ಗಣೇಶ್ ದಂಪತಿಗೆ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್
ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಇಂದು ಮರೆಯಲಾಗದ ದಿನ. ಈ ದಿನ ಈ ಗೋಲ್ಡನ್ ಜೋಡಿ ಮದುವೆಯಾದ ಸುದಿನ.
ಫೆಬ್ರವರಿ 11, 2008 ಗಣೇಶ್ ಹಾಗೂ ಶಿಲ್ಪಾ ಜೋಡಿ ಹೊಸ ಬದುಕಿಗೆ ಕಾಲಿಟ್ಟರು. ಇಂದು ಈ ಜೋಡಿ ತಮ್ಮ 11ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂತಸದಲ್ಲಿ ಇದ್ದಾರೆ. ಚಿತ್ರರಂಗದ ಗೆಳೆಯ, ಗೆಳತಿಯರ ಜೊತೆಗೆ ಅಭಿಮಾನಿಗಳು ಸಹ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ '' ಹ್ಯಾಪಿ ಹ್ಯಾಪಿ ಡೇ ಟು ಹ್ಯಾಪಿ ಹ್ಯಾಪಿ ಕಪಲ್. ಇದೇ ರೀತಿ ಭವ್ಯವಾದ ಅನೇಕ ವರ್ಷಗಳು ಜೊತೆಯಲ್ಲಿ ಕಳೆಯಿರಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.'' ಎಂದು ವಿಶ್ ಮಾಡಿದ್ದಾರೆ.

ಸುದೀಪ್ ಜೊತೆಗೆ ನಟ ರವಿಶಂಕರ್ ಗೌಡ, ನಿರ್ಮಾಪಕ ಕಾರ್ತಿಕ್ ಗೌಡ ಸಹ ಗಣೇಶ್ ಹಾಗೂ ಶಿಲ್ವಾ ಗಣೇಶ್ ಗೆ ಶುಭಾಶಯ ತಿಳಿಸಿದ್ದಾರೆ.
ತಮ್ಮ ಪತ್ನಿ ಶಿಲ್ವಾ ಬಗ್ಗೆ ಟ್ಟಿಟ್ಟರ್ ನಲ್ಲಿ ಬರೆದುಕೊಂಡಿರುವ ಗಣೇಶ್ ''ನೀನು ನನ್ನ ಸಂಗಾತಿ, ನನ್ನ ಬೆಸ್ಟ್ ಫ್ರೆಂಡ್, ನನ್ನ ಮಾರ್ಗದರ್ಶಿ, ನನ್ನ ಪ್ರೀತಿ.'' ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











