ಅಮೆರಿಕದಿಂದ ಬಂದ ಶಿವಣ್ಣನನ್ನು 'ಆನಂದ'ದಿಂದ ಸ್ವಾಗತಿಸಿದ ಅಮ್ಮ-ಮಗಳು; ಸುಧಾರಾಣಿಯ ರಾಕಿಂಗ್ ಸೆಲೆಬ್ರೆಷನ್

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಕ್ಯಾನ್ಸರ್ ಫ್ರೀಯಾಗಿ ಮರಳಿರುವ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಶಿವಣ್ಣನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನೊಂದು ಕಡೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಮನೆಗೆ ಬಂದು ಹ್ಯಾಟ್ರಿಕ್ ಹೀರೋ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ.

ಇತ್ತ ಶಿವಣ್ಣ ಎವರ್‌ಗ್ರೀನ್ ಆನ್‌ಸ್ಕ್ರೀನ್ ಜೋಡಿ ಸುಧಾರಾಣಿ ತಮ್ಮದೇ ವಿಶಿಷ್ಟ ಸ್ಟೈಲ್‌ನಲ್ಲಿ ಶುಭಕೋರಿದ್ದಾರೆ. ಮಗಳೊಂದಿಗೆ ಅವರಿಬ್ಬರು ಜೋಡಿಯಾಗಿ ನಟಿಸಿದ್ದ 'ಆನಂದ್' ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿ ಶಿವಣ್ಣನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಅಮ್ಮ ಮಗಳು ಹಾಡಿದ ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Sudharani and her daughter dance to the Anand film song for Shivarajkumar s return from the USA

