ಕನ್ನಡದಲ್ಲಿ ಅಜಿತ್ 'ವಲಿಮೈ': ಟ್ರೇಲರ್ ಮೆಚ್ಚಿದ ಕಿಚ್ಚ!
ಸದ್ಯ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಎಲ್ಲಾ ಚಿತ್ರರಂಗಗಳಲ್ಲೂ ಸಾಲು, ಸಾಲಾಗಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಕನ್ನಡದಲ್ಲಿ ಕೂಡ ಬಹುತೇಕ ನಿರೀಕ್ಷಿತ ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲೂ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿವೆ ಹಾಗಾಗಿ ಬೇರೆ ಭಾಷೆ ಸಿನಿಮಾದಲ್ಲಿ ರಿಲೀಸ್ ಆದರೂ ಕೂಡ ಅದನ್ನು ಕನ್ನಡ ಚಿತ್ರ ಎಂದೇ ಪರಿಗಣಿಸಬೇಕಾಗುತ್ತದೆ.
ಸದ್ಯ ಬಹುತೇಕ ಪರಭಾಷ ಸಿನಿಮಾಗಳು ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿವೆ. ಅದರಲ್ಲಿ ನಟ ಅಜಿತ್ ಅಭಿನಯದ ತಮಿಳಿನ 'ವಲಿಮೈ' ಸಿನಿಮಾ ಕೂಡ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ವಲಿಮೈ ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿಯಲ್ಲೂ ಕೂಡ ರಿಲೀಸ್ ಆಗುತ್ತಿದೆ.
ಸದ್ಯ ಈ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಡಬ್ ಆಗಿರುವ ಟ್ರೇಲರ್ ಕೂಡ ಗಮನ ಸೆಳೆದಿದೆ. ಕನ್ನಡ ಟ್ರೇಲರನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್ ಖಾತೆಯ ಮೂಲಕ ಟ್ರೇಲರ್ ಅನಾವರಣ ಮಾಡಿದ್ದಾರೆ. ಇದೇ ಫೆಬ್ರವರಿ 24ಕ್ಕೆ ವಲಿಮೈ ಸಿನಿಮಾ ರಿಲೀಸ್ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಅಜಿತ್ ಜೊತೆಗೆ ಹುಮಾ ಖುರೇಶಿ ಅಭಿನಯಿಸದ್ದಾರೆ. 'ವಲಿಮೈ'ಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಆದರೆ ಈ ಚಿತ್ರಕ್ಕೆ ದೊಡ್ಡ ಮಟ್ಟದ ಬಜೆಟ್ ಹಾಕಲಾಗಿದೆ. ಚಿತ್ರದ್ಲಿ ಅಜಿತ್ ಸಿಕ್ಕಾಪಟ್ಟೆ ಆ್ಯಕ್ಷನ್ ಮಾಡಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಹಾನಿ ಅಂತಲೇ ಸಿನಿಮಾ ತಂಡ ಹೇಳಿಕೊಂಡಿದೆ.

ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಚಿತ್ರಕ್ಕೆ OTTಯಿಂದ 100 ಕೋಟಿ ಆಫರ್: 3D ಟೀಸರ್ ಯಾವಾಗ?
ಅಜಿತ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಅರ್ಜುನ್ ಎಂಬ ಹೆಸರಿನ ಮೂಲಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ, ಕ್ರೈಂ ನಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಗುಂಪುಗಳನ್ನು ಭೇದಿಸುವ ಪಾತ್ರವನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬರಲಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.


Click it and Unblock the Notifications











