ಪುನೀತ್ ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸಿದ ತಮಿಳಿನ ಹಾಸ್ಯ ನಟ ಯೋಗಿ ಬಾಬು

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿಕ ಭೇಟಿ ನೀಡಿ ನಮನ ಸಲ್ಲಿಸಲು ದಂಡು ದಂಡಾಗಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹಾಗಂತ ಅಭಿಮಾನಿಗಳು ಅಷ್ಟೇ ಅಲ್ಲ. ಪರಭಾಷೆಯ ಸ್ಟಾರ್ ನಟರು ಕೂಡ ಆಗಮಿಸಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ತಮಿಳು ಚಿತ್ರರಂಗದಿಂದ ವಿಶಾಲ್, ಸೂರ್ಯ, ಸಿದ್ಧಾರ್ಥ್, ಶರತ್ ಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಪುನೀತ್‌ ಹಠಾತ್ ನಿಧನಕ್ಕೆ ತಮಿಳು, ತೆಲುಗು ಚಿತ್ರರಂಗ ಕೂಡ ಕಂಬನಿ ಸುರಿಸಿತ್ತು. ಕೇವಲ ದಕ್ಷಿಣ ಭಾರತ ಅಷ್ಟೇ ಅಲ್ಲ. ಅಪ್ಪು ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗವನ್ನೇ ಕಂಗಲಾಗಿ ಹೋಗಿತ್ತು. ದಕ್ಷಿಣ ಭಾರತದ ಚಿತ್ರರಂಗದಿಂದ ಒಬ್ಬೊಬ್ಬರೇ ಗಣ್ಯರು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. ನಿನ್ನೆ ( ನವೆಂಬರ್ 20) ತಿಮಿಳು ಚಿತ್ರರಂಗದ ಹಾಸ್ಯ ನಟ ಯೋಗಿ ಬಾಬು ಸಮಾಧಿಗೆ ಭೇಟಿ ಪುನೀತ್‌ ರಾಜ್‌ ಕುಮಾರ್‌ಗೆ ನಮನ ಸಲ್ಲಿಸಿದ್ದಾರೆ.

ಅಪ್ಪು ಸಮಾಧಿಗೆ ಯೋಗಿ ಬಾಬು ಭೇಟಿ

ಅಪ್ಪು ಸಮಾಧಿಗೆ ಯೋಗಿ ಬಾಬು ಭೇಟಿ

ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ನಿನ್ನೆ ( ನವೆಂಬರ್ 20) ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದರು. ಅಪ್ಪು ನಿಧನದ ಹಿನ್ನೆಲೆ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸಿದ್ದಾರೆ. ಬಳಿಕ ಸೀದಾ ಪುನೀತ್ ರಾಜ್‌ಕುಮಾರ್ ಮನೆಗೆ ಹೋಗಿ ಅಪ್ಪು ಕುಟುಂಬಕ್ಕೆ ಸಮಾಧಾನ ಹೇಳಿ, ಅಪ್ಪು ಫೋಟೊಗೆ ನಮನ ಸಲ್ಲಿಸಿ ನಿರ್ಗಮಿಸಿದ್ದಾರೆ. ಹಾಸ್ಯ ಯೋಗಿ ಬಾಬು ಭೇಟಿ ನೀಡಿದ ಪೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಪ್ಪು ಭೇಟಿಯಾಗಿದ್ದ ಹಾಸ್ಯ ನಟ

ಅಪ್ಪು ಭೇಟಿಯಾಗಿದ್ದ ಹಾಸ್ಯ ನಟ

ಯೋಗಿ ಬಾಬುಗೂ ಅಣ್ಣಾವ್ರ ಕುಟುಂಬಕ್ಕೂ ನಿಕಟವಾದ ಸಂಬಂಧವಿದೆ. ಅದೇನಪ್ಪಾ ಅಂದರೆ, ಯೋಗಿ ಬಾಬು ಬೆಂಗಳೂರಿಗೆ ಬಂದಾಗ ಪುನೀತ್, ಇಲ್ಲವೆ ಶಿವಣ್ಣನ್ನು ಭೇಟಿ ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ಈ ಹಾಸ್ಯ ನಟ ಪುನೀತ್ ರಾಜ್‌ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲ ಸೃಷ್ಟಿಸಿತ್ತು. ಅಪ್ಪು ಜೊತೆಗಿದ್ದ ಇದೇ ಒಡನಾಟದಿಂದ ನಿನ್ನೆ( ನವೆಂಬರ್ 20) ಬೆಂಗಳೂರಿಗೆ ಬಂದು ನಮನ ಸಲ್ಲಿಸಿದ್ದಾರೆ.

ಶಿವಣ್ಣನ ಭೇಟಿಯಾಗಿದ್ದ ಯೋಗಿ ಬಾನು

ಶಿವಣ್ಣನ ಭೇಟಿಯಾಗಿದ್ದ ಯೋಗಿ ಬಾನು

ಕಾಲಿವುಡ್​ ಹಾಸ್ಯ ನಟ ಯೋಗಿ ಬಾಬು ಆಗಾಗ ಬೆಂಗಳೂರಿಗೆ ಬರುತ್ತಾರೆ. ಶೂಟಿಂಗ್ ಇಲ್ಲವೆ ಖಾಸಗಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಕನ್ನಡದ ನಟರ ಮನೆಗೆ ಭೇಟಿ ಕೊಟ್ಟ ಹೋಗುತ್ತಾರೆ. ಒಂದು ವರ್ಷದ ಹಿಂದಷ್ಟೇ ಯೋಗಿ ಬಾಬು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಶಿವಣ್ಣನ ಮನೆಗೂ ಭೇಟಿ ನೀಡಿದ್ದ ಯೋಗಿ ಬಾಬು ಸೆಂಚುರಿ ಸ್ಟಾರ್‌ರನ್ನು ಸನ್ಮಾನಿಸಿದ್ದರು. ಕೆಲವು ದಿನಗಳ ಹಿಂದೆ ದುನಿಯಾ ವಿಜಯ್ ಮನೆಗೂ ಭೇಟಿ ನೀಡಿದ್ದರು.

ಸೂಪರ್‌ಸ್ಟಾರ್ ಜೊತೆ ನಟಿಸಿದ ಹಾಸ್ಯ ನಟ

ಸೂಪರ್‌ಸ್ಟಾರ್ ಜೊತೆ ನಟಿಸಿದ ಹಾಸ್ಯ ನಟ

ಯೋಗಿ ಬಾಬು ತಮಿಳು ಚಿತ್ರದ ಬಹುಬೇಡಿಕೆ ನಟ. ತಮಿಳು ಸೂಪರ್‌ಸ್ಟಾರ್‌ಗಳಿಗೆ ತಮ್ಮ ಒಂದು ಸಿನಿಮಾದಲ್ಲಾದ್ರೂ ಯೋಗಿ ಬಾಬು ನಟಿಸಲೇಬೇಕು. ಆ ಮಟ್ಟಿಗೆ ಬೇಡಿಕೆ ಇವರ ಹಾಸ್ಯ ನಟ. ದಳಪತಿ ವಿಜಯ್, ಸೂರ್ಯ, ಅಜಿತ್, ಆರ್ಯ, ನಯನ ತಾರಾ, ಸೇರಿದಂತೆ ಕಾಲಿವುಡ್ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Tamil actor Yogi Babu came to Bengaluru and visited Puneeth Rajkumar Samadhi to pay condolences. Photos of Yogi Babu's visit to Puneeth samadhi goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X