ಅಪ್ಪು ನಿಧನಕ್ಕೆ ರಜನಿ ಸಂತಾಪ: ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರಿಂದ ದೂರವಾಗಿ 13 ದಿನಗಳಾಗಿವೆ. ಪುನೀತ್ ಅಭಿಮಾನಿಗಳಾಗಲಿ, ಅಣ್ಣಾವ್ರ ಕುಟುಂಬ ಆಗಲಿ ಅಪ್ಪು ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ಲ. ಪರಭಾಷೆಯ ಚಿತ್ರರಂಗದ ಗಣ್ಯರು ಒಬ್ಬೊಬ್ಬರಾಗೇ ಬಂದು ಪುನೀತ್ ರಾಜ್‌ಕುಮಾರ್ ಸಮಾಧಿಗೆ ನಮನ ಸಲ್ಲಿಸಿ, ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಆದರೆ, ಅಣ್ಣಾವ್ರ ಕುಟುಂಬ ಹತ್ತಿರದಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಇನ್ನೂ ಅಪ್ಪ ಸಮಾಧಿಗೆ ಬಂದಿಲ್ಲ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ದಿನದಂದೇ ರಜನಿಕಾಂತ್ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಸೂಪರ್‌ಸ್ಟಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಅಪ್ಪು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ರಜನಿ ಶೀಘ್ರದಲ್ಲೇ ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಲಿದ್ದಾರೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ತಲೈವಾ ಇಂದು (ನವೆಂಬರ್ 10) ಟ್ವೀಟ್ ಮೂಲಕ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹೀಗಿದ್ದರೂ ನೆಟ್ಟಿಗರು ರಜನಿ ಟ್ವೀಟ್‌ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪುನೀತ್ ನಿಧನದ ಹಿನ್ನೆಲೆ ರಜನಿ ಸಂತಾಪ

ಪುನೀತ್ ನಿಧನದ ಹಿನ್ನೆಲೆ ರಜನಿ ಸಂತಾಪ

ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆ ಸೂಪರ್‌ಸ್ಟಾರ್ ರಜನಿಕಾಂತ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು. ಅಪ್ಪು ಅಗಲಿದ 13 ದಿನಗಳ ಬಳಿಕ ರಜನಿ ಸಂತಾಪ ಸೂಚಿಸಿದ್ದು," ಪುನೀತ್ ರಾಜ್‌ಕುಮಾರ್ ನನ್ನ ಕಣ್ಣುಗಳ ಮುಂದೆ ಬೆಳೆದ ಹುಡುಗ. ಅವರು ಬಹಳ ಪ್ರತಿಭಾವಂತ ವ್ಯಕ್ತಿಯಾಗಿದ್ದರು. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಪುನೀತ್ ನಮ್ಮೊಂದಿಗೆ ಇಲ್ಲ ಅನ್ನುವುದನ್ನು ನನಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅಗಲಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ" ವೆಂದು ಹೇಳಿದ್ದಾರೆ. ರಜನಿಕಾಂತ್ ಟ್ವೀಟ್ ಮೂಲಕ ಒಂದು ಸಾಲಿನಲ್ಲಿ ಸಂತಾಪ ಸೂಚಿಸಿ, ಹೂಟ್ ಲಿಂಕ್ ಶೇರ್ ಮಾಡಿದ್ದರು. ಅದರಲ್ಲೂ ಅಪ್ಪು ಅಗಲಿಕೆಯ ಬಗ್ಗೆ ಸಂತಾಪ ಸೂಚಿಸಿದ್ದರು. ಈ ಬಗ್ಗೆ ನೆಟ್ಟಿಗರು ಮಾತ್ರ ರಜನಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಮಗಳ ಹೂಟ್ ಆಪ್ ಪ್ರಚಾರಕ್ಕೆ ಟ್ವೀಟ್ ಆರೋಪ

