"233 ಸಾಕ್ಷಿಗಳು.. ಈ ನಿಟ್ಟಿನಲ್ಲಿ ಹೋದರೆ, ಐದು ವರ್ಷ ಆಗುತ್ತೆ"; ಪವಿತ್ರಾ ಗೌಡ ಪರ ವಕೀಲ ಬಾಲನ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಜೈಲು ಎಂಬ ನರಕದಿಂದ ದರ್ಶನ್ ಬೇಸತ್ತು ಹೋಗಿದ್ದಾರೆ. ಹೀಗಾಗಿ ಮತ್ತೆ ಸುಪ್ರೀಂ ಕೋರ್ಟ್‌ಗೆ ದರ್ಶನ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಇದರಲ್ಲಿ ಪ್ರಮುಖವಾಗಿ ಈ ಪ್ರಕರಣದ ಟ್ರಯಲ್ ವಿಳಂಬವಾಗುತ್ತಿದ್ದೆ ಎಂದು ಆರೋಪ ಮಾಡಿದ್ದರು. ಈ ಮೂಲಕ ಜಾಮೀನು ಪಡೆಯುವ ಪ್ರಯತ್ನ ಮಾಡಿದ್ದರು.
ಇದರೊಂದಿಗೆ ಜೈಲಿನಲ್ಲಿ ಸಹ ಖೈದಿಗಳಿಂದ ಜೀವ ಬೆದರಿಕೆ, ಕ್ವಾರಂಟೈನ್ ಸೆಲ್, ಕುಟುಂಬದವರ ಭೇಟಿಗೆ ಸಮಾನ ಅವಕಾಶವಿಲ್ಲ, ಇಂತಹದ್ದೇ ಒಂದಿಷ್ಟು ಕಾರಣಗಳನ್ನು ನೀಡಿ ಜಾಮೀನು ನೀಡುವಂತೆ ದರ್ಶನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಲ್ಲೂ ಹಿನ್ನೆಡೆಯಾಗಿದೆ. ಒಂದು ವರ್ಷದ ಒಳಗೆ ಟ್ರಯಲ್ ಮುಗಿಸುವಂತೆ ಸುಪ್ರೀಂ ಕೋರ್ಟ್ ಸೂಚನೆಯನ್ನು ನೀಡಿದೆ. ಹೀಗಾಗಿ ಒಂದು ವರ್ಷ ದರ್ಶನ್ ಜೈಲಿನಲ್ಲಿ ಇರಬೇಕಾಗಿದೆ.

ದರ್ಶನ್ ಕಥೆ ಹೀಗಾದರೇ, ಪವಿತ್ರಾ ಗೌಡ ಕಥೆಯೇನು? ಅವರೂ ಕೂಡ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಬಹುದೇ? ಅಲ್ಲಿ ಅರ್ಜಿ ಸಲ್ಲಿಸಿದರೆ, ಜಾಮೀನು ಸಿಗಬಹುದೇ? ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ ದರ್ಶನ್ ಅನುಕೂಲ ಆಯ್ತಾ? ಇಲ್ಲ ಸಂಕಷ್ಟನಾ? ಅನ್ನೋದನ್ನು ಪವಿತ್ರಾ ಗೌಡ ಪರ ವಕೀಲರು ಟಿವಿ9ಗೆ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ಪವಿತ್ರಾ ಗೌಡ ಅವರ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬಹುದು. ಅವರು ಹೇಳಿದರೆ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಹಾಕುತ್ತೇನೆ. ಅವರು ಇನ್ನೂ ಹೇಳಿಲ್ಲ. ಅವರಿಗೂ ಗೊತ್ತಿದೆ, ಬೇರೆ ಬೇರೆ ಲಾಯರ್ ಇದ್ದಾರೆ. ನಾನು ಟ್ರಯಲ್ ಲಾಯರ್ ಅಷ್ಟೇ. ಟ್ರಯಲ್ ನಡೆಸುತ್ತಿದ್ದೇನೆ. ಹಾಕಿ ಅಂದರೆ, ಹಾಕಬಹುದು. ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಬಹುದು." ಎಂದು ವಕೀಲ ಬಾಲನ್ ಹೇಳಿದ್ದಾರೆ.
"ಅವರಿಗೆ ಮಹಿಳೆ ಅನ್ನೋ ಎಕ್ಸ್‌ಟ್ರಾರ್ಡಿನರಿ ಗ್ರೌಂಡ್ ಇದೆ. ಸಿಂಗಲ್ ಪೇರಂಟ್, ಮಗಳು ಇವೆಲ್ಲವೂ ಅಡ್ವಾಂಟೆಜ್‌ಗಳು ಇವೆ. ಕೊಲೆ ಪ್ರಕರಣದಲ್ಲಿ ಅವರ ಪಾತ್ರ ತುಂಬಾನೇ ಕಡಿಮೆ ಇದೆ. ಪಾತ್ರವೇ ಇಲ್ಲ ಎಂದು ಹೇಳಬಹುದು. ಹೀಗಾಗಿ ಅವರಿಗೆ ಜಾಮೀನು ಸಿಕ್ಕಿದರೂ ಸಿಗಬಹುದು. ಸಿಗಬಹುದು ಅಷ್ಟೇ.. ಈ ಕಡೆಗೂ ಜಂಪ್ ಆಗಬಹುದು. ಆ ಕಡೆಗೂ ಜಂಪ್ ಆಗಬಹುದು ಹೇಳುವುದಕ್ಕೆ ಬರೋದಿಲ್ಲ." ಎಂದು ವಕೀಲ ಬಾಲನ್ ಅಭಿಪ್ರಾಯ ಪಟ್ಟಿದ್ದಾರೆ.
"233 ಸಾಕ್ಷಿಗಳು.. ಈ ನಿಟ್ಟಿನಲ್ಲಿ ಹೋದರೆ, ಐದು ವರ್ಷ ಆಗುತ್ತೆ. ಯುಎ,ಪಿಎ ಕೇಸ್‌ನಲ್ಲಿ 18 ವರ್ಷ ಜೈಲ್‌ನಲ್ಲಿ ಇರೋರೂ ಇದ್ದಾರೆ. ಯುಎ,ಪಿಎ 43 ಡಿ 5 ಅನ್ನೋ ಒಂದು ಕಾನೂನು ಇದೆ. ಅದರಲ್ಲಿ ಜಾಮೀನು ಕೊಡಲೇ ಬಾರದು ಅನ್ನೋ ಕಾನೂನು ಇದೆ. 2009ರಿಂದ ಟ್ರಯಲ್ ನಡೆಯುತ್ತಿದೆ. ಈಗಲೂ ಸುಪ್ರೀಂ ಕೋರ್ಟ್ ನೋ ಬೇಲ್ ಅಂದು ಹೇಳುತ್ತಿದ್ದಾರೆ. ಇದು ಯುಎ,ಪಿಎ ಕಾಯ್ದೆ ಅಲ್ಲ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನೋ ಬೇಲ್ ಅಂದ್ಮೇಲೆ ಮತ್ತೆಲ್ಲಿ ಸಿಗುತ್ತೆ? ಜಾಮೀನು ಅನ್ನೋದು ಮುಚ್ಚಿ ಹೋಗಿತ್ತು. ಅದೀಗ ಮತ್ತೆ ಓಪನ್ ಆಗಿದೆ." ಎಂದು ಪವಿತ್ರಾ ಗೌಡ ಪರ ವಕೀಲ ಬಾಲನ್ ಹೇಳಿದ್ದಾರೆ.


Click it and Unblock the Notifications