"ವಿಷ್ಣುದಾದ ಮೇಲೆ ಕೋಪವಿತ್ತು..ಆ ಕೋಪ ನನ್ನ ಮೇಲೂ ಇರುತ್ತಿತ್ತು"; ಅಳಿಯ ಅನಿರುದ್ಧ್ ಮಾತಿನ ಮರ್ಮವೇನು?

'ಜೊತೆಜೊತೆಯಲಿ' ಧಾರಾವಾಹಿ ವಿವಾದದ ಬಳಿಕ ಅನಿರುದ್ಧ್ ಹೊಸ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಸಿನಿಮಾ ಟೇಕ್ ಆಫ್ ಆಗಿದ್ದು ಬಿಟ್ಟಿರೆ, ಅನೌನ್ಸ್ ಆಗಿದ್ದ 'ಸೂರ್ಯವಂಶ' ಕೂಡ ನಿಂತಿ ಹೋಗಿತ್ತು. ಈಗ ಮತ್ತೆ ಸೂರ್ಯವಂಶ ಹೊಸ ರೂಪದಲ್ಲಿ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಆ ಧಾರಾವಾಹಿ ಈಗ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಸಜ್ಜಾಗಿ ನಿಂತಿದೆ.

'ಸೂರ್ಯವಂಶ' ಧಾರಾವಾಹಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅನಿರುದ್ಧ್ ಫಿಲ್ಮ್‌ಬೀಟ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ 'ಸೂರ್ಯವಂಶ' ಧಾರಾವಾಹಿ ಬಗ್ಗೆ ಮಾತಾಡಿದ್ದಷ್ಟೇ ಅಲ್ಲದೆ. ಮಾವ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ಅವರೊಂದಿಗೆ ನಂಟಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Suryavamsha serial actor Aniruddha Jatkar about his experience with Vishnuvardhan

ವಿಷ್ಣುವರ್ಧನ್ ಅಗಲಿದ ಬಳಿಕ ಕನ್ನಡ ಚಿತ್ರರಂಗ ಅನಿರುದ್ಧ್ ಜತ್ಕರ್ ಅವರನ್ನು ಯಾವ ರೀತಿ ನೋಡುತ್ತಿದೆ? ವಿಷ್ಣುದಾದ ಕೊಟ್ಟಷ್ಟೇ ಪ್ರೀತಿ ಅನಿರುದ್ಧ್‌ಗೂ ಕೊಡುತ್ತಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ನಡುವಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

"ಕೆಲವರು ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ"

"ಕೆಲವು ಬಾರಿ ಕೆಲವರು ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಕೆಲವರಿಗೆ ಅವರ ಮೇಲೆ ಕೋಪವಿದ್ದಲ್ಲಿ, ಆ ಕೋಪ ನಮ್ಮ ಮೇಲೂ ಇರೋದು. ಕೆಲವರಿಗೆ ಅವರ ಮೇಲೆ ಅಭಿಮಾನವಿದೆ. ಅದನ್ನೇ ಅವರು ನನ್ನ ಮೇಲೂ ತೋರಿಸುತ್ತಿದ್ದರು. ಈಗಲೂ ಕೂಡ ಹಾಗೇ ಇದೆ. ಇನ್ನೂ ನಿಂತಿಲ್ಲ. ಯಾರಿಗೆ ಕೋಪವಿದೆಯೋ ಅದು ನನ್ನ ಮೇಲೂ ಇದೆ. ಯಾರಿಗೆ ಪ್ರೀತಿ ಇದೆಯೋ. ಆ ನಿಸ್ವಾರ್ಥ ಪ್ರೀತಿ ನನ್ನ ಮೇಲೂ ಇದೆ." ಎಂದು ಅನಿರುದ್ಧ್ ಹೇಳಿಕೊಂಡಿದ್ದಾರೆ.

Suryavamsha serial actor Aniruddha Jatkar about his experience with Vishnuvardhan

"ನಾನು ಅದೃಷ್ಟವಂತ"