ಶಿವಣ್ಣ ಹಾಗೂ ಸುಧಾರಾಣಿ ಇಬ್ಬರೂ ಒಟ್ಟಿಗೆ ವೃತ್ತಿ ಬದುಕನ್ನು ಆರಂಭಿಸಿದ್ದರು. ಹೀಗಾಗಿ ಇಬ್ಬರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಆನಂದ್ ಸಿನಿಮಾದಿಂದ ಇಲ್ಲಿವರೆಗೂ ಅದೇ ಆತ್ಮೀಯತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇದೇ ಕಾರಣಕ್ಕೆ ಶಿವಣ್ಣ ಸಂಪೂರ್ಣವಾಗಿ ಗುಣಮುಖರಾಗಿ ಬಂದಿದ್ದಕ್ಕೆ ಮಗಳೊಂದಿಗೆ ಸೇರಿಕೊಂಡು 'ಆನಂದ್' ಸಿನಿಮಾದ ತಿಮ್ಮ ತಿಮ್ಮ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ಶಿವಣ್ಣನಿಗೆ ಡ್ಯಾನ್ಸ್ ಅಂದರೆ ಬಲು ಇಷ್ಟ. 62ನೇ ವಯಸ್ಸಿನಲ್ಲಿಯೂ ಶಿವರಾಜ್‌ಕುಮಾರ್ ಸುಸ್ತಾಗದಂತೆ ಹೆಜ್ಜೆ ಹಾಕುತ್ತಾರೆ. ಈಗ ಸುಧಾರಾಣಿ ಹಾಗೂ ಅವರ ಪುತ್ರಿ ಹೆಜ್ಜೆ ಹಾಕಿ ಮಾಡಿರುವ ವಿಡಿಯೋ ಶಿವಣ್ಣನಿಗೆ ಮಾಡುತ್ತಿರುವ ಪರ್ಫೆಕ್ಟ್ ವೆಲ್ ಕಮ್. ಅವರೇ ವಿಡಿಯೋವನ್ನು ಶೇರ್ ಮಾಡಿ ಶಿವಣ್ಣಿಗಾಗಿ ರಾಕಿಂಗ್ ವೆಲ್‌ಕಮ್ ಎಂದು ಹೇಳಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರೊಬ್ಬರು "ಅಮ್ಮ ಮಗಳು ಇಬ್ಬರರೂ ಸೂಪರ್ಬ್.. ಏನ್ ಎನರ್ಜಿ" ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ಇನ್ನೊಬ್ಬರು "ನೀವು ಡ್ಯಾನ್ಸ್ ಮಾಡುತ್ತೀರ ಅನ್ನೋದರಲ್ಲಿ ಡೌಟೇ ಇಲ್ಲ. ನಿಜ ಹೇಳಬೇಕು ಅಂದರೆ, ನಿಧಿಯವರ ಬಾಡಿ ಲಾಂಗ್ವೇಜ್ ನಿಜಕ್ಕೂ ಸೂಪರ್ಬ್‌. ಅವರು ಪ್ರೊಫೆಷನಲ್ ಡ್ಯಾನ್ಸರ್" ಎಂದಿದ್ದಾರೆ. ಹಾಗೇ " ಅಮ್ಮನ ಮಗಳ ಅಂತ ಕನ್‌ಫ್ಯೂಸ್ ಆಗ್ತಾರೆ ಗೊತ್ತಿಲ್ಲದೆ ಇರುವವರು. ಸೂಪರ್ಬ್ ಸುಧಾ ಮ್ಯಾಮ್.. ನೀವು ತುಂಬಾನೇ ಸುಂದರವಾಗಿ ಕಾಣುತ್ತಿದ್ದೀರಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಶಿವಣ್ಣ ಅಮೆರಿಕದಿಂದ ಹಿಂತಿರುಗಿದ ಬಳಿಕ 'ಆನಂದ್' ಸಿನಿಮಾದ "ತಿಮ್ಮಾ ತಿಮ್ಮಾ" ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಷ್ಟೇ ಅಲ್ಲದೆ, "ಶಿವಣ್ಣ ವಾಪಾಸ್ ಬಂದಿರುವುದರಿಂದ ಇದು ಸೆಲೆಬ್ರೆಟ್ ಮಾಡುವ ಸಮಯ. ಶಿವಣ್ಣಗಾಗಿ ಆನಂದ್ ಸಿನಿಮಾದಿಂದ ನಮ್ಮ ಮತ್ತೊಂದು ಫೇವರಿಟ್ ಸಾಂಗ್‌ಗೆ ಡ್ಯಾನ್ಸ್ ಮಾಡುತ್ತಿದ್ದೇವೆ." ಎಂದು ಸುಧಾರಾಣಿ ವಿಡಿಯೋ ಜೊತೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಇನ್ನು ಅಮೆರಿಕದಿಂದ ಶಿವಣ್ಣ ವಾಪಾಸ್ ಹಿಂತಿರುಗುತ್ತಿದ್ದಾರೆ ಅನ್ನೋ ವಿಷಯ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಏರ್‌ಪೋರ್ಟ್‌ಗೆ ಹೋಗಿದ್ದರು. ಅಲ್ಲಿಂದಲೇ ಶಿವಣ್ಣನಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ದಾರಿ ಮಧ್ಯೆ ಹಾರ ಹಾಕಿ ವೆಲ್ ಕಮ್ ಮಾಡಲಾಗಿತ್ತು. ಇನ್ನು ಮನೆಯಲ್ಲಿ ಶಿವಣ್ಣನನ್ನು ನೋಡುವುದಕ್ಕೆ ಸೆಲೆಬ್ರೆಟಿಗಳು ಬರುತ್ತಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಕ್ಯಾನ್ಸರ್ ಫ್ರಿ ಆಗಿ ಮತ್ತೆ ಅದೇ ಎನರ್ಜಿಯಿಂದ ಬಂದಿದ್ದಕ್ಕೆ ಖುಷಿಯಾಗಿದ್ದಾರೆ.

More from Filmibeat

English summary
Sudharani and her daughter dance to the Anand film song for Shivarajkumar's return from the USA;
Read more about: sudharani shivarajkumar dance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X