ಕಾರು ಅಪಘಾತದಲ್ಲಿ ತಮಿಳು ನಟ ನಿಧನ, ಬದುಕಿಗಾಗಿ ಪತ್ನಿ ಹೋರಾಟ

ತಮಿಳು ನಟ, ಖ್ಯಾತ ಮಿಮಿಕ್ರಿ ಕಲಾವಿದ ಮನು ಅಕ್ಟೋಬರ್ 28 ರಂದು ಚೆನ್ನೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮನು ಮತ್ತು ಆತನ ಪತ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲನೆಯ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿ ಹೊಡೆದಿದೆ.

ಈ ಅಪಘಾತದಿಂದ ಮನು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನ ಪತ್ನಿಯನ್ನು ಕೂಡಲೇ ನಗರದ ರಾಮಚಂದ್ರ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನು ಅವರ ಪತ್ನಿ ಬಗ್ಗೆ ವಿವರ ನೀಡಿರುವ ವೈದ್ಯರು ''ಇನ್ನು ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಸದ್ಯಕ್ಕೆ ಏನು ಹೇಳಲು ಸಾಧ್ಯವಿಲ್ಲ'' ಎಂದಿದ್ದಾರಂತೆ. ಮನು ದಂಪತಿಗೆ ಏಳು ವರ್ಷದ ಮಗು ಇದೆ ಎಂದು ತಿಳಿದುಬಂದಿದೆ.

Tamil Actor Mano Dead In Road Accident

ಮನು ಅವರು ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಕಂಡಿದ್ದ ಪುಜಾಲ್ ಸಿನಿಮಾದಲ್ಲಿ ನಟ ಮುರಳಿ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಟಿವಿ ವಾಹಿನಿಯಲ್ಲಿ ನಿರೂಪಣೆ ಮಾಡುವ ಮೂಲಕ ತಮ್ಮ ವೃತ್ತಿ ಆರಂಭಿಸಿದ್ದ ಮನು, ಮಿಮಿಕ್ರಿ ಮತ್ತು ಡ್ಯಾನ್ಸ್ ಮಾಡುವ ಕಲೆ ಹೊಂದಿದ್ದರು. ಜಗತ್ತಿನಾದ್ಯಂತ ಮಿಮಿಕ್ರಿಯಲ್ಲಿ ಕಾರ್ಯಕ್ರಮಗಳನ್ನ ನೀಡಿದ್ದಾರೆ. ಮನು ಅವರ ನಿಧನದ ಸುದ್ದಿ ಕೇಳಿ ಇಂಡಸ್ಟ್ರಿಯ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

More from Filmibeat

English summary
Popular television host, mimicry artist and tamil actor mano dead in road accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X