'ಫ್ಯಾಂಟಮ್‌'ಗಾಗಿ ಸುದೀಪ್ ಸಿಕ್ಸ್ ಪ್ಯಾಕ್: ಬೆರಗಾದ ನಿರ್ದೇಶಕ ಅನೂಪ್ ಭಂಡಾರಿ

ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಚಿತ್ರಕ್ಕಾಗಿ ಸುದೀಪ್ ಭರ್ಜರಿ ಕಸರತ್ತು ನಡೆಸಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡು ದೇಹ ದಂಡಿಸಿರುತ್ತಿರುವ ಫೋಟೊಗಳನ್ನು ಇತ್ತೀಚೆಗೆ ಸುದೀಪ್ ಹಂಚಿಕೊಂಡಿದ್ದರು. 'ಪೈಲ್ವಾನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಕ್ಕಿಂತಲೂ ಹೆಚ್ಚು ಕಟ್ಟುಮಸ್ತಾಗಿ ಸುದೀಪ್ ಕಾಣಿಸಿಕೊಂಡಿದ್ದಾರೆ.

Recommended Video

ವಿದೇಶದಿಂದ ಅಪ್ಪು ಜೊತೆ ಮಾತುಕತೆ ನಡೆಸಿದ ವಿಶೇಷ ಅಭಿಮಾನಿ | Puneeth Rajkumar

ಲಾಕ್ ಡೌನ್ ಅವಧಿಯನ್ನು ಸುದೀಪ್ ಫ್ಯಾಟಮ್ ಚಿತ್ರದ ತಯಾರಿಗೆ ಮೀಸಲಿಟ್ಟಿದ್ದಾರೆ. ವಿಕ್ರಾಂತ್ ರೋಣ ಪಾತ್ರಕ್ಕಾಗಿ ದೇಹ ಹುರಿಗಟ್ಟಿಸಿಕೊಳ್ಳುತ್ತಿರುವ ಸುದೀಪ್ ಅದರ ಫೋಟೊದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ 'ಒಳ್ಳೆಯದನ್ನು ಪಡೆಯಲು ಪ್ರಯತ್ನ ಮಾಡಬೇಕು' ಎಂಬರ್ಥದ ಸಾಲನ್ನು ಬರೆದುಕೊಂಡಿದ್ದರು. ಇದು ಲಾಕ್ ಡೌನ್ ಅವಧಿಯಲ್ಲಿ ಸುದೀಪ್ ಹೇಗೆ ಸಮಯ ವಿನಿಯೋಗಿಸುತ್ತಿದ್ದಾರೆ ಎಂಬುದನ್ನು, ಅವರ ದೈಹಿಕ ಬದಲಾವಣೆಯನ್ನು ವಿವರಿಸಿತ್ತು. ಮುಂದೆ ಓದಿ...

ಮತ್ತೊಂದು ಹಂತಕ್ಕೆ ಫಿಟ್ನೆಸ್

ಮತ್ತೊಂದು ಹಂತಕ್ಕೆ ಫಿಟ್ನೆಸ್

ಸುದೀಪ್ ಪ್ರಯತ್ನವನ್ನು ನಿರ್ದೇಶಕ ಅನೂಪ್ ಭಂಡಾರಿ ಕೊಂಡಾಡಿದ್ದಾರೆ. ಫ್ಯಾಂಟಮ್ ಚಿತ್ರದಲ್ಲಿ ಅವರ ಪಾತ್ರಕ್ಕೆ ಟೋನ್ಡ್ ಬಾಡಿ ಬೇಕು ಎಂದು ಆಲೋಚಿಸಲಾಗಿತ್ತು. ಪೈಲ್ವಾನ್ ಚಿತ್ರಕ್ಕೆ ವರ್ಕೌಟ್ ಆರಂಭಿಸಿದ ಬಳಿಕ ತಮ್ಮ ಫಿಟ್ನೆಸ್ ನೀತಿಯನ್ನು ಮುಂದುವರಿಸಿದ್ದಾರೆ. ಈಗ ಅವರ ದೇಹದಾರ್ಢ್ಯತೆ ಮತ್ತೊಂದು ಮಟ್ಟಕ್ಕೆ ತಲುಪಿದೆ ಎಂದು ಅನೂಪ್ ಹೇಳಿದ್ದಾರೆ.

ಸಿಕ್ಸ್ ಪ್ಯಾಕ್ ಖಾತರಿಯಿತ್ತು

ಸಿಕ್ಸ್ ಪ್ಯಾಕ್ ಖಾತರಿಯಿತ್ತು

'ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಎಂದೇನೂ ನಾವು ಕೇಳಿರಲಿಲ್ಲ. ಆದರೆ ಅವರು ಅದನ್ನು ಮಾಡಿಕೊಂಡು ಬರುತ್ತಾರೆ ಎನ್ನುವುದು ನನಗೆ ಖಚಿತವಾಗಿತ್ತು. ಅವರು ಪಡುತ್ತಿರುವ ಶ್ರಮವನ್ನು ನಾವು ಈಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ' ಎಂದು ತಿಳಿಸಿದ್ದಾರೆ.

ನಾನೂ ಜಿಮ್ ಮಾಡುವಂತಾಯ್ತು

ನಾನೂ ಜಿಮ್ ಮಾಡುವಂತಾಯ್ತು

'ಮೊದಲ ಷೆಡ್ಯೂಲ್ ಶೂಟಿಂಗ್ ಸಂದರ್ಭದಲ್ಲಿ ಪ್ಯಾಕ್ ಅಪ್ ನಂತರ ಜಿಮ್‌ಗೆ ಹೋಗುವುದಾಗಿ ನಾನು ಅವರಿಗೆ ಭರವಸೆ ನೀಡಿದ್ದೆ. ಇದೊಂಥರ ನನಗೆ ಕಷ್ಟಕರ ವರವಾಗಿತ್ತು. ಇಲ್ಲದಿದ್ದರೆ ನಾನು ಫಿಟ್ ಆಗುವ ಯಾವುದೇ ಪ್ರಯತ್ನವನ್ನು ಕೂಡ ಮಾಡುತ್ತಿರಲಿಲ್ಲ' ಎಂದು ತಮ್ಮ ಮೇಲೆ ಸುದೀಪ್ ಬೀರಿದ ಪ್ರಭಾವವನ್ನು ಹೇಳಿದ್ದಾರೆ.

ನಾಯಕಿ ಅಂತಿಮಗೊಂಡಿಲ್ಲ

ನಾಯಕಿ ಅಂತಿಮಗೊಂಡಿಲ್ಲ

'ಫ್ಯಾಟಂ' ಚಿತ್ರದ ಮೊದಲ ಷೆಡ್ಯೂಲ್ ಲಾಕ್ ಡೌನ್‌ಗೆ ಮೊದಲೇ ಆರಂಭವಾಗಿತ್ತು. ನಂತರದ ಅವಧಿಯಲ್ಲಿ ಸುದೀಪ್ ಮತ್ತಷ್ಟು ವ್ಯಾಯಾಮ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸುದೀಪ್ ಅವರಿಗೆ ನಾಯಕಿ ಯಾರು ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ.

More from Filmibeat

English summary
Director Anup Bhandari on Sudeep efforts to get six pack abs for his upcoming movie Phantom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X