For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಬಗ್ಗೆ ಪವರ್ ಸ್ಟಾರ್ ಹೇಳಿದ ಮುತ್ತಿನಂತ ಮಾತು!

  |

  ಮೂರ್ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ ಕಪ್ ಪಂದ್ಯದ ವೇಳೆ ಇತ್ತಂಡಗಳ ನಡುವೆ ನಡೆದ ಮನಸ್ತಾಪದ ಬೆಂಕಿಗೆ ಅವರವರ ಅಭಿಮಾನಿಗಳು ಯಾವ ರೀತಿ ತುಪ್ಪ ಸುರಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

  ಇದಾದ ನಂತರ ಸುದೀಪ್ ಮತ್ತು ಶಿವಣ್ಣ ತಮ್ಮ ಅಭಿಮಾನಿಗಳಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ, ಸ್ಪಷ್ಟೀಕರಣ ನೀಡಿದ್ದರೂ, 'ಅಭಿಮಾನಿಗಳ ಅಭಿಮಾನದ ಅತಿರೇಕ' ಮಾತ್ರ ಕಮ್ಮಿಯಾಗಲೇ ಇಲ್ಲ. (ಕಲಿ ಚಿತ್ರದಲ್ಲಿ ಪವರ್ ಸ್ಟಾರ್ ಪಂಚ್)

  ಸಿಸಿಎಲ್ ಮೊದಲ ಆವೃತ್ತಿಯಲ್ಲಿ ಶಿವರಾಜ್ ಕುಮಾರ್ ಭಾಗವಹಿಸಿದ್ದು ಬಿಟ್ಟರೆ, ನಂತರದ ಆವೃತ್ತಿಗೆ ಶಿವಣ್ಣನ ಗೈರು ಮತ್ತಷ್ಟು ಗುಸುಗುಸು ಸುದ್ದಿಗೆ ದಾರಿಯಾಯಿತು.

  ಇನ್ನೇನು ಈ ಅನಾವಶ್ಯಕ ವಿವಾದಗಳು ತಣ್ಣಗಾಯಿತು ಎನ್ನುವಷ್ಟರಲ್ಲಿ, ಪುನೀತ್ ಅಭಿನಯದ 'ರಣವಿಕ್ರಮ' ಚಿತ್ರ ಪ್ರದರ್ಶನದ ವೇಳೆ 'ರನ್ನ' ಚಿತ್ರದ ಟೈಟಲ್ ಪ್ರದರ್ಶನಗೊಂಡಾಗ ಅಪ್ಪು ಅಭಿಮಾನಿಗಳು ಥಿಯೇಟರ್ ನಲ್ಲಿ ನಡೆಸಿದ ದಾಂಧಲೆ ವಿವಾದವನ್ನು ಮತ್ತೆ ಜೀವಂತವಾಗಿರಿಸಿತು. (ಏಪ್ರಿಲ್ ತಿಂಗಳು ಕಿಚ್ಚ ಅಭಿಮಾನಿಗಳಿಗೆ ಹಬ್ಬ)

  ಪುನೀತ್ 'ಚಕ್ರವ್ಯೂಹ'ಚಿತ್ರದಲ್ಲಿ ಸುದೀಪ್ ವಾಯ್ಸ್ ಓವರ್. ಈ ಬಗ್ಗೆ ಅಪ್ಪು, ಸುದೀಪ್ ಬಗ್ಗೆ ಅಭಿಮಾನದ ಮಾತು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

  ಮಗಳ ಮದುವೆಗೆ ಆಹ್ವಾನಿಸಿದ ಶಿವಣ್ಣ

  ಮಗಳ ಮದುವೆಗೆ ಆಹ್ವಾನಿಸಿದ ಶಿವಣ್ಣ

  ಕನ್ನಡದ ಇಬ್ಬರು ಪ್ರಮುಖ ನಟರ ಅಭಿಮಾನಿಗಳ ಶೀತಲ ಸಮರದ ನಡುವೆ, ಹ್ಯಾಟ್ರಿಕ್ ಶಿವರಾಜ್ ಕುಮಾರ್, ಸುದೀಪ್ ಮನೆಗೆ ತೆರಳಿ ಮಗಳ ಮನೆಗೆ ಆಹ್ವಾನಿಸಿ ಉಟ ಮಾಡಿ ಬಂದರು. ಸುದೀಪ್ ಮದುವೆಯಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದ್ದೂ ಗೊತ್ತೇ ಇದೆ.

  ಬಿಗ್ ಬಾಸ್ ಶೋನಲ್ಲಿ ಶಿವಣ್ಣ

  ಬಿಗ್ ಬಾಸ್ ಶೋನಲ್ಲಿ ಶಿವಣ್ಣ

  ಇದಾದ ನಂತರ ಕನ್ನಡದ ಜನಪ್ರಿಯ ಟಿವಿ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಶಿವಣ್ಣ ಭಾಗವಹಿಸಿ, ನಮ್ಮಿಬ್ಬರ ನಡುವೆ ಏನೂ ಮನಸ್ತಾಪವಿಲ್ಲ ಎಂದು ಸಾರಿದರು. ಶಿವಲಿಂಗ ಚಿತ್ರದ ಪ್ರಮೋಗಾಗಿ ಶಿವಣ್ಣ, ನಿರ್ದೇಶಕ ಪಿ ವಾಸು ಜೊತೆ ಆಗಮಿಸಿದ್ದರು.

