ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ತೆರೆಗೆ

By Mahesh

ಕನ್ನಡದ ಪ್ರಬುದ್ಧ ಲೇಖಕ, ಚಿಂತಕ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನೀಳ್ಗತೆ 'ಕಿರಗೂರಿನ ಗಯ್ಯಾಳಿಗಳು' ನಾಟಕ ರೂಪ ಪಡೆದು ಜನಪ್ರಿಯಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಈ ಕಿರುಕೃತಿಯನ್ನು ನಿರ್ದೇಶಕಿ ಸುಮನಾ ಕಿತ್ತೂರ್ ಅವರು ಬೆಳ್ಳಿತೆರೆಗೆ ತರುತ್ತಿದ್ದಾರೆ.

ದುನಿಯಾ ಸೂರಿ ನಿರ್ಮಾಣದಲ್ಲಿ ಹೊರ ಬರುತ್ತಿರುವ ಈ ಚಿತ್ರಕ್ಕೆ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾಸ್ತವ್ ಹಾಗೂ ಅಚ್ಯುತ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎದೆಗಾರಿಕೆ ಚಿತ್ರದ ನಂತರ ಸುಮನಾ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದು, ಸಹಜವಾಗಿ ಎಲ್ಲರಿಗೂ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಮೂಡಿಗೆರೆಯಲ್ಲಿರುವ ತೇಜಸ್ವಿ ಅವರ ಮನೆಗೆ ತೆರಳಿ ಅವರ ಪತ್ನಿ ರಾಜೇಶ್ವರಿ ಅವರಿಂದ ಚಿತ್ರ ನಿರ್ಮಿಸಲು ಅನುಮತಿ ಪಡೆದುಕೊಂಡಿರುವುದಾಗಿ ಸುಮನಾ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ. [ವೆಬ್ ನಲ್ಲಿ ತೇಜಸ್ವಿ ವಿಸ್ಮಯಲೋಕ ಅನಾವರಣ]

Suman Kittur to direct KP Tejaswi's Kiragurina Gayyaligalu Cinema

ಪ್ರೀತಿಯ ಸ್ನೇಹಿತರೆ

ನಮ್ಮೆಲ್ಲರ ನೆಚ್ಚಿನ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ಅವರ ಕಥೆ 'ಕಿರಗೂರಿನ ಗಯ್ಯಾಳಿಗಳು' ಎನ್ನುವ ಮಹಾನ್ ಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ತರುವ ಜವಾಬ್ದಾರಿಯನ್ನು ನನಗಿತ್ತಿದ್ದಾರೆ ರಾಜೇಶ್ವರಿ ತೇಜಸ್ವಿ ಮೇಡಮ್ ಅವರು.

ನನ್ನ ಈ ಪ್ರಯತ್ನದ ಹಾದಿಯಲ್ಲಿ ನೀವೆಲ್ಲರೂ ಜೊತೆಗಿರಬೇಕು ಎನ್ನುವ ಪ್ರೀತಿಯ ವಿನಮ್ರತೆಗಳೊಂದಿಗೆ....

ನಿಮ್ಮ
ಸು.ಕಿ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

ತೇಜಸ್ವಿ ಹಾಗೂ ಸಿನಿಮಾ: ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಅಕಾಲಿಕ ನಿಧನದ ನಂತರವೂ ಅವರ ಕೃತಿಗಳಿಗೆ ಬೇಡಿಕೆ ತಗ್ಗಿಲ್ಲ, ಅವರ ಕೃತಿಗಳು ಈ ಹಿಂದೆ ಕೂಡಾ ಚಲನಚಿತ್ರಗಳಾಗಿದ್ದವು, ನಾಟಕಗಳಾಗಿ ಜನರನ್ನು ರಂಜಿಸಿ, ಎಚ್ಚರಿಸಿದ್ದವು ಎಂಬುದನ್ನು ಮರೆಯುವಂತಿಲ್ಲ. [ತೇಜಸ್ವಿ ನೆನಪಲ್ಲಿ ಪ್ಯಾಪಿಲಾನ್ ಸರಣಿ ಕೃತಿ ಬಿಡುಗಡೆ]

ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ",ಕುಬಿ ಮತ್ತು ಇಯಾಲ" ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. ಇದಕ್ಕೂ ಮುನ್ನ ಕನ್ನೇಶ್ವರರಾಮ ಚಿತ್ರ ಸೇರಿದಂತೆ ಲಂಕೇಶರ ಚಿತ್ರಗಳಿಗೆ ಕಥೆ, ಸಂಭಾಷಣೆ ವಿಭಾಗದಲ್ಲಿ ತೇಜಸ್ವಿ ಅವರು ಕೈಯಾಡಿಸಿದ್ದಿದೆ.

ಜುಗಾರಿ ಕ್ರಾಸ್ ಚಲನಚಿತ್ರವಾಗುವ ಸುದ್ದಿ ಅನೇಕ ಬಾರಿ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬಂದಿತ್ತು. ತೇಜಸ್ವಿ ಅವರ ಅನೇಕ ಕೃತಿಗಳು ಈಗಾಗಲೇ ನಾಟಕ ರೂಪ ಪಡೆದು ಜನ ಮನ್ನಣೆ ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. [ಅತುಲ್ ಕುಲಕರ್ಣಿಗೂ ಕನ್ನಡನಾಡಿಗೂ ಭಾರಿ ನಂಟು]

ಪತ್ರಕರ್ತ ಅಗ್ನಿ ಶ್ರೀಧರ್ ಅವರ ಗರಡಿಯಲ್ಲಿ ಬೆಳೆದ ಪ್ರತಿಭೆ ಸುಮನಾ ಕಿತ್ತೂರು ಅವರು 'ಆ ದಿನಗಳು ಚಿತ್ರದಲ್ಲಿ ಶ್ರೀಧರ್ ಅವರಿಗೆ ಸಹಾಯಕಿಯಾಗಿ ಚಿತ್ರ ನಿರ್ದೇಶನದ ಪಾಠಗಳನ್ನು ಕಲಿತವರು. ನಂತರ ಕಳ್ಳರ ಸಂತೆ, ಸ್ಲಂ ಬಾಲ ಹಾಗೂ ಎದೆಗಾರಿಕೆ ಎಂಬ ಅದ್ಭುತ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದವರು. ಈಗ ತೇಜಸ್ವಿ ಅವರ ಕೃತಿ ಕಿರಗೂರಿನ ಗಯ್ಯಾಳಿಗಳನ್ನು ಸಿನಿರಸಿಕರ ಮುಂದಿಡಲು ಸಜ್ಜಾಗಿದ್ದಾರೆ. ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗುವ ಸೂಚನೆ ಸಿಕ್ಕಿದೆ.

More from Filmibeat

English summary
Prominent Kannada writer K P Poornachandra Tejaswi's short story Kiragurina Gayyaligalu will be made in to Kannada cinema by the same name. The Movie will be directed by Suman Kittur of 'Edegarike' movie fame.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X