ದಳಪತಿ ವಿಜಯ್ 68ನೇ ಸಿನಿಮಾಗೆ ವೆಂಕಟ್ ಪ್ರಭು ಆಕ್ಷನ್ ಕಟ್: "ಸುದೀಪ್ ಮನೆಗೆ ಬಂದೋಗಿದ್ದೇಕೆ?" ನೆಟ್ಟಿಗರ ಪ್ರಶ್ನೆ

ವೆಂಕಟ್ ಪ್ರಭು ತಮಿಳಿನ ಸ್ಟಾರ್ ನಿರ್ದೇಶಕ. ಕಳೆದ ವರ್ಷವಷ್ಟೇ ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟಿದ್ದರು. ಸುದೀಪ್ ಕೂಡ ನೆಚ್ಚಿನ ನಿರ್ದೇಶಕನಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದರು. ಆ ವೇಳೆ ಕಿಚ್ಚನ ಕೈ ರುಚಿ ಕಂಡು ತಮಿಳು ನಿರ್ದೇಶಕ ಫಿದಾ ಆಗಿದ್ದರು.

ಇಲ್ಲಿಂದ ಕಿಚ್ಚ ಸುದೀಪ್ ಹಾಗೂ ವೆಂಕಟ್ ಪ್ರಭು ಕಾಂಬಿನೇಷನ್‌ ಬಗ್ಗೆ ಚರ್ಚೆ ಆರಂಭ ಆಗಿತ್ತು. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುತ್ತಾರೆ ಅಂತ ಜೋರಾಗಿಯೇ ಸುದ್ದಿ ಹಬ್ಬಿತ್ತು. ಕಿಚ್ಚ ಸುದೀಪ್ ಆಪ್ತ ಮೂಲಗಳು ಕೂಡ ಮಾತುಕತೆ ನಡೆಯುತ್ತಿರೋ ಬಗ್ಗೆ ಸುಳಿವು ನೀಡಿದ್ದರು.

Tamil director Venkat Prabhu announced 68th movie with Thalapathy Vijay what about sudeep?

ಸೀನ್ ಕಟ್ ಮಾಡಿದ್ರೆ, ವೆಂಕಟ್ ಪ್ರಭು ತಮಿಳಿನ ದಳಪತಿ ವಿಜಯ್‌ಗೆ ಆಕ್ಷನ್ ಕಟ್ ಹೇಳುವುದಾಗಿ ಅನೌನ್ಸ್ ಮಾಡಿದ್ದಾರೆ. ವಿಜಯ್ ನಟಿಸುತ್ತಿರುವ 68ನೇ ಸಿನಿಮಾಗೆ ಆಕ್ಷನ್ ಕಟ್ ಹೇಳಲು ವೆಂಕಟ್ ಪ್ರಭು ಸಜ್ಜಾಗಿದ್ದಾರೆ. ಈ ಪ್ರಾಜೆಕ್ಟ್ ಅನೌನ್ಸ್ ಆಗುತ್ತಿದ್ದಂತೆ ಕಿಚ್ಚನ ಸಿನಿಮಾ ಕಥೆಯೇನು? ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕಿಚ್ಚನಿಗೆ ಆಕ್ಷನ್ ಕಟ್ ಹೇಳಲ್ವಾ ವೆಂಕಟ್ ಪ್ರಭು

'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಆದರೆ, ಮೂರು ಕಥೆಗಳನ್ನು ಫೈನಲ್ ಮಾಡಿದ್ದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಚುನಾವಣೆ ಕೆಲಸಗಳು ಮುಗಿಯುತ್ತಿದ್ದಂತೆ ಅನೌನ್ಸ್ ಮಾಡುವುದಾಗಿಯೂ ಹೇಳಿದ್ದರು. ಆಗ ಚಾಲ್ತಿಯಲ್ಲಿದ್ದ ಮೊದಲ ಹೆಸರೇ ವೆಂಕಟ್ ಪ್ರಭು. ತಮಿಳು ನಿರ್ದೇಶಕ ವೆಂಕಟ್ ಪ್ರಭುಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರದಲ್ಲಿಯೇ ಸಿನಿಮಾ ಶುರುವಾಗಲಿದೆ ಎನ್ನಲಾಗಿತ್ತು.

ಆದ್ರೀಗ, ದಳಪತಿ ವಿಜಯ್ 68ನೇ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ವೆಂಕಟ್ ಪ್ರಭು ಅನೌನ್ಸ್ ಮಾಡಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಹಾಗೂ ವೆಂಕಟ್ ಪ್ರಭು ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರುವುದು ಸದ್ಯಕ್ಕೆ ಅನುಮಾನ. ಹೀಗಾಗಿ ಕಿಚ್ಚ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ.

Tamil director Venkat Prabhu announced 68th movie with Thalapathy Vijay what about sudeep?

ಕಿಚ್ಚನಿಗೆ ಆಕ್ಷನ್ ಕಟ್ ಹೇಳೋರು ಯಾರು?

ಕಿಚ್ಚನೇ ಹೇಳಿದ ಹಾಗೇ ಮೂರು ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಲ್ಲಿ ವೆಂಕಟ್ ಪ್ರಭು ಸರದಿ ಎಷ್ಟನೆಯದ್ದು ಅನ್ನೋದು ಗೊತ್ತಿಲ್ಲ. ಆದರೆ, ಇದೇ ನಿರ್ದೇಶಕನ ಜೊತೆ ಮತ್ತೊಬ್ಬ ತಮಿಳು ನಿರ್ದೇಶಕನ ಹೆಸರು ಕೂಡ ಓಡಾಡುತ್ತಿತ್ತು. ತಮಿಳಿನ 'ಆಟೋಗ್ರಾಫ್' ಖ್ಯಾತಿಯ ಚೇರನ್.

ಚೇರನ್ ನಿರ್ದೇಶಿಸಿದ ನಟಿಸಿದ್ದ 'ಆಟೋಗ್ರಾಫ್' ಸಿನಿಮಾವನ್ನೇ ಕಿಚ್ಚ ಕನ್ನಡದಲ್ಲಿ 'ಮೈ ಆಟೋಗ್ರಾಫ್' ಅಂತ ರಿಮೇಕ್ ಮಾಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ತಮಿಳು ನಿರ್ದೇಶಕ ಚೇರನ್ ಹೆಸರು ಕೂಡ ಕೇಳಿ ಬರುತ್ತಿದ್ದು, ಶೀಘ್ರದಲ್ಲಿಯೇ ಅನೌನ್ಸ್