  ಹೊಸ ಚಿತ್ರದ ಘೋಷಣೆ

  ಹೊಸ ಚಿತ್ರದ ಘೋಷಣೆ

  ಇದೇ ವೇದಿಕೆಯಲ್ಲಿ ಶಿವಣ್ಣ - ಸುದೀಪ್ ಹೊಸ ಚಿತ್ರದ ಘೋಷಣೆ ನಿರ್ದೇಶಕ ಪ್ರೇಮ್ ಅವರಿಂದಾಯಿತು. ಅದಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸಿ, ಚಿತ್ರ ಅಧಿಕೃತವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಲಾಂಚ್ ಕೂಡಾ ಆಯಿತು.

  ರಾಘಣ್ಣನ ಪುತ್ರನ ಸಿನಿಮಾದ ಸೆಟ್ ನಲ್ಲಿ ಕಿಚ್ಚ

  ರಾಘಣ್ಣನ ಪುತ್ರನ ಸಿನಿಮಾದ ಸೆಟ್ ನಲ್ಲಿ ಕಿಚ್ಚ

  ಇದಾದ ನಂತರ ರಾಘಣ್ಣ ಪುತ್ರ ವಿನಯ್ ರಾಜಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರದ ಶೂಟಿಂಗ್ ಸ್ಥಳಕ್ಕೆ ಸುದೀಪ್ ಭಾಗವಹಿಸಿ, ರಾಘಣ್ಣ ಮತ್ತು ಚಿತ್ರತಂಡದ ಜೊತೆಗೆ ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

  ಚಕ್ರವ್ಯೂಹ

  ಚಕ್ರವ್ಯೂಹ

  ಹಲವು ವಿಶೇಷತೆಗಳಿಂದ ಈಗಾಗಲೇ ಹೈಪ್ ಹುಟ್ಟುಹಾಕಿರುವ ಪುನೀತ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ಕಿಚ್ಚ ಸುದೀಪ್ ವಾಯ್ಸ್ ಓವರ್ ನೀಡಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟುಹಾಕಿದೆ. ಈ ಬಗ್ಗೆ ಪುನೀತ್ ಅಭಿಮಾನದ ಮಾತನ್ನಾಡಿದ್ದಾರೆ. ಮುಂದಿನ ಸ್ಲೈಡಿನಲ್ಲಿ ಓದಿ..

  ಅಪ್ಪು ಸಿನಿಮಾದಲ್ಲಿ ಕಿಚ್ಚ ವಾಯ್ಸ್ ಓವರ್

  ಅಪ್ಪು ಸಿನಿಮಾದಲ್ಲಿ ಕಿಚ್ಚ ವಾಯ್ಸ್ ಓವರ್

  ಯುಗಾದಿ ಹಬ್ಬದ ದಿನದಂದು ಚಕ್ರವ್ಯೂಹ ಚಿತ್ರದ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನ್ನಾಡುತ್ತಿದ್ದ ಪುನೀತ್, ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಚಿತ್ರದ ಕ್ಲೈಮ್ಯಾಕ್ಸಿಗೆ ಮುನ್ನ ವಾಯ್ಸ್ ಓವರ್ ನೀಡಲು ಸುದೀಪ್ ಬಳಿ ಮನವಿ ಮಾಡುವುದಾಗಿ ಹೇಳಿದ್ದರು. ನಾನು ಓಕೆ ಎಂದೆ - ಪುನೀತ್ ರಾಜಕುಮಾರ್.

  ವಾಯ್ಸ್ ಅಂದರೆ ಅದು ಸುದೀಪ್

  ವಾಯ್ಸ್ ಅಂದರೆ ಅದು ಸುದೀಪ್

  ಕನ್ನಡದಲ್ಲಿ ವಾಯ್ಸ್ ಎಂದರೆ ಅದಕ್ಕೆ ಇನ್ನೊಂದು ಆಯ್ಕೆಯಲ್ಲ. ಅದು ಸುದೀಪ್, ಚಿತ್ರದ್ಯೋಮದ ಬೆಸ್ಟ್ ಎವರ್ ವಾಯ್ಸ್ ಎಂದರೆ ಸುದೀಪ್ ಅವರದ್ದು. ನನ್ನ ಚಿತ್ರದಲ್ಲಿ ಸುದೀಪ್ ವಾಯ್ಸ್ ಓವರ್ ನೀಡುತ್ತಿರುವುದು ನನಗೆ ಬಹಳ ಸಂತೋಷದ ವಿಚಾರ ಎಂದು ಪುನೀತ್, ಕಿಚ್ಚನ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ.

  ಅಭಿಮಾನಿಗಳ ಖುಷಿ ದುಪ್ಪಟ್ಟು

  ಅಭಿಮಾನಿಗಳ ಖುಷಿ ದುಪ್ಪಟ್ಟು

  ವಾಯ್ಸ್ ಓವರ್ ನೀಡಲು ಸುದೀಪ್, ಸ್ಟುಡಿಯೋಗೆ ಬರುವಾಗ ನಾನು ಕೂಡಾ ಅಲ್ಲಿ ಹಾಜರಿದ್ದೆ. ಸುದೀಪ್ ನನ್ನ ಚಿತ್ರಕ್ಕೆ ವಾಯ್ಸ್ ಓವರ್ ನೀಡಿದ್ದರಿಂದ ಅಭಿಮಾನಿಗಳ ಖುಷಿ ದುಪ್ಪಟ್ಟಾಗಲಿದೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ.

  English summary
  Kichcha Sudeep voice over in Chakravyuha movie. The industries best ever voice is Sudeep's voice, Power Star Puneeth Rajkumar reaction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X