ಕುಚಿಕು ಗೆಳೆಯ ದರ್ಶನ್ ಅಪಘಾತದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದೇವರಾಜ್ ಅವರ ಅಪಘಾತ ಸುದ್ದಿ ಕೇಳಿ ಇಡೀ ಸ್ಯಾಂಡಲ್ ವುಡ್ ಆಘಾತಕ್ಕೆ ಒಳಗಾಗಿದೆ. ನಿರ್ಮಾಪಕ ಸಂದೇಶ ನಾಗರಾಜ್, ನಟ ಸೃಜನ್ ಲೋಕೇಶ್, ಧ್ರುವ ಸರ್ಜಾ ಸೇರಿದಂತೆ ಹಲವು ನಟರು ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿ ದಾಸನ ಆರೋಗ್ಯ ವಿಚಾರಿಸಿದ್ದಾರೆ.
ಹಿಗಿರುವಾಗ, ಎಲ್ಲೋ ಒಂದು ಕಡೆ ದಾಸನ ಅಭಿಮಾನಿಗಳಿಗೆ ಮತ್ತು ಸುದೀಪ್ ಅಭಿಮಾನಿಗಳಿಗೆ ಒಂದು ನಿರೀಕ್ಷೆ ಇತ್ತು. ದರ್ಶನ್ ಅವರ ಅಪಘಾತ ಸುದ್ದಿ ಕೇಳಿ ಕಿಚ್ಚ ಸುದೀಪ್ ಅವರ ಆಸ್ಪತ್ರೆಗೆ ಭೇಟಿ ಕೊಡ್ತಾರೆ ಎಂಬ ಆಶಯ ಇತ್ತು.
ದಿನ ಕಳೆದರೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈಗ ಕಿಚ್ಚ ಸುದೀಪ್, ತಮ್ಮ ಕುಚಿಕು ಗೆಳೆಯನ ಅಪಘಾತದ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಆದಷ್ಟೂ ಬೇಗ ಚೇತರಿಕೆಯಾಗಲಿ' ಎಂದು ಶುಭಕೋರಿದ್ದಾರೆ. ಮುಂದೆ ಓದಿ....

ದಚ್ಚು ಆರೋಗ್ಯ ಚೇತರಿಕೆಯಾಗಲಿ
ದರ್ಶನ್ ಕಾರು ಅಪಘಾತವಾಗಿ, ಅವರು ಆಸ್ಪತ್ರೆ ಸೇರಿರುವ ಸುದ್ದಿಯನ್ನ ಗಮನಿಸಿದ ನಟ ಸುದೀಪ್ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ''ನೀನು ಆರೋಗ್ಯವಾಗಿದ್ದೀಯಾ ಎಂದು ಕೇಳಿ ತುಂಬಾ ಸಂತೋಷವಾಯಿತು. ಆದಷ್ಟೂ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಕೋಪ, ಮುನಿಸು ಸಹಜ
''ಮೈ ಫ್ರೆಂಡ್''.....ಸುದೀಪ್ ಅವರಿಂದ ದರ್ಶನ್ ಬಗ್ಗೆ ಇಂತಹದೊಂದು ಪದ ಕೇಳಿ ಬಹಳ ದಿನವಾಯಿತು. ಒಂದು ಕಾಲದಲ್ಲಿ ಪ್ರಾಣ ಸ್ನೇಹಿತರಂತಿದ್ದ ಸುದೀಪ್ ಮತ್ತು ದರ್ಶನ್ ಕೆಲವು ವೈಯಕ್ತಿಕ ಕಾರಣಗಳಿಂದ ದೂರುವಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪರಸ್ಪರ ಇಬ್ಬರು ಮಾತನಾಡಿಕೊಂಡಿದ್ದಾಗಲಿ, ಅಥವಾ ಭೇಟಿಯಾಗಿದ್ದಾಗಲಿ ನಡೆಯಲಿಲ್ಲ. ಕೊನೆಗೂ ಸುದೀಪ್ ಅವರು ದಾಸನ ಬಗ್ಗೆ ಚಿಂತಿಸಿದ್ದಾರೆ.

ಇದೇ ಅಲ್ಲವೇ ಸ್ನೇಹ..
ಎಷ್ಟೇ ದ್ವೇಷವಿದ್ದರೂ, ಎಷ್ಟೇ ಕೋಪವಿದ್ದರೂ ಸ್ನೇಹಿತ ಕಷ್ಟದಲ್ಲಿದ್ದಾನೆ ಎಂದು ತಿಳಿದ ಮೇಲೆ ಅವರ ಬಗ್ಗೆ ಚಿಂತಿಸುವುದೇ ಸ್ನೇಹ. ಇದು ಸುದೀಪ್ ಮತ್ತು ದರ್ಶನ್ ವಿಚಾರದಲ್ಲೂ ಸಾಬೀತಾಗಿದೆ. ಗೆಳೆಯ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾನೆ ಎಂಬ ವಿಷ್ಯ ಗೊತ್ತಿದ್ದರೂ ಆ ಬಗ್ಗೆ ಕನಿಷ್ಟ 'ಚೇತರಿಕೆಯಾಗಲಿ' ಎಂದು ಆಶಿಸಿದಿದ್ದರೇ ಹೇಗೆ....ಇಬ್ಬರ ನಡುವೆ ಎಷ್ಟೇ ಮನಸ್ತಾಪವಿದ್ದರೂ ಅದು ಕೇವಲ ಕೆಲವು ವಿಷ್ಯಗಳಲ್ಲಿ ಮಾತ್ರ. ಅದನ್ನ ಬಿಟ್ಟರೇ ಇವರಿಬ್ಬರು ಫ್ರೆಂಡ್ಸ್ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.?

ಆಸ್ಪತ್ರೆಗೆ ಭೇಟಿ ಕೊಡ್ತಾರಾ.?
ಕೆಸಿಸಿ ಟೂರ್ನಿಯ ಯಶಸ್ಸಿನ ಸಂಭ್ರಮದಲ್ಲಿ ಕಿಚ್ಚ ಸುದೀಪ್, ಪೈಲ್ವಾನ್, ಕೋಟಿಗೊಬ್ಬ, ತೆಲುಗಿನ ಸೈರಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹಶಃ ಈ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ದರ್ಶನ್ ಅವರನ್ನ ನೋಡಲು ಹೋಗ್ತಾರಾ ಎಂಬ ಕಾತುರು ಈಗ ಕಾಡ್ತಿದೆ. ಹೋದರು ಅಚ್ಚರಿ ಇಲ್ಲ. ಕಾದು ನೋಡೋಣ.

ದರ್ಶನ್ ಆರೋಗ್ಯವಾಗಿದ್ದಾರೆ
ಇನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಅವರು ಆರೋಗ್ಯವಾಗಿದ್ದಾರೆ. ದರ್ಶನ್ ಬಲಗೈಗೆ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಹುಶಃ ನಾಳೆ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು.


Click it and Unblock the Notifications