"ಈ ಸಂಬಂಧದಿಂದ ವೈಯಕ್ತಿಕವಾಗಿ ನನಗೆ ಏನು ಸಿಕ್ತು? ಅವರಿಂದ ನನಗೆ ಏನು ಸಿಕ್ತು ಅನ್ನೋದು ನನಗೆ ತುಂಬಾನೇ ಮುಖ್ಯ. ಅದನ್ನೇ ಜಾಸ್ತಿ ನಾನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀನಿ. ಅದಕ್ಕೆ ಚಿರಋಣಿಯಾಗಿದ್ದೀನಿ. ಅದಕ್ಕೆ ನಾನು ಅದೃಷ್ಟವಂತನೆಂದು ನಾನು ಭಾವಿಸುತ್ತೇನೆ. ಒಂದಿಷ್ಟು ವರ್ಷ ನಾನು ಅವರ ಜೊತೆಯಲ್ಲಿ ಇದ್ದೆ. ಅವರ ಎಷ್ಟೋ ಅನುಭವ ತಿಳಿದುಕೊಂಡಿದ್ದೀನಿ, ಕೇಳಿದ್ದೀನಿ, ಅವರೊಂದಿಗೆ ಸಾಕಷ್ಟು ಹರಟೆ ಹೊಡೆದಿದ್ದೀನಿ. ಚರ್ಚೆ ಮಾಡಿದ್ದೀನಿ. ಸಿನಿಮಾಗಳನ್ನು ನೋಡಿದ್ದೀನಿ. ಹಾಡು ಹಾಡಿದ್ದೀನಿ. ನನಗೆ ಅವರೊಂದಿಗೆ ಸಿಕ್ಕಿರೋ ಅನುಭವವನ್ನು ಬೆಲೆ ಕಟ್ಟುವುದಕ್ಕೇ ಆಗುವುದಿಲ್ಲ." ಎಂದು ವಿಷ್ಣುದಾದ ಜೊತೆಗಿನ ಒಡನಾಟದ ಬಗ್ಗೆ ಅನಿರುದ್ಧ್ ಫಿಲ್ಮಿಬೀಟ್‌ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನನ್ನ ಹಣೆಬರಹದಲ್ಲಿ ಏನಿರುತ್ತೋ ಅದು ಸಿಗುತ್ತೆ"

"ನನ್ನ ವೃತ್ತಿ ಬದುಕಿನಲ್ಲಿ ಜನ ನನ್ನನ್ನು ಯಾವ ರೀತಿ ನೋಡುತ್ತಿದ್ದರು ಅನ್ನುವ ಬಗ್ಗೆ ನಾನು ಜಾಸ್ತಿ ಯೋಚನೆ ಮಾಡಿಲ್ಲ. ಅಲ್ಲಿ ಸಿಹಿನೂ ಇದೆ. ಕಹಿನೂ ಇದೆ. ಅದು ಓಕೆ. ಆದರೆ, ನೇರ ಸಂಬಂಧ ಇದೆಯಲ್ಲ ಬಹಳ ಖುಷಿ ತಂದುಕೊಟ್ಟಿದೆ. ವೈಯಕ್ತಿಕ ಸಂಬಂಧ ಇದ್ದಾಗ ವೃತ್ತಿ ಬಗ್ಗೆ ಯೋಚನೆ ಮಾಡಬಾರದು. ನನ್ನ ಹಣೆಬರಹದಲ್ಲಿ ಏನಿರುತ್ತೋ ಅದು ಸಿಕ್ಕೇ ಸಿಗುತ್ತೆ. ಏನು ಇಲ್ಲವೋ ಅದು ತಿಪ್ಪರಲಾಗ ಹಾಕಿದ್ರೂ ಬರೋದಿಲ್ಲ.." ಎಂದು ಅನಿರುದ್ಧ್ ಹೇಳಿಕೊಂಡಿದ್ದಾರೆ.

"ನಿಮಗೆ ಒಳ್ಳೆಯದಾಗಬೇಕು ಅಂತಿದ್ರು"

"ಅಪ್ಪನವರು ನನಗೆ ಒಳ್ಳೆಯದಾಗಬೇಕು ಅಂತ ತುಂಬಾನೇ ಆಸೆ ಪಟ್ಟಿದ್ದಾರೆ. ಎಷ್ಟು ಆಸೆ ಪಟ್ಟಿದ್ದಾರೆ ಅಂದರೆ, ಅದನ್ನು ಮಾತುಗಳಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಎಷ್ಟು ಹೇಳಿಕೊಂಡಿದ್ದಾರೆ. ಅಂದ್ಕೊಂಡಿದ್ದಾರೆ. ಜನಗಳ ಜೊತೆಯಲ್ಲಿ ಮಾತಾಡಿದ್ದಾರೆ. ಹಾಗಾಗಿ ಇವತ್ತು ನನಗೆ ಓಳ್ಳೆಯದಾಗುತ್ತಿರೋ ಜನರ ಆಶೀರ್ವಾದನೇ. ನಿಮಗೆ ಒಳ್ಳೆಯದಾಗಬೇಕು. ನಿಮಗೆ ಒಳ್ಳೆಯದಾಗಬೇಕು ಅಂತ ಅದೆಷ್ಟು ಸಾರಿ ಹೇಳಿದ್ದಾರೋ ಅದಕ್ಕೆ ಲೆಕ್ಕವೇ ಇಲ್ಲ." ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Aniruddha Jatkar about film industry recognising him after Vishnuvardhan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X