ಜಯಲಲಿತಾ ವಾರಸ್ದಾರ ಅಜಿತ್ ಅಲ್ಲ, ಮತ್ತೊಬ್ಬ ಸೂಪರ್ ಸ್ಟಾರ್.!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಳಿಕ ತಮಿಳು ರಾಜಕೀಯದಲ್ಲಿ ಭಾರಿ ಬದಲಾವಣೆಗಳಾಗಿವೆ. ಈ ಮಧ್ಯೆ ಜಯಲಲಿತಾ ಅವರ ನಂತರ ತಮಿಳುನಾಡಿನ ಜನತೆಗೆ ಯಾರು ಆ ಸ್ಥಾನವನ್ನ ತುಂಬಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ಹೀಗಿರುವಾಗಲೇ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಅಂತಹ ಸಿನಿಮಾ ನಟರು ತಮ್ಮ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜಯಲಲಿತಾ ಅವರ ಸ್ಥಾನ ತುಂಬಲು ಸಿದ್ಧವಾಗ್ತಿದ್ದಾರೆ.
ಅಜಿತ್ -ತಮಿಳುನಾಡಿನ ಮುಂದಿನ ಸಿಎಂ: ಜಯಲಲಿತಾ ಆಸೆ
ಈ ಹಿಂದೆ ಜಯಲಲಿತಾ ಅವರ ನಂತರ ಅವರ ವಾರಸ್ದಾರನಾಗಿ ತಮಿಳು ನಟ ಅಜಿತ್ ಬರಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಅಜಿತ್ ಬರುವ ಬಗ್ಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ. ಇದೀಗ, ಅಜಿತ್ ಸ್ಥಾನಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಯಾರು ಮುಂದೆ ಓದಿ....

ತಮಿಳು ಪಾಲಿಟಿಕ್ಸ್ ಗೆ ದಳಪತಿ
ರಜನಿಕಾಂತ್, ಕಮಲ್ ಹಾಸನ್ ನಂತರ ಈಗ ಮತ್ತೊಬ್ಬ ತಮಿಳು ಸ್ಟಾರ್ ನಟ ವಿಜಯ್ ಅವರು ಪಾಲಿಟಿಕ್ಸ್ ಗೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಎಲ್ಲ ತಯಾರಿಯನ್ನ ಸದ್ದಿಲ್ಲದೇ ಮಾಡಿಕೊಳ್ಳುತ್ತಿದ್ದಾರಂತೆ.

ಪ್ರಭಾವ ಬೀರುತ್ತಿಲ್ಲ ದಿಗ್ಗಜರ ಎಂಟ್ರಿ.!
ರಜನಿಕಾಂತ್, ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು ತಮಿಳು ಜನರ ಮೇಲೆ ಅಷ್ಟಾಗಿ ಪ್ರಭಾವ ಬೀರಿಲ್ಲ ಎಂಬ ಮಾತಿದೆ. ಯಾಕಂದ್ರೆ, ಈ ಇಬ್ಬರು ಸಿನಿಮಾಗಳನ್ನ ಮಾಡಿಕೊಂಡು ಕೊಂಚ ಸಮಯದಲ್ಲಿ ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ತಮಿಳರ ಮನದಲ್ಲಿ ಸ್ಥಾನ ಪಡೆಯಲು ಕಷ್ಟವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅಮ್ಮನ ನಂತರ ತಮಿಳುನಾಡಿಗೆ ವಾರಸ್ದಾರ.!
ಜಯಲಲಿತಾ ಅವರ ನಂತರ ನಟ ಅಜಿತ್ ರಾಜಕೀಯಕ್ಕೆ ಪ್ರವೇಶ ಮಾಡ್ತಾರೆ ಎನ್ನಲಾಗಿದೆ. ಆದ್ರೆ, ಅಂತಹ ಯಾವುದೇ ಘಟನೆ ಸಂಭವಿಸಿಲ್ಲ. ಇದೀಗ, ನಟ ವಿಜಯ್ ಅವರ ಬಗ್ಗೆ ಇಂತಹದ್ದೇ ಸುದ್ದಿ ಹರಿದಾಡುತ್ತಿದ್ದು, ವಿಜಯ್ ರಾಜಕೀಯ ಎಂಟ್ರಿಗೆ ಎಲ್ಲ ಸಿದ್ಧತೆ ನಡೆಸುತ್ತಿದ್ದು, ಅಮ್ಮನ ನಂತರ ತಮಿಳುನಾಡಿನ ವಾರಸ್ದಾರನಾಗಲು ಹೊರಟಿದ್ದಾರಂತೆ.

ವಿಜಯ್ ಸಿನಿಮಾಗಳಲ್ಲಿ ರಾಜಕೀಯ
ತಮಿಳುನಾಡಿನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ವಿಜಯ್, ತಮ್ಮ ಇತ್ತೀಚಿನ ಸಿನಿಮಾಗಳಲ್ಲಿ ರಾಜಕೀಯ ಅಂಶಗಳನ್ನ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಕೇರಳ ಪ್ರವಾಹ ಪೀಡಿತರಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದ್ದಾರೆ.


Click it and Unblock the Notifications











