»   » ಆರ್ಯನ್ ಚಿತ್ರದಲ್ಲಿ ಒಂದಾದ ಶಿವಣ್ಣ, ಕಿಚ್ಚ ಸುದೀಪ್

ಆರ್ಯನ್ ಚಿತ್ರದಲ್ಲಿ ಒಂದಾದ ಶಿವಣ್ಣ, ಕಿಚ್ಚ ಸುದೀಪ್

Posted By:
Subscribe to Filmibeat Kannada

ಈ ವಾರ ಬಿಡುಗಡೆಗೆ ಸಜ್ಜಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ 'ಆರ್ಯನ್' ಚಿತ್ರದಲ್ಲಿ ಪ್ರೇಕ್ಷಕರಿಗೆ ಸಖತ್ ಆಶ್ಚರ್ಯವೊಂದು ಕಾದಿದೆ.

ಕನ್ನಡದಲ್ಲಿ ಮಂಚೂಣಿಯಲ್ಲಿರುವ ಇಬ್ಬರು ನಟರಾದ ಶಿವಣ್ಣ ಮತ್ತು ಸುದೀಪ್ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಅದಕ್ಕೆ ರೆಕ್ಕೆಪುಕ್ಕಗಳು ಸೇರಿ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಸುದ್ದಿಯಾಗಿದ್ದವು.

ಇದಕ್ಕೆ ಪೂರಕ ಎನ್ನುವಂತೆ ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರರಂಗದ ಪ್ರತಿಭಟನೆಯಲ್ಲಿ ಸುದೀಪ್ ಮತ್ತು ದರ್ಶನ್ ಹೀಗೆ ಬಂದು ಹಾಗೆ ಹೋಗಿದ್ದರು. ಅಲ್ಲದೇ, ಪ್ರತಿಭಟನೆಯ ವೇಳೆ ಮಾತನಾಡುತ್ತಿದ್ದ ಸುದೀಪ್ ಪ್ರತಿಭಟನೆಗೆ ಇನ್ನಷ್ಟು ಜನ ಸೇರಿಸಬಹುದಾಗಿತ್ತು ಎಂದಿದ್ದರು. (ರಾಜ್ ಫ್ಯಾಮಿಲಿಗೆ ಇಂಡಸ್ಟ್ರಿ ಆಳುವ ದುರುದ್ದೇಶವಿಲ್ಲ)

ನೂರು ಜನ ಬಂದರೂ ಪ್ರತಿಭಟನೆಯೇ, ಸಾವಿರ ಜನ ಬಂದರೂ ಪ್ರತಿಭಟನೆಯೇ ಎಂದು ಶಿವಣ್ಣ ತಿರುಗೇಟು ನೀಡಿದ್ದರು. ಈ ಇಬ್ಬರು ನಟರು ಒಟ್ಟಿಗೆ ಕೆಲಸ ಮಾಡುವುದು ಅಸಾಧ್ಯ ಎಂದು ಹರಿದಾಡುತ್ತಿದ್ದ ಸುದ್ದಿಗೆ ಸದ್ಯ ಬ್ರೇಕ್ ಬಿದ್ದಿದೆ.

ಆರ್ಯನ್ ಚಿತ್ರದಲ್ಲಿ ಶಿವಣ್ಣನ ಜೊತೆ ಕಿಚ್ಚ ಸುದೀಪ್ ಕೆಲಸ ಮಾಡಿದ್ದಾರೆ. ಮುಂದೆ ಓದಿ..

ಕಂಠದಾನ ಮಾಡುವುದು ಸುದೀಪ್ ಗೆ ಹೊಸದಲ್ಲ

ಇತರ ಕಲಾವಿದರಿಗೆ ಕಂಠದಾನ ಮಾಡುವುದು ಕಿಚ್ಚ ಸುದೀಪ್ ಗೆ ಹೊಸದಲ್ಲ. ಈ ಹಿಂದೆ ಬ್ಲಾಕ್ ಬಸ್ಟರ್ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೂ ಸುದೀಪ್ ಧ್ವನಿ ನೀಡಿದ್ದರು. ಗಣೇಶ್ ಅಭಿನಯದ ಶ್ರಾವಣಿ ಸುಬ್ರಮಣ್ಯ ಚಿತ್ರದಲ್ಲೂ ಸುದೀಪ್ ಧ್ವನಿ ಕೇಳಬಹುದಾಗಿತ್ತು.

ಆರ್ಯನ್ ಚಿತ್ರದಲ್ಲಿ ಕಂಠದಾನ ಮಾಡಿದ ಸುದೀಪ್

ಆರ್ಯನ್ ಚಿತ್ರಕ್ಕಾಗಿ ಸುದೀಪ್ ತನ್ನ ಧ್ವನಿ ನೀಡಿದ್ದಾರೆ. ಸಿನಿಮಾ ಶುರುವಿನಲ್ಲಿ ಅಭಿಮಾನಿಗಳು ಸುದೀಪ್ ಧ್ವನಿಯನ್ನು ಕೇಳಬಹುದಾಗಿದೆ.

ಪಾತ್ರ ಪರಿಚಯ ಮಾಡಲಿರುವ ಸುದೀಪ್

ದಿ. ರಾಜೇಂದ್ರ ಬಾಬು, ಚಿ. ಗುರುದತ್ ನಿರ್ದೇಶನದ ಆರ್ಯನ್ ಚಿತ್ರದ ಆರಂಭದಲ್ಲಿ ಪಾತ್ರಗಳ ಪರಿಚಯವನ್ನು ಕಿಚ್ಚ ಸುದೀಪ್ ತನ್ನ ಧ್ವನಿಯ ಮೂಲಕ ಮಾಡಲಿದ್ದಾರೆ.

ಒಗ್ಗಟ್ಟಿನ ಪ್ರದರ್ಶನ

ತಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಅನ್ನುವುದನ್ನು ಈ ಇಬ್ಬರು ಪ್ರಮುಖ ನಟರು ಈ ಚಿತ್ರದ ಮೂಲಕ ಹೇಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.

ಆಗಸ್ಟ್ ಒಂದಕ್ಕೆ ಚಿತ್ರ ಬಿಡುಗಡೆ

ಇದೇ ಶುಕ್ರವಾರ ಆಗಸ್ಟ್ ಒಂದರಂದು ಆರ್ಯನ್ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಈಗಾಗಲೇ ಸೆನ್ಸಾರ್ ಆಗಿದ್ದು 'ಯು' ಸರ್ಟಿಫಿಕೇಟ್ ಪಡೆದುಕೊಂಡಿದೆ.

English summary
In a surprising move Kichcha Sudeep has given commentary for Shivaraj Kumar's upcoming 'Aryan' movie.
Please Wait while comments are loading...