೆ ಒಂದು ಅಪ್‌ಡೇಟ್ ನೀಡುವಂತೆ ಕೇಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಸುದೀಪ್ ತಿಳಿಸಿದ್ದಾರೆ.

ಕೆಲಸ ಮುಗಿದ ಕೂಡಲೇ ಬಿಡುಗಡೆ

ಕೆಲಸ ಮುಗಿದ ಕೂಡಲೇ ಬಿಡುಗಡೆ

ಚಿತ್ರದ ಸ್ವಲ್ಪ ಮಟ್ಟಿನ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿದಿದೆ. ಪ್ರಸ್ತುತ ಈಗಿನ ಸನ್ನಿವೇಶದಿಂದ ಈ ಕೆಲಸ ಮುಕ್ತಾಯವಾಗಿಲ್ಲ. ಹೀಗಾಗಿ ಸ್ವಲ್ಪವೇ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಿ ಶೀಘ್ರವೇ ಬಿಡುಗಡೆ ಮಾಡಲು ಚಿತ್ರತಂಡ ಕಾದಿದೆ ಎಂದು ಸುದೀಪ್ ತಿಳಿಸಿದ್ದಾರೆ.

ವಿಕ್ರಾಂತ್ ರೋಣ ಹುಡುಕಾಟ

ವಿಕ್ರಾಂತ್ ರೋಣ ಹುಡುಕಾಟ

ಇದರಿಂದ ಅಭಿಮಾನಿಗಳ ಅಸಮಾಧಾನ ಕೊಂಚ ತಗ್ಗಿದ್ದರೂ ಪೂರ್ತಿ ಶಮನವಾಗಿಲ್ಲ. ಕೋಟಿಗೊಬ್ಬ 3ಯ ಎರಡನೆಯ ಹಾಡನ್ನು ಬಿಡುಗಡೆ ಮಾಡುವುದಾಗಿ ಹೇಳಿ ತಿಂಗಳುಗಳೇ ಕಳೆದಿವೆ. ಮೊದಲು ಅದನ್ನು ಬಿಡುಗಡೆ ಮಾಡಿ ಎಂದಿದ್ದಾರೆ. ಇತ್ತೀಚೆಗೆ 'ಫ್ಯಾಂಟಮ್' ಚಿತ್ರದ ವಿಡಿಯೋ ಪೋಸ್ಟ್ ಮಾಡಿದ್ದ ಚಿತ್ರತಂಡ, 'ವಿಕ್ರಾಂತ್ ರೋಣ ಹುಡುಕುತ್ತಿರುವುದು ಏನನ್ನು ಎಂದು ಊಹಿಸಿ?' ಎಂದು ಕೇಳಿತ್ತು. ಅದಕ್ಕೆ ಅನೇಕರು ಬಹುಶಃ ಕಳೆದುಹೋಗಿರುವ ಕೋಟಿಗೊಬ್ಬ ತಂಡವನ್ನು ಹುಡುಕುತ್ತಿರಬೇಕು ಎಂದು ತಮಾಷೆ ಮಾಡಿದ್ದರು.

More from Filmibeat

English summary
Kichcha Sudeep gives update about Kotigobba 3 and said little bit of post production work is left over.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X