ಬೀಗರ ಊಟಕ್ಕೆ ಸಕ್ಕರೆ ನಾಡಿನ ಜನತೆಗೆ ಆಹ್ವಾನ: ಮಂಡ್ಯ ಜನತೆ ಬಳಿ ಸುಮಲತಾ, ಅಭಿ ಅವಿವಾ ಮನವಿ
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಸಂಭ್ರಮ ಇನ್ನೂ ಮುಗಿದಿಲ್ಲ. ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿತ್ತು.
ಈಗ ಸಕ್ಕರೆ ನಾಡಿನ ಅಕ್ಕರೆಯ ಮಂಡ್ಯ ಜನತೆಗಾಗಿ ಬೀಗರ ಔತಣ ಕೂಟವನ್ನು ಇಟ್ಟುಕೊಂಡಿದ್ದಾರೆ. ಜೂನ್ 15ರಂದು ಮಂಡ್ಯದ ಗೆಜ್ಜಲಗೆರೆ ಗ್ರಾಮದಲ್ಲಿ ಔತಣ ಕೂಟವನ್ನು ಇಟ್ಟುಕೊಂಡಿದ್ದಾರೆ. ಬೆಳಗ್ಗೆ 11ಗಂಟೆಯಿಂದ ಈ ಔತಣ ಕೂಡ ಆರಂಭ ಆಗಲಿದೆ.

ಈ ವೇಳೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಹಾಗೂ ಸೊಸೆ ಅವಿವಾ ಬಿದ್ದಪ್ಪ ಭಾಗವಹಿಸುತ್ತಿದ್ದಾರೆ. ಹೀಗಾಗಿ ಅಮ್ಮ, ಮಗ ಹಾಗೂ ಸೊಸೆ ಅವಿವಾ ಬಿದ್ದಪ್ಪ ಮೂವರು ಮಂಡ್ಯ ಜನತೆಗೆ ಪ್ರೀತಿಯಿಂದ ಆಮಂತ್ರಣ ನೀಡಿದ್ದಾರೆ.
ಅಕ್ಕರೆ ಜನತೆಗೆ ಪ್ರೀತಿಯ ಆಹ್ವಾನ
ಅಂಬರೀಶ್ ಕನಸಿನಂತೆ ಅದ್ಧೂರಿಯಾಗಿ ಪುತ್ರ ಅಭಿಷೇಕ್ ಅಂಬರೀಶ್ ಮದುವೆಯನ್ನು ಸುಮಲತಾ ಮಾಡಿದ್ದಾರೆ. ಈಗ ಪ್ರೀತಿಯ ಮಂಡ್ಯದ ಜನತೆಗೆ ಬೀಗರ ಔತಣ ಕೂಟವನ್ನು ಏರ್ಪಡಿಸಿದ್ದು, ಅದೇ ಪ್ರೀತಿಯಿಂದ ಆಹ್ವಾನ ನೀಡಿದ್ದಾರೆ.

"ಸಕ್ಕರೆ ನಾಡಿನ ನನ್ನ ಎಲ್ಲಾ ಅಕ್ಕರೆಯ ಜನತೆಗೆ ಪ್ರೀತಿಯ ನಮಸ್ಕಾರಗಳು. ಆ ಭಗವಂತನ ಕೃಪೆ, ಅಂಬರೀಶ್ ಅವರ ಆಶೀರ್ವಾದ ಹಾಗೂ ತಮ್ಮಲ್ಲೆರ ಪ್ರೀತಿ ಅಭಿಮಾನದಿಂದ ನಮ್ಮ ಸುಪುತ್ರ ಅಭಿಷೇಕ್ ಹಾಗೂ ಅವಿವಾ ವಿವಾಹವನ್ನು ನೆರವೇರಿಸಲಾಯಿತು. ಈ ಸಂತೋಷವನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇದೇ ಶುಕ್ರವಾರ ಬೆಳಗ್ಗೆ 11 ಗಂಟೆ ನಿಮ್ಮಲ್ಲಿಗೆ ಬರುತ್ತೇವೆ. ಬೀಗರ ಔತಣಕೂಟಕ್ಕೆ ಬನ್ನಿ" ಎಂದು ಸುಮಲತಾ ಅಂಬರೀಶ್ ಆಹ್ವಾನ ನೀಡಿದ್ದಾರೆ.
ರೆಬೆಲ್ ಪುತ್ರನಿಂದ ಆಹ್ವಾನ
ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಅಭಿಷೇಕ್ ಅಂಬರೀಶ್ ತಮ್ಮ ಪ್ರೀತಿಯ ಮಂಡ್ಯದ ಜನತೆಗೆ, ಆತ್ಮೀಯರಿಗೆ ಆಹ್ವಾನ ನೀಡಿದ್ದಾರೆ. ಬೀಗರ ಔತಣಕೂಟಕ್ಕೆ ಭಾಗವಹಿಸಲು ಮನವಿ ಮಾಡಿದ್ದಾರೆ.
"ಎಲ್ಲರಿಗೂ ನಮಸ್ಕಾರ. ಇದೇ ತಿಂಗಳು 16ನೇ ತಾರೀಕು ನಮ್ಮ ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದಲ್ಲಿ ನಮ್ಮ ವಿವಾಹ ಬೀಗರ ಔತಣ ಕೂಡ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲಾ ಅಂಬರೀಶ್ ಅಣ್ಣನ ಅಭಿಮಾನಿಗಳು ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಹಿತೈಶಿಗಳು, ಸ್ನೇಹಿತರು, ಆತ್ಮೀಯರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಅನ್ನೋದು ನನ್ನ ವಿನಂತಿ." ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಮಂಡ್ಯದ ಜನತೆಗೆ ಸೊಸೆಯಿಂದ ಆಹ್ವಾನ
ಸುಮಲತಾ ಸೊಸೆ ಅವಿವಾ ಬಿದ್ದಪ್ಪ ಚಿಕ್ಕದಾಗಿ ಚೊಕ್ಕದಾಗಿ ಮಂಡ್ಯದ ಜನತೆಗೆ ಆಹ್ವಾನ ನೀಡಿದ್ದಾರೆ. "ಎಲ್ಲರೂ ಬನ್ನಿ ಆಶೀರ್ವಾದ ಮಾಡಿ" ಎಂದು ಅವಿವಾ ಬಿದ್ದಪ್ಪ ಚಿಕ್ಕದಾಗಿ ಚೊಕ್ಕದಾಗಿ ಆಹ್ವಾನ ನೀಡಿದ್ದಾರೆ.
ಬೀಗರ ಔತಣ ಕೂಡ ಗ್ರ್ಯಾಂಡ್ ಆಗಿ ಇರುತ್ತೆ. ಈಗಾಗಲೇ ಊಟದ ಮೆನ್ಯೂ ಕೂಡ ರಿವೀಲ್ ಆಗಿದೆ. 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಅನ್ನು ಬೀಗರ ಔತಣ ಕೂಟಕ್ಕೆ ಅಂತಲೇ ತರಿಸಲಾಗುತ್ತಿದೆ. ಮಧ್ಯಾಹ್ನ 11ರಿಂದ ರಾತ್ರಿವರೆಗೂ ಊಟದ ವ್ಯವಸ್ಥೆ ಇರುತ್ತೆ ಎನ್ನಲಾಗಿದೆ.


Click it and Unblock the Notifications











