ದರ್ಶನ್ ಪವಿತ್ರಾ ಗೌಡ ಜಾಮೀನು ರದ್ದು; ಮುಂದೇನು? ಇಬ್ಬರ ಮುಂದಿರುವ ಆಯ್ಕೆಗಳೇನು?

ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಆದೇಶ ಸಹಜವಾಗಿಯೇ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗೆ ಶಾಕ್ ಆಗಿದೆ. ಬೆಂಗಳೂರಿನ ಪೊಲೀಸರು ಒಬ್ಬೊಬ್ಬರನ್ನೇ ಬಂಧಿಸುವುದಕ್ಕೆ ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ ಏಳು ಮಂದಿಯ ಜಾಮೀನನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ದರ್ಶನ್‌ ಹಾಗೂ ಗ್ಯಾಂಗ್‌ಗೆ ಹಿನ್ನಡೆಯಾಗಿದೆ.

ಕರ್ನಾಟಕದ ಹೈಕೋರ್ಟ್‌ನಲ್ಲಿ ದರ್ಶನ್ ಹಾಗೂ ಗ್ಯಾಂಗ್ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಇದು ಸಾಧ್ಯವಾಗಲಿಲ್ಲ. ನ್ಯಾಯಾಧೀಶರು ಜಾಮೀನನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನು ರದ್ದಾಗಿದೆ. ಹೀಗಾಗಿ ಅವರು ಮತ್ತೆ ಜೈಲಿಗೆ ತೆರಳಬೇಕಿದೆ. ದರ್ಶನ್ ಪೊಲೀಸರಿಗೆ ಶರಣಾಗುತ್ತಾರಾ? ಇಲ್ಲ ಬಂಧನವಾಗುತ್ತಾ? ಅನ್ನೋದು ಇನ್ನು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

Supreme court cancelled bail what will be the option for Darshan and Pavithra Gowda

ಆದರೆ, ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಮಂದಿ ಮತ್ತೆ ಜೈಲು ಸೇರೋದಂತೂ ಗ್ಯಾರಂಟಿ. ಆದರೆ, ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಈ ಆರೋಪಿಗೆ ಇರುವ ಆಯ್ಕೆ ಏನು? ಮತ್ತೆ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಬಹುದಾ? ದರ್ಶನ್ ಎಷ್ಟು ದಿನ ಜೈಲಿನಲ್ಲಿ ಇರಬೇಕಾಗಬಹುದು? ಈ ಬಗ್ಗೆ ಮಾಹಿತಿ ತಿಳಿಯುವುದಕ್ಕೆ ಮುಂದೆ ಓದಿ.

ಜಾಮೀನು ರದ್ದು ಮುಂದೇನು?

ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ್ದರಿಂದ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಮಂದಿ ಮ್ಯಾಜಿಸ್ಟ್ರೇಟ್ ಕೋರ್ಟ್‌ ಮುಂದೆ ಶರಣಾಗಬೇಕಾಗುತ್ತೆ. ಪೊಲೀಸರು ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತೆ. ಅಲ್ಲಿಂದ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗುತ್ತೆ. ರೇಣುಕಾಸ್ವಾಮಿ ಕೇಸ್ ಇನ್ನೂ ಟ್ರಯಲ್ ನಡೆಯುತ್ತಿರುವುದರಿಂದ ಅದು ಮುಂದುವರೆಯುತ್ತೆ. ಇನ್ನೂ ಈ ಕೇಸ್‌ನಲ್ಲಿ ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಜಾರ್ಚ್ ಹಾಕಿಲ್ಲ. ತನಿಖೆ ಮುಂದುವರೆಸಿ, ಎಲ್ಲಾ ಸಾಕ್ಷಿದಾರರಿಗೆ ಹಂತ ಹಂತವಾಗಿ ನೋಟೀಸ್ ಜಾರಿ ಮಾಡುವ ಸಾಧ್ಯತೆಯಿದೆ. ಈಗ ಟ್ರಯಲ್ ನಡೆಯಬೇಕಾಗಿರುವ ಹಂತದಲ್ಲಿ ಇರುವುದರಿಂದ ಅದಕ್ಕೆ ಸಂಬಂಧ ಪಟ್ಟ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ.

