ದರ್ಶನ್‌ ಜಾಮೀನನ್ನು ಏಕೆ ರದ್ದು ಮಾಡಬಾರದು? ದರ್ಶನ್ ಪರ ವಕೀಲ ಕಪಿಲ್ ಸಿಬಲ್‌ಗೆ 'ಸುಪ್ರೀಂ' ಪ್ರಶ್ನೆ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೈಕೋರ್ಟ್‌ನಲ್ಲಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ರೆಗ್ಯೂಲರ್ ಜಾಮೀನನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀ ಕೋರ್ಟ್‌ಗೆ ಮನವಿಯನ್ನು ಸಲ್ಲಿಸಿತ್ತು. ದರ್ಶನ್ ಜಾಮೀನು ಅರ್ಜಿಯನ್ನು ರದ್ದು ಮಾಡುವಂತೆ ಕೇಳಿಕೊಂಡಿತ್ತು.

ಕಳೆದ ಕೆಲವು ದಿನಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರವಾಗಿ ವಿಚಾರಣೆ ನಡೆಯುತ್ತಿದೆ. ಇಲ್ಲಿವರೆಗೂ ದರ್ಶನ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದವನ್ನು ಮಂಡಿಸುತ್ತಿದ್ದರು. ಇಂದು (ಜುಲೈ 17) ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲ ಬದಲಾಗಿದ್ದರು. ಅಭಿಷೇಕ್ ಮನು ಸಿಂಘ್ವಿ ಬದಲಾಗಿ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಾಡಿದ್ದರು.

Supreme Court asked Darshan Advocate that why we cannot cancel bail to the actor

ಮೇ 14 ರಂದು ದರ್ಶನ್ ಜಾಮೀನು ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೆಲವು ವಿಚಾರಣೆಗಳನ್ನು ಕೇಳಿತ್ತು. ದರ್ಶನ್ ಬಂಧನಕ್ಕೆ ಇದ್ದ ಸಾಕ್ಷಿಗಳು ಏನು? ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಗೂ ಮುನ್ನವೇ ದರ್ಶನರನ್ನು ಬಂಧಿಸಿದ್ದು ಯಾಕೆ? ಎನ್ನುವಂತಹ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ರಾಜ್ಯ ಸರ್ಕಾರ ದಾಖಲೆಗಳನ್ನು ನೀಡಿದೆ. ಅದನ್ನು ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರು "ದರ್ಶನ್ ಜಾಮೀನನ್ನು ಯಾಕೆ ರದ್ದು ಮಾಡಬಾರದು?" ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ. ಅಷ್ಟಕ್ಕೂ ನ್ಯಾಯಾಧೀಶರು ದರ್ಶನ್ ಪರ ವಕೀಲರ ಬಳಿ ಕೇಳಿದ್ದೇನು? ಕಪಿಲ್ ಸಿಬಲ್ ಮಂಡಿಸಿದ ವಾದದಲ್ಲಿ ಏನಾಗಿತ್ತು?

ಮುಂದೆ ಓದಿ

ದರ್ಶನ್ ಜಾಮೀನು ಯಾಕೆ ರದ್ದು ಮಾಡಬಾರದು 'ಸುಪ್ರೀಂ' ಪ್ರಶ್ನೆ?
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪ್ರಶ್ನೆಯಿಂದ ದರ್ಶನ್‌ಗೆ ಸಂಕಷ್ಟ?
ಹೈಕೋರ್ಟ್‌ನಲ್ಲಿ ದರ್ಶನ್ ಪರ ಜಾಮೀನು ಕೊಟ್ಟಿದ್ದರಲ್ಲಿ ಚಡಪಡಿಕೆ?
ರಾಜ್ಯ ಸರ್ಕಾರದ ಪರ ವಕೀಲರು ಗೆಲುವಿನ ಸನಿಹದಲ್ಲಿ ಇದ್ದಾರೆಯೇ?

ಇಂದು (ಜುಲೈ 22) ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್ ವಾದ ಮಂಡನೆ ಮಾಡಿದ್ದರು. ಈ ಪ್ರಕರಣದಲ್ಲಿ 262 ಸಾಕ್ಷ್ಯಗಳ ವಿಚಾರಣೆಯನ್ನು ಮಾಡಲಾಗಿದೆ. ಇವುಗಳಲ್ಲಿ ದರ್ಶನ್ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದಕ್ಕೆ ಪುರಾವೆಗಳು ಇಲ್ಲ ಎಂದು ವಾದಿಸಿದ್ದರು ಎಂದು ವರದಿಯಾಗಿದೆ. ಆದರೆ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೆ ಇದು ಸಮಾಧಾನ ಕೊಟ್ಟಿಲ್ಲ. ಹೀಗಾಗಿ "ದರ್ಶನ್ ಜಾಮೀನು ಯಾಕೆ ರದ್ದು ಮಾಡಬಾರದು?" ಎಂದು ಪ್ರಶ್ನೆ ಮಾಡಿರುವುದಾಗಿ ವರದಿಗಳಾಗಿವೆ.

ಇದೇ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ರಾಜ್ಯ ಸರ್ಕಾರ ಒದಗಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ "ಸರ್ಕಾರದ ದಾಖಲೆಗಳನ್ನು ನಾವು ಸ್ವೀಕರಿಸಿದ್ದೇವೆ. ಹೈಕೋರ್ಟ್‌ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣಿಸುತ್ತಿದೆ. ದರ್ಶನ್‌ಗೆ ಹೇಗಾದರೂ ಜಾಮೀನು ಕೊಡಬೇಕು. ಒಂದು ಅಂಶ ಸಿಕ್ಕಿದರೂ ಸಾಕು ಜಾಮೀನು ಕೊಟ್ಟು ಬಿಡೋಣ ಎನ್ನುವ ಚಡಪಡಿಕೆ ಕಾಣಿಸುತ್ತಿದೆ." ಎಂದು ಹೇಳಿದ್ದಾಗಿ ಟಿವಿ 9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಯಾಗಿದೆ.

Supreme Court asked Darshan Advocate that why we cannot cancel bail to the actor

ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಭಿಪ್ರಾಯ ದರ್ಶನ್‌ಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ. ದರ್ಶನ್ ಪರ ವಕೀಲರಿಗೆ ವಾದ ಮಂಡನೆಗೆ ಕಾಲಾವಕಾಶ ನೀಡಿ ಈ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರದ ವಕೀಲರು ಕೂಡ ಗೆಲುವಿನ ಸನಿಹದಲ್ಲಿ ಇದ್ದೀವಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಗಿ ವರದಿಗಳಾಗಿವೆ.

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾದ ಶೂಟಿಂಗ್‌ಗಾಗಿ ಥೈಲ್ಯಾಂಡ್‌ನಲ್ಲಿದ್ದಾರೆ. ಈ ಸಿನಿಮಾದ ಹಾಡುಗಳು ಹಾಗೂ ಕೆಲವು ಸೀನ್‌ಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಒಂದು ವೇಳೆ ಜುಲೈ 22ರಂದು ದರ್ಶನ್ ವಿರುದ್ಧವಾಗಿ ಆದೇಶಗಳು ಬಂದರೆ, ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ ಎನ್ನಲಾಗಿದೆ. ಇದೆಲ್ಲವೂ ಜುಲೈ 22ಕ್ಕೆ ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್ ವಾದ ಮಂಡನೆಯ ಮೇಲೆ ನಿಂತಿದೆ.

More from Filmibeat

English summary
Supreme Court asked Darshan Advocate that why we cannot cancel bail to the actor.
Read more about: darshan bail supreme court
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X