"ತಂದೆ-ತಾಯಿ ಬಳಿ ಮಗು ಬಿಟ್ಟು ಥೈಲ್ಯಾಂಡ್‌ನಲ್ಲಿ ಮೇಘನಾ ರಾಜ್ ಮೋಜು-ಮಸ್ತಿ"ಎಂದವರಿಗೆ ತಂದೆಯ ತಿರುಗೇಟು!
ಕನ್ನಡದ ನಟಿ ಮೇಘನಾ ರಾಜ್ ಬಾಳಲ್ಲಿ ಕಹಿ ಘಟನೆಯೊಂದು ನಡೆದು ಹೋಗಿದೆ. ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನೋವಿನಿಂದ ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಈಗೀಗ ಸಿನಿಮಾ, ರಿಯಾಲಿಟಿ ಶೋ ಅಂತ ನೋವು ಮರೆಯಲು ಮುಂದಾಗಿದ್ದಾರೆ.
ಇತ್ತೀಚೆಗೆ ಮೇಘನಾ ರಾಜ್ ತಮ್ಮ ಗೆಳತಿಯರೊಂದಿಗೆ ಥೈಲ್ಯಾಂಡ್‌ಗೆ ಪ್ರವಾಸ ಹೋಗಿದ್ದಾರೆ. ಅವರೊಂದಿಗೆ ಅಲ್ಲಿ ಕಳೆದ ಕೆಲವು ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಆ ಫೋಟೊಗಳನ್ನೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊಗಳು ಶೇರ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಥೈಲ್ಯಾಂಡ್‌ನಲ್ಲಿ ಮೇಘನಾರಾಜ್ ಮೋಜು-ಮಸ್ತಿ ಅಂತ ಕ್ಯಾಪ್ಶನ್ ನೀಡಲಾಗಿತ್ತು. ಹಾಗೇ ಫೋಟೊಗಳಿಕೆ ಕಮೆಂಟ್ ಕೂಡ ಮಾಡಲಾಗಿತ್ತು. ಇದರ ವಿರುದ್ಧ ಮೇಘನಾರಾಜ್ ತಂದೆ ಸುಂದರ್ ರಾಜ್ ಕಿಡಿಕಾರಿದ್ದಾರೆ. ತಮ್ಮ ನೋವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

'ಮೋಜು-ಮಸ್ತಿ ಅಂತಿದ್ದಾರೆ'
ಮೇಘನಾ ರಾಜ್ ಥೈಲ್ಯಾಂಡ್ ಫೋಟೊಗಳನ್ನು ಇಟ್ಟುಕೊಟ್ಟು ಕೊಂಡು ಕೆಲವೆಡೆ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ತಂದೆ-ತಾಯಿ ಬಳಿ ಮಗು ಬಿಟ್ಟು ಮೋಜು ಮಸ್ತಿ ಅಂತಲೆಲ್ಲಾ ಬರೆದಿದ್ದಾರೆ. ನಾವು ಈಗ ತಾನೇ ನೋವಿನಿಂದ ಹೊರಬರಲು ಪ್ರಯತ್ನ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಇಂತಹ ಶೀರ್ಷಿಕೆಗಳು ನೀಡಿದ್ದು, ಇದು ವಿಪರೀತ ಆಗಬಾರದು ಅಂತ ಅನ್ನೋ ಕಾರಣಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ ಅಂತ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಸುಂದರ್ ರಾಜ್ ಹೇಳಿದ್ದೇನು?
ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಂದರ್ ರಾಜ್ ಸೇರಿದಂತೆ ಫಿಲ್ಮ್ ಚೇಂಬರ್ ಸದಸ್ಯರು ಕನ್ನಡ ಚಿತ್ರರಂಗದಲ್ಲಿ ಬಾಲಕಲಾವಿದರಾಗಿದ್ದ ಮಿಂಚಿದ್ದ ನಟರನ್ನು ಅಭಿನಂದಿಸಿದ್ದರು. ಈ ವೇಳೆ ಮಾಸ್ಟರ್ ಆನಂದ್ ಮಾತನ್ನು ಮುಂದುವರೆಸುತ್ತಾ, ತಮ್ಮ ಮಗಳ ಬಗ್ಗೆ ಮರೆದಿದ್ದನ್ನು ನೆನೆದು ಬೇಸರಗೊಂಡಿದ್ದಾರೆ. "ನಿನ್ನೆಯಷ್ಟೇ ನಡೆದ ಘಟನೆ. ಯಾಕಂದ್ರೆ, ಈ ಸಂದರ್ಭದಲ್ಲಿ ಹೇಳದೆ ಅಂದ್ರೆ, ಅದು ವಿಪರೀತ ಆಗುತ್ತೆ ಅಂತ ಹೇಳುತ್ತಿದ್ದೀನಿ. ನನ್ನ ಮಗಳು ಈಗ ಥೈಲ್ಯಾಂಡ್‌ನಲ್ಲಿ ಇದ್ದಾಳೆ. ಫ್ರೆಂಡ್ಸ್ ಜೊತೆ ಹೋಗಿದ್ದನ್ನು ಅವಳು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಾಕಿದ್ದಳು. ತಕ್ಷಣ ಒಂದು ಶೀರ್ಷಿಕೆ ಹಾಕಿ, ತಂದೆ-ತಾಯಿಯ ಬಳಿ ಮಗುವನ್ನು ಬಿಟ್ಟು, ಮೋಜು-ಮಸ್ತಿ ಮಾಡುವುದಕ್ಕೆ ಹೋಗಿದ್ದಾರೆ ಮೇಘನಾ ರಾಜ್ ಅಂತ ಬಂದಿದ್ದಾರೆ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಇಡೀ ಚಿತ್ರರಂಗ ನಮ್ಮ ಜೊತೆಯಿತ್ತು'
ಮೇಘನಾ ರಾಜ್ ತಂದೆ ಯಾಕೀ ಬೇಸರ ಅನ್ನುವುದಕ್ಕೂ ಕಾರಣ ನೀಡಿದ್ದಾರೆ. "ಯಾಕೆ ಈ ಮಾತನ್ನು ಹೇಳುತ್ತೀನಿ ಅಂದ್ರೆ, ನಮ್ಮ ಮನೆಯಲ್ಲಿ ಒಂದು ಘಟನೆ ಆಗಿ ಹೋಗಿದೆ. ಅದನ್ನು ನಾವು ಮರೆಯುತ್ತಿದ್ದೇವೆ. ಆ ಮರೆಯೋ ಸಮಯದಲ್ಲಿ ಈಡೀ ಚಿತ್ರರಂಗ ಅವತ್ತು ಚೇಂಬರ್ ಸಮೇತ ನಮಗೆ ಸಾಥ್ ಕೊಡ್ತು. ಆ ಘಟನೆ ನಡೆದಾಗ ವಾಹಿನಿಯಲ್ಲಿ ಏನೋ ಒಂದು ಸ್ಕ್ರಾಲಿಂಗ್‌ನಲ್ಲಿ ಹೋಗುತ್ತಿತ್ತು. ಆಗ ತಕ್ಷಣ ನಾನು ಮಂಡಳಿಯನ್ನು ಸಂಪರ್ಕ ಮಾಡಿದಾಗ ಅವತ್ತು ಮಂಡಳಿ ಜೊತೆ ನಿಂತು ನಾವು ನಿಮ್ಮ ಕುಟುಂಬದ ಜೊತೆ ಇದ್ದೀವಿ ಅಂತ ಹೇಳಿದ್ದರು." ಎಂದು ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮೇಘನಾ ರಾಜ್ ಸಿನಿಮಾಗಳಲ್ಲಿ ಬ್ಯುಸಿ
ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಮೇಘನಾ ರಾಜ್ ನಿಧಾನವಾಗಿ ಕಹಿ ಘಟನೆಯಿಂದ ಹೊರಬಂದಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿರು ನೆನಪಿನಲ್ಲೇ ಇಬ್ಬರೂ ಜೊತೆಯಾಗಿ ತೆರಳಿದ್ದ ಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಹೋಗಿದ್ದಾರೆ. ಆ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ. ಸದ್ಯ ಹೊಸ ಹಾದಿ ಹಿಡಿದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications











