'ಬಿಗ್ ಬಾಸ್' ಶೋಗೆ ತಟ್ಟಲಿದ್ಯಾ 'ಐಟಿ' ದಾಳಿಯ ಬಿಸಿ.?

Recommended Video

Sandalwood IT Raid : ಐ ಟಿ ದಾಳಿಯಿಂದ ಸುದೀಪ್ ಹಾಗು ಬಿಗ್ ಬಾಸ್ ಶೋಗೂ ತೊಂದರೆ | FILMIBEAT KANNADA

ಸ್ಯಾಂಡಲ್ ವುಡ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಎರಡನೇ ದಿನವೂ ಮುಂದುವರೆದಿದ್ದು, ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇಂದು ರಾತ್ರಿಯೂ ಪರಿಶೀಲನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಸಹಜವಾಗಿ ತೀರಾ ಕುತೂಹಲ ಮತ್ತು ಅನುಮಾನಕ್ಕೆ ಕಾರಣವಾಗಿದೆ.

ಸತತ ಎರಡನೇ ದಿನ ಮುಂದುವರೆದ ಪರಿಶೀಲನೆಯಿಂದ ಸ್ಟಾರ್ ನಟರ ಚಿತ್ರಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಮತ್ತೊಂದೆಡೆ ಐಟಿ ದಾಳಿಯ ಬಿಸಿ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಗೂ ತಟ್ಟಲಿದೆ ಎಂಬ ಆತಂಕ ಕಾಡುತ್ತಿದೆ.

ಹೌದು, ಒಂದು ವೇಳೆ ಇಂದು ರಾತ್ರಿ ಮತ್ತು ನಾಳೆ ಬೆಳಿಗ್ಗೆವರೆಗೂ ಪರಿಶೀಲನೆ ಮುಂದುವರೆದರೇ, ವೀಕೆಂಡ್ನಲ್ಲಿ ನಡೆಯುವ ಬಿಗ್ ಬಾಸ್ ಕನ್ನಡ ಶೋಗೆ ಸಮಸ್ಯೆಯಾಗಲಿದೆ. ಅದು ಹೇಗೆ? ಮುಂದೆ ಓದಿ.....

ವಾರದ ಕಥೆ ಕಿಚ್ಚನ ಜೊತೆಗೆ ಕಷ್ಟ.!

ವಾರದ ಕಥೆ ಕಿಚ್ಚನ ಜೊತೆಗೆ ಕಷ್ಟ.!

ಶನಿವಾರ ಮತ್ತು ಭಾನುವಾರ ಬಿಗ್ ಬಾಸ್ ಶೋನಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಯಲಿದೆ. ಶನಿವಾರದ ಎಪಿಸೋಡ್ ಆಲ್ ಮೋಸ್ಟ್ ಶನಿವಾರ ಮಧ್ಯಾಹ್ನ ಅಥವಾ ಸಂಜೆ ರೆಕಾರ್ಡಿಂಗ್ ನಡೆಯುತ್ತೆ. ಒಂದು ವೇಳೆ ಐಟಿ ಪರಿಶೀಲನೆ ಮುಗಿಯದೇ ಹೋದ್ರೆ, ಈ ವಾರದ ಕಥೆಗೆ ಬ್ರೇಕ್ ಬೀಳುವ ಸಾಧ್ಯತೆ ಇರುತ್ತೆ.

ಬೆಳಗ್ಗೆ ಮುಗಿದರೂ ಸಮಸ್ಯೆಯಾಗಲ್ಲ

ಬೆಳಗ್ಗೆ ಮುಗಿದರೂ ಸಮಸ್ಯೆಯಾಗಲ್ಲ

ತಡರಾತ್ರಿಯೆಲ್ಲ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಮುಂಜಾನೆ ವೇಳೆ ಸುದೀಪ್ ಅವರನ್ನ ರಿಲೀಫ್ ಮಾಡಿದ್ರೆ, ಬಿಗ್ ಬಾಸ್ ಗೆ ಯಾವುದೇ ಸಮಸ್ಯೆಯಾಗಲ್ಲ. ಎಂದಿನಂತೆ ವಾರದ ಕಥೆ ಕಿಚ್ಚನ ಜೊತೆ ಪ್ರಸಾರವಾಗುತ್ತೆ. ಆದ್ರೆ, ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.

ಸತತ 24 ಗಂಟೆಗಳಿಂದ ಮುಂದುವರೆದ ಐಟಿ ಶೋಧ ಕಾರ್ಯ
ಮಧ್ಯಾಹ್ನದ ಮೇಲೆ ಮುಗಿದರೂ ಚಾಲೆಂಜ್

ಮಧ್ಯಾಹ್ನದ ಮೇಲೆ ಮುಗಿದರೂ ಚಾಲೆಂಜ್

ಒಂದು ವೇಳೆ ಐಟಿ ಅಧಿಕಾರಿಗಳ ಪರಿಶೀಲನೆ ನಾಳೆ ಮಧ್ಯಾಹ್ನದವರೆಗೂ ನಡೆದರೂ, ಸುದೀಪ್ ಮತ್ತು ಬಿಗ್ ಬಾಸ್ ಆಯೋಜಕರಿಗೆ ರೆಕಾರ್ಡಿಂಗ್ ಕಷ್ಟವಾಗಬಹುದು. ಆತುರದಿಂದ ಮನೆಯಿಂದ ಹೊರಟು, ಎಪಿಸೋಡ್ ನೋಡಿ, ಅದಕ್ಕೆ ತಯಾರಿ ನಡೆಸಿ, ರೆಕಾರ್ಡ್ ಮಾಡುವುದು ಚಾಲೆಂಜ್ ಆಗಿರುತ್ತೆ.

ನಿರಾಳವಾಗಿ ರೆಕಾರ್ಡಿಂಗ್ ಸಾಧ್ಯನಾ?

ನಿರಾಳವಾಗಿ ರೆಕಾರ್ಡಿಂಗ್ ಸಾಧ್ಯನಾ?

ಇದೆಲ್ಲವನ್ನ ಮೀರಿ ಇಂದೆ ಐಟಿ ಅಧಿಕಾರಿಗಳ ಪರಿಶೀಲನೆ ಮುಗಿದರೇ, ನಾಳೆ ನಿರಾಳವಾಗಿ ಬಿಗ್ ಬಾಸ್ ಶೋ ರೆಕಾರ್ಡ್ ಮಾಡಬಹುದು. ಅದಕ್ಕೆ ಬೇಕಾಗುವ ಸಮಯವಕಾಶ ಸಿಗುತ್ತೆ. ಸದ್ಯಕ್ಕೆ ಯಾವುದನ್ನ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಬಟ್, ಇಂದಿನ ಪರಿಸ್ಥಿತಿ ನೋಡಿದ್ರೆ ಬಿಗ್ ಬಾಸ್ ಶೋಗೂ ಐಟಿ ಬಿಸಿ ಮುಟ್ಟಲಿದೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.

More from Filmibeat

English summary
Kannada actor sudeep will face big challenge in Bigg boss recording for this week after the It raid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X