Darshan Arrest:ಮತ್ತೆ ದರ್ಶನ್ ಬಂಧನ: ಒಂದು ದಿನವೂ ಗ್ಯಾಪ್ ಕೊಡಲಿಲ್ಲ ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದೃಷ್ಟ ಮತ್ತೆ ಕೈ ಕೊಟ್ಟಿದೆ. ಸುಪ್ರೀಂ ಕೋರ್ಟ್ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನು ರದ್ದು ಮಾಡಿ ಬಂಧಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಪವಿತ್ರಾ ಗೌಡ, ಉಳಿದ ಮೂರು ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ದರ್ಶನ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಕೊನೆಗೂ ಪತ್ನಿ ವಿಜಯಲಕ್ಷ್ಮಿ ಅವರ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ದರ್ಶನ್ ಅವರನ್ನು ಹುಡುಕಾಟ ಮಾಡುತ್ತಿತ್ತು. ಆದರೆ, ದರ್ಶನ್ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದರು ಎಂದು ವರದಿಯಾಗಿದೆ. ಆದರೆ, ಪೊಲೀಸರು ದರ್ಶನ್ ಅವರಿಗಾಗಿ ಹೊಸಕೆರೆಹಳ್ಳಿಯ ಸಮೀಪದಲ್ಲಿರುವ ಪತ್ನಿ ವಿಜಯಲಕ್ಷ್ಮಿಯವರ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಬಂಧಿಸಲಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಎರಡನೇ ಬಾರಿ ದರ್ಶನ್ ಅರೆಸ್ಟ್ ಆಗುತ್ತಿದ್ದಾರೆ.

Supreme court didn t gave single day exemption to Darshan to surrender by Supreme court

ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ. ಬಳಿಕ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತೆ. ಬಳಿಕ ಅವರನ್ನು ಜೈಲಿಗೆ ಕಳುಹಿಸಲಾಗುತ್ತೆ. ಆದರೆ, ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತಾರೋ? ಇಲ್ಲವೋ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗುತ್ತಾರೋ? ಅನ್ನೋದು ಗೊತ್ತಾಗಬೇಕಿದೆ. ಆದರೆ, ಇಂಟ್ರೆಸ್ಟಿಂಗ್ ಅಂದರೆ, ದರ್ಶನ್ ಅವರನ್ನು ತತಕ್ಷಣವೇ ಬಂಧಿಸಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.

ತತಕ್ಷಣ ದರ್ಶನ್‌ ಬಂಧನ ಯಾಕೆ?

ಸಾಮಾನ್ಯವಾಗಿ ಜಾಮೀನು ರದ್ದು ಆದರೆ, ಆರೋಪಿಗಳಿಗೆ ನ್ಯಾಯಾಲಯ ಒಂದು ವಾರ, 10 ದಿನ ಹೀಗೆ ಪೊಲೀಸರಿಗೆ ಶರಣಾಗುವುದಕ್ಕೆ ಅವಕಾಶ ನೀಡುತ್ತೆ. ಆದರೆ, ದರ್ಶನ್ ಕೇಸ್‌ನಲ್ಲಿ ಹಾಗೆ ಆಗಲಿಲ್ಲ. ಸುಪ್ರೀಂ ಕೋರ್ಟ್ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಯನ್ನು ತತಕ್ಷಣವೇ ಬಂಧಿಸಬೇಕು ಎಂದು ಆದೇಶ ನೀಡಿತ್ತು. ದರ್ಶನ್ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಯಾಕಿಷ್ಟು ಕಟುವಾದ ನಿರ್ಧಾರ ತೆಗೆದುಕೊಳ್ತು? ಅನ್ನೋದನ್ನು ವಕೀಲರು ರಿವೀಲ್ ಮಾಡಿದ್ದಾರೆ.

ಏನಂತಾರೇ ವಕೀಲರು?

"ಇವತ್ತಿನ ತೀರ್ಪಿನ ಪ್ರಕಾರ ನ್ಯಾಯಾಲಯ ಕಾಲಾವಕಾಶ ಕೊಡುವಂತಹ ಯಾವುದೇ ಅವಕಾಶವನ್ನು ಕೊಟ್ಟಿಲ್ಲ. ತತಕ್ಷಣಕ್ಕೆ ವಶಕ್ಕೆ ತೆಗೆದುಕೊಳ್ಳಿ ಎಂದು ನಮ್ಮ ಅಧಿಕಾರಿಗಳಿಗೆ ಆದೇಶ ಕೊಟ್ಟಿದ್ದಾರೆ" ಎಂದು ರಾಜ್ಯ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ದರ್ಶನ್ ಸೇರಿದಂತೆ ಏಳು ಮಂದಿಯನ್ನು ತತಕ್ಷಣ ಬಂಧಿಸಿ ಎಂದು ಹೇಳಿದೆ. ಈ ಆದೇಶಕ್ಕೆ ಹಲವರು ತಮ್ಮದೇ ವಿಶ್ಲೇಷಣೆಯನ್ನು ಕೊಟ್ಟಿದ್ದಾರೆ. ದರ್ಶನ್ ಜೈಲಿನಲ್ಲಿ ನಡೆದುಕೊಂಡ ರೀತಿ, ಹೊರಬಂದ್ಮೇಲೆ ಇದ್ದ ರೀತಿ ಎರಡನ್ನೂ ಗಮನಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.

"ಜೈಲ್‌ನಲ್ಲಿ ಇದ್ದಾಗ ಇವರ ನಡವಳಿಕೆ ಹೇಗಿತ್ತು. ಹಾಗೇ ಜೈಲ್‌ನಿಂದ ಹೊರ ಬಂದ್ಮೇಲೆ ಇವರ ನಡವಳಿಕೆ ಹೇಗಿತ್ತು ಅನ್ನೋದನ್ನು ಕರ್ನಾಟಕ ಸರ್ಕಾರದ ಪರವಾಗಿ ದಾಖಲೆಗಳನ್ನು ಸಲ್ಲಿಸಿದ್ವಿ. ಮುಖ್ಯ ಆರೋಪಿ ಏನಿದ್ದಾರೆ ಅವರ ವಿರುದ್ಧ ಎರಡು ಕೇಸ್ ದಾಖಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಹಾ ಕುಡಿಯೋದು, ಸಿಗರೇಟು ಸೇದುವುದು, ಫೋನ್‌ನಲ್ಲಿ ಮಾತಾಡೋದರ ಬಗ್ಗೆ ತನಿಖೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಗಳ ಮೇಲೂ ಕ್ರಮ ಕೈಗೊಂಡಿದ್ದೇವೆ." ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ.

More from Filmibeat

English summary
Supreme court didn't gave single day exemption to Darshan to surrender by Supreme court.
Read more about: darshan supreme court bail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X