ಮಗಳ ಹೂಟ್ ಆಪ್ ಪ್ರಚಾರಕ್ಕೆ ಟ್ವೀಟ್ ಆರೋಪ

ಸೂಪರ್ ಸ್ಟಾರ್ ರಜನಿಕಾಂತ್ ಒಂದು ಸಾಲಿನ ಟ್ವೀಟ್ ಮಾಡಿ, ಅದಕ್ಕೆ ಹೂಟ್ ಆಪ್ ಲಿಂಕ್ ಅನ್ನು ಸೇರಿಸಿದ್ದರು. ಇದು ವಾಯ್ಸ್ ಬೇಸ್ಡ್ ಸೋಶಿಯಲ್ ಮೀಡಿಯಾ ಆಪ್ ಆಗಿದ್ದು, ಪುತ್ರಿಯ ಆಪ್ ಮೂಲಕ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದು ನೆಟ್ಟಿಗರನ್ನು ಕೆರಳುವಂತೆ ಮಾಡಿದೆ. ಇಂತಹ ದು:ಖದ ಸಮಯದಲ್ಲೂ ಹೂಟ್ ಆಪ್ ಪ್ರಚಾರ ಮಾಡುವುದು ಬೇಕಿತ್ತಾ? ಸಂತಾಪ ಸೂಚಿಸಲು ಹೂಟ್ ಆಪ್ ಏಕೆ ಬೇಕು" ಅಂತ ಸೋಶಿಯಲ್ ಮೀಡಿಯಾದಲ್ಲಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ದೊಡ್ಮನೆ ಕುಟುಂಬದೊಂದಿಗೆ ರಜನಿ ಒಡನಾಟ

ದೊಡ್ಮನೆ ಕುಟುಂಬದೊಂದಿಗೆ ರಜನಿ ಒಡನಾಟ

ರಜನಿಕಾಂತ್ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ದೊಡ್ಮನೆಯೊಂದಿಗೆ ಉತ್ತಮ ಒಡನಾಟವಿದೆ. ಡಾ. ರಾಜ್‌ಕುಮಾರ್ ಸಿನಿಮಾಗಳ ಬಗ್ಗೆ ಅಪಾರ ಅಭಿಮಾನವಿದೆ. ಅಣ್ಣಾವ್ರ ಸರಳತೆಯ ರಜನಿಕಾಂತ್ ಕೂಡ ಅಳವಡಿಸಿಕೊಂಡಿದ್ದಾರೆ. ಅಣ್ಣಾವ್ರ ನಿಧನದ ಬಳಿಕವೂ ದೊಡ್ಮನೆ ಕುಟುಂಬದೊಂದಿಗೆ ರಜನಿಕಾಂತ್ ಉತ್ತಮ ಒಡನಾಟ ಹೊಂದಿದ್ದಾರೆ. ಬೆಂಗಳೂರಿಗೆ ಬಂದಾಗ ರಜನಿಕಾಂತ್ ಅಣ್ಣಾವ್ರ ಮಕ್ಕಳನ್ನು ಭೇಟಿ ಮಾಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಕಂಡರೆ, ರಜನಿಕಾಂತ್‌ಗೆ ಬಲು ಪ್ರೀತಿ. ಬೇರೆ ಬೇರೆ ಸಂದರ್ಭಗಳಲ್ಲಿ ಅಪ್ಪುನ ರಜನಿ ಭೇಟಿ ಮಾಡಿದ ಉಹಾಹರಣೆಗಳು ಸಾಕಷ್ಟಿವೆ.

ಅಪ್ಪು ಮನೆಗೆ ಯಾವಾಗ ರಜನಿ ಭೇಟಿ

ಅಪ್ಪು ಮನೆಗೆ ಯಾವಾಗ ರಜನಿ ಭೇಟಿ

ಕನ್ನಡದ ಮೇರು ನಟರು ನಿಧನ ಹೊಂದಿದಾಗ ರಜನಿಕಾಂತ್ ದಿಢೀರನೇ ಅವರ ಮನೆಗೆ ಬಂದು ಭೇಟಿ ನೀಡಿ, ಸಂತಾಪ ಸೂಚಿಸಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ತೀರಿಕೊಂಡಾಗ, ಗೆಳೆಯ ಅಂಬರೀಷ್ ನಿಧನರಾದಾಗಲೂ ರಜನಿ ಬಂದು ಸಂತಾಪ ಸೂಚಿಸಿದ್ದರು. ಈಗ ಅಪ್ಪು ಮನೆಗೆ ಯಾವಾಗ ಬಂದು ಸಂತಾಪ ಸೂಚಿಸುತ್ತಾರೋ ಅನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

More from Filmibeat

English summary
Finally Rajinikanth Express his condolence to Puneeth Rajkumar death. But fans are upset with superstar tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X