ಅಳಿಯನ ನೆನಪು ತಡೆಯಲಾರದೆ ಸ್ವಂತ ಮನೆಯಿಂದ ಶಿಫ್ಟ್ ಆದ ಸುಂದರ್ ರಾಜ್: ಏನಿದು ಸಂಗತಿ?
ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರ್ ರಾಜ್ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಸಿನಿಮಾರಂಗದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ 'ಜೀನಿಯಸ್ ಮುತ್ತ' ಅನ್ನುವ ಸಿನಿಮಾದಲ್ಲಿ ಸುಂದರ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನೊಂದು ಕಡೆ ಮಗಳಿಗೆ ಬೆನ್ನೆಲುಬಾಗಿಯೂ ನಿಂತಿದ್ದಾರೆ.
ಅಳಿಯ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಸುಂದರ್ ರಾಜ್ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಮಗಳ ಪ್ರತಿಯೊಂದು ಹೆಜ್ಜೆಯಲ್ಲೂ ನಿಲ್ಲುತ್ತಿದ್ದಾರೆ. ಮೇಘನಾ ರಾಜ್ ಹಾಗೂ ರಾಯನ್ ಜೊತೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಇತ್ತೀಚೆಗೆ ಗೊತ್ತಾಗಿರುವ ವಿಷಯ ಏನಂದ್ರೆ, ಸುಂದರ್ ರಾಜ್ 20 ವರ್ಷ ಬಾಳಿ ಬದುಕಿದ ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಶಿಫ್ಟ್ ಆಗಿದ್ದಾರೆ.

ಇತ್ತೀಚೆಗೆ ಹಲೋ ಹಿಂದು ಅನ್ನುವ ಟ್ಯೂಬ್ ಚಾನೆಲ್‌ಗೆ ಸುಂದರ್ ರಾಜ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಅಳಿಯ ಚಿರಂಜೀವಿ ನೆನಪು ತಾಳಲಾರದೆ ಸ್ವಂತ ಮನೆಯನ್ನು ಬಿಟ್ಟು ಬೇರೊಂದು ಮನೆ ಶಿಫ್ಟ್ ಆಗಿದ್ದಾಗಿ ಹೇಳಿಕೊಂಡು ಭಾವುಕರಾಗಿದ್ದಾರೆ. ಅಷ್ಟಕ್ಕೂ ಈ ಸಂದರ್ಶನದಲ್ಲಿ ಸುಂದರ್ ರಾಜ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ಸುಂದರ್ ರಾಜ್ ಸುಮಾರು 20 ವರ್ಷಗಳಿಂದ ಬದುಕಿ ಬಾಳಿದ್ದ ಮನೆಯಿಂದ ಹೊರಬಂದು ಬೇರೆ ಮನೆಯಲ್ಲಿದ್ದಾರೆ. ಸುಮಾರು ಮೂರು ವರ್ಷಗಳಿಂದ ಇಡೀ ಕುಟುಂಬ ಬೇರೆ ಮನೆಗೆ ಶಿಫ್ಟ್ ಆಗಿದೆ. ಆ ವಿಚಾರವನ್ನು 'ಹಲೋ ಹಿಂದು' ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ವೇಳೆ ಹಳೆ ಮನೆಯ ಬಗ್ಗೆನೂ ಹೇಳಿಕೊಂಡಿದ್ದಾರೆ.
"ಮೂರು ವರ್ಷಗಳಿಂದ ನಾವು ಈ ಮನೆಗೆ ಬಂದಿದ್ದೀವಿ. ಇದಕ್ಕೂ ಮುನ್ನ 15ನೇ ಕ್ರಾಸ್ ಮೇನ್ ರೋಡ್‌ನಲ್ಲಿ ಇದ್ವಿ. ಅದು ತುಂಬಾ ದೊಡ್ಡ ಮನೆ ಆಗಿತ್ತು. ಡ್ಯೂಪ್ಲೆಕ್ಸ್ ಅಂತ ಮನೆ ಮಾಡಿದ್ವಿ. ದೊಡ್ಡದಾದ ಕಾರ್ ಪಾರ್ಕಿಂಗ್ ಮಾಡಿದ್ದೆವು. ಗಾರ್ಡನ್ ಇತ್ತು. ಐದು ಬೆಡ್ ರೂಮ್ ಇತ್ತು. ದೊಡ್ಡ ಅಡುಗೆ ಮನೆ, ಡೈನಿಂಗ್ ಹಾಲ್, ದೇವರ ಮನೆ ಎಲ್ಲವೂ ಇದ್ದವು. ಒಂಥರಾ ತೊಟ್ಟಿ ಮನೆತರ. ಆ ಮನೆಯಲ್ಲಿ 20 ವರ್ಷ ಇದ್ದೆವು. 2001 ರಿಂದ 2022 ವರೆಗೂ ಅಲ್ಲಿದ್ದೆವು" ಎಂದು ಹಿರಿಯ ನಟ ಸುಂದರ್ ಹೇಳಿದ್ದಾರೆ.

ಆ ಮನೆಯಲ್ಲಿ ಅಳಿಯ ಚಿರಂಜೀವಿ ಸರ್ಜಾ ಅವರ ನೆನಪುಗಳು ಕಾಡುತ್ತಿದ್ದರು. ಮನೆಯ ಪ್ರತಿಯೊಂದು ದಿಕ್ಕಿನಲ್ಲೂ ಅಳಿಯನೇ ನೆನಪುಗಳೇ ಕಾಡುತ್ತಿದ್ದರಿಂದ ಸ್ವಂತ ಮನೆಯನ್ನು ಬಿಟ್ಟು ಅಲ್ಲೇ ಸಮೀಪದಲ್ಲಿದ್ದ ಅಪಾರ್ಟ್‌ಮೆಂಟ್ ಶಿಫ್ಟ್ ಒಂದಕ್ಕೆ ಆಗಿದ್ದಾರೆ. ಈ ವಿಷಯವನ್ನು ಹೇಳುತ್ತಾ ಹಿರಿಯ ನಟ ಸುಂದರ್ ರಾಜ್ ಅವರು ಭಾವುಕರಾಗಿದ್ದರು.
"ನನ್ನ ಅಳಿಯ ಅಗಲಿದ ಬಳಿಕ ಇಲ್ಲಿಗೆ ಶಿಫ್ಟ್ ಆದೆವು. ಅವನು ಹೋದ ನಂತರ ಅಲ್ಲಿ ಇರುವುದಕ್ಕೆ ಅಷ್ಟು ಮನಸ್ಸು ಬರಲಿಲ್ಲ. ಪ್ರತಿಬಾರಿಯೂ ಅವನು ಅಲ್ಲಿ ಕೂತುಕೊಳ್ಳುತ್ತಿದ್ದ, ಅಲ್ಲಿ ನಿಂತುಕೊಳ್ಳುತ್ತಿದ್ದ, ಇದನ್ನು ಮಾತಾಡುತ್ತಿದ್ದ, ಅದನ್ನು ಮಾತಾಡುತ್ತಿದ್ದ ಅಂತ ಬರುತ್ತಲೇ ಇತ್ತು. ಅದಕ್ಕೆ ಈ ಮನೆಗೆ ಶಿಫ್ಟ್ ಆದೆವು" ಎಂದು ಹೇಳುತ್ತಾ ಭಾವುಕರಾಗಿದ್ದಾರೆ.


Click it and Unblock the Notifications