ಟ್ರಯಲ್ ಹಂತದಲ್ಲಿ ರಿವೀಲ್

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಹೀಗಾಗಿ ಈ ಕೇಸ್‌ನಲ್ಲಿ ಅವರ ಪಾತ್ರವೇನು ಅನ್ನೋದು ಟ್ರಯಲ್ ಹಂತದಲ್ಲಿ ಗೊತ್ತಾಗುತ್ತೆ. ಈಗಾಗಲೇ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಮೇಲ್ನೋಟಕ್ಕೆ ದರ್ಶನ್ ಪಾತ್ರವಿರುವುದು ಕಂಡು ಬಂದಿರುವುದರಿಂದ ಜಾಮೀನು ರದ್ದಾಗಿದೆ. ಈ ಹಂತದಲ್ಲಿ ಪ್ರಾಸಿಕ್ಯೂಷನ್‌ನವರು ಕೋರ್ಟ್ ಮುಂದೆ ದರ್ಶನ್ ಭಾಗಿಯಾಗಿದ್ದಾರೆ ಅನ್ನೋದನ್ನು ಸಾಬೀತು ಮಾಡಬೇಕಾಗುತ್ತೆ. ಅಲ್ಲದೆ ಪ್ರಾಸಿಕ್ಯೂಷನ್‌ನವರು ಇದನ್ನು ಸಾಬೀತು ಮಾಡುವವರೆಗೂ ಜಾಮೀನಿನ ಮೇಲೆ ಆರೋಪಿಗಳು ಹೊರಗೆ ಇರುವುದು ಸೂಕ್ತ ಅಲ್ಲವೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಟ್ರಯಲ್ ಮುಗಿಯುವವರೆಗೂ ದರ್ಶನ್‌ ಹಾಗೂ ಗ್ಯಾಂಗ್‌ಗೆ ಜಾಮೀನು ಸಿಗೋದು ಅನುಮಾನ.

Supreme court cancelled bail what will be the option for Darshan and Pavithra Gowda

ಸಾಧ್ಯತೆಗಳು ಏನು?

ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಮತ್ತೆ ಜಾಮೀನು ಸಿಗುವ ಸಾಧ್ಯತೆ ಕಮ್ಮಿ. ಅದಾಗಿಯೂ ದರ್ಶನ್ ಕಾನೂನು ಪಂಡಿತರ ಸಲಹೆ ಪಡೆದು ಮತ್ತೆ ಜಾಮೀನು ಪಡೆಯಲು ಯತ್ನಿಸಬಹುದು. ಆದರೆ, ಸುಪ್ರೀಂ ಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿರುವುದರಿಂದ ಯಾವುದೇ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದರೂ, ಕೂಡಲೇ ಸಿಗೋದು ಕಷ್ಟ. ಹೀಗಾಗಿ ಕಮ್ಮಿ ಅಂದರೂ ಇನ್ನೂ ಮೂರರಿಂದ ಆರು ತಿಂಗಳು ಜಾಮೀನು ಅರ್ಜಿ ಸಲ್ಲಿಸೋದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಗಂಭೀರವಾಗಿ ಪರಿಗಣಿಸಿದ್ದೇಕೆ?

ದರ್ಶನ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಸಾಕ್ಷಿ ನಾಶಕ್ಕೆ ಮುಂದಾಗಬಹುದು. ಇದು ಸಾಮಾನ್ಯ ಕೊಲೆಯಲ್ಲದೆ, ಚಿತ್ರಹಿಂಸೆ ನೀಡಿದ ಹತ್ಯೆಗೈದಿರುವ ಪ್ರಕರಣ ಆಗಿದ್ದರಿಂದ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ದರ್ಶನ್‌ಗೆ ಜೈಲಿನಲ್ಲಿ ನೀಡಿದ ಸವಲತ್ತುಗಳ ಬಗ್ಗೆ ಸುಪ್ರೀಂ ಕೋರ್ಟ್‌ ಕಿಡಿಕಾರಿದೆ. ಇವೆಲ್ಲವನ್ನು ಪರಿಗಣಿಸಿದರೆ, ಇನ್ನು ಕೆಲವು ತಿಂಗಳು ಜೈಲಿನಲ್ಲಿಯೇ ಇರಬೇಕಾಗಬಹುದು. ಇಲ್ಲಾ ಟ್ರಯಲ್ ಮುಗಿಯುವವರೆಗೂ ಜೈಲು ಫಿಕ್ಸ್ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

More from Filmibeat

English summary
Supreme court cancelled bail what will be the option for Darshan and Pavithra Gowda.
Read more about: darshan pavithra gowda sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X