ಟಿ.ಎನ್.ಸೀತಾರಾಂ 'ಮಗಳು ಜಾನಕಿ' ಗಾನವಿಯ 'ಭಾವಚಿತ್ರ' ಅನಾವರಣ: ಏನಿದು ವಿಷಯ?

ಟಿಎನ್ ಸೀತಾರಾಂ ನಿರ್ದೇಶಿಸಿದ 'ಮಗಳು ಜಾನಕಿ' ಧಾರಾವಾಹಿ ನೋಡಿದವರಿಗೆ ನಟಿ ಗಾನವಿ ಲಕ್ಷ್ಮಣ್ ಪರಿಚಯ ಚೆನ್ನಾಗೇ ಇರುತ್ತೆ. ಇನ್ನು ಇತ್ತೀಚೆಗೆ ತೆರೆಕಂಡ 'ಹೀರೋ' ಸಿನಿಮಾ ನೋಡಿದವರಿಗೂ ಗಾನವಿ ಲಕ್ಷ್ಮಣ ನೆನಪಿನಲ್ಲಿರುತ್ತಾರೆ. 'ಹೀರೋ' ಸಿನಿಮಾದಿಂದ ಗ್ರ್ಯಾಂಡ್ ಆಗಿ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಗಾನವಿಯ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ 'ಭಾವಚಿತ್ರ'. ಈ ಸಿನಿಮಾ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈಗ ಹಾಡುಗಳನ್ನು ನೋಡಿ ಅಂತಿದೆ.

'ಭಾವಚಿತ್ರ' ಸಿನಿಮಾದ ಕತೆ ಗಾನವಿ ಲಕ್ಷ್ಮಣ್ ಸುತ್ತನೇ ಸಾಗುತ್ತೆ. ಒಂದು ಊರಿನಲ್ಲಿ ಒಂದು ಹಳೆಯ ದೇವಸ್ಥಾನ. ಅದರ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ಪಾತ್ರದಲ್ಲಿ ಗಾನವಿ 'ಭಾವಚಿತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಿದ್ದು, ಭಾವ ಚಿತ್ರದ ಕತೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಗಾನವಿ 'ಭಾವಚಿತ್ರ'ಕ್ಕೆ ಇತಿಹಾಸದ ತಿರುವು

'ಭಾವಚಿತ್ರ' ಇದೊಂದು ‌‌ ಥ್ರಿಲ್ಲರ್, ಸೆಂಟಿಮೆಂಟ್ ಸಿನಿಮಾ ಅನ್ನುವುದು ಸಿನಿಮಾದ ಟ್ರೈಲರ್ ಹೇಳುತ್ತಿದೆ. ಸಿನಿಮಾದ ಹೆಸರೇ ಹೇಳುವಂತೆ ಕಥೆ ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ಸಾಗುತ್ತೆ ಅನ್ನುವುದನ್ನು ಚಿತ್ರತಂಡವೇ ಹೇಳಿದೆ. ಹಾಗಂತ ಕೇವಲ ಥ್ರಿಲ್ಲರ್, ಸೆಂಟಿಮೆಂಟ್ ಅಷ್ಟೇ ಅಲ್ಲ. ಇಲ್ಲಿ ಲವ್ ಸ್ಟೋರಿ ಕೂಡ ಇದೆ. ಅನಿರೀಕ್ಷಿತ ಟ್ವಿಸ್ಟ್ ಅಂಡ್ ಟರ್ನ್‌ ಗಳಿವೆ. ಇಲ್ಲಿ ಗಾನವಿ ಶಿಲ್ಪಕಲೆ ಅಭ್ಯಾಸ ಮಾಡಲು ಬಂದಿದ್ದರೆ. ಅತ್ತ ಚಿತ್ರದ ನಾಯಕ ಫೋಟೊಗ್ರಫಿ ಮಾಡಲು ಬಂದಿರುತ್ತಾನೆ. ಇವರಿಬ್ಬರ ನಡುವೆ ನಡೆಯುವ ಕಥೆಯೇ ಈ 'ಭಾವಚಿತ್ರ'.

T N Seetharam Magalu Janaki actress Ganavi lakshman new Bhavachitra song released

ಮಗಳು ಜಾನಕಿ ಧಾರಾವಾಹಿ ವೇಳೆ ಕಥೆ ಹೇಳಿದ್ದ ನಿರ್ದೇಶಕ

'ಭಾವಚಿತ್ರ' ಸಿನಿಮಾ ಕಥೆಯನ್ನು ನಿರ್ದೇಶಕ ಗಿರೀಶ್ ಕುಮಾರ್ 'ಮಗಳು ಜಾನಕಿ' ಧಾರಾವಾಹಿಯ ಸಮಯದಲ್ಲೇ ಗಾನವಿ ಲಕ್ಷ್ಮಣ್‌ಗೆ ಹೇಳಿದ್ದರು. ಆಗಲೇ ಗಾನವಿ ಕಥೆಯನ್ನು ಇಷ್ಟಪಟ್ಟಿದ್ದರು. ಹೀಗಾಗಿ ಗಾನವಿ ಹಾಗೂ ನಿರ್ದೇಶಕರದ್ದು ತೀರಾ ಹಳೆಯ ಸಂಬಂಧ. 'ಭಾವಚಿತ್ರ' ಸಿನಿಮಾದಲ್ಲಿ ಗಾನವಿಗೆ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವುದು ಚಕ್ರವರ್ತಿ. ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ 'ಯಾನ' ಸಿನಿಮಾದಲ್ಲಿ ಚಕ್ರವರ್ತಿ ನಟಿಸಿದ್ದು, ಇದು ಅವರ 2ನೇ ಸಿನಿಮಾ.

T N Seetharam Magalu Janaki actress Ganavi lakshman new Bhavachitra song released

2017ರಲ್ಲಿ ಬಿಡುಗಡೆಯಾಗಿದ್ದ 'ಅವಾಹಯಾಮಿ' ಸಿನಿಮಾದ ನಿರ್ದೇಶಕ ಗಿರೀಶ್‌ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗಾನವಿ ಜೊತೆ ಗಿರೀಶ್‌ ಬಿಜ್ಜಳ, ಶ್ರೀನಾಥ್‌ರಾವ್, ರಜತ್‌ ಮಯಿ ಮುಂತಾದವರು ನಟಿಸಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಗುಡಿಬಂಡೆಯಲ್ಲಿ ಚಿತ್ರೀಕರಣ ಮಾಡಾಗಿದೆ. ಈಗ ಸಿನಿಮಾದ ಹಾಡುಗಳನ್ನು ಗಾಯಕ ರಾಜೇಶ್‌ಕೃಷ್ಣನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

More from Filmibeat

English summary
T N Seetharam Magalu Janaki actress Ganavi lakshman new Bhavachitra song released. Bhavachitra is her first kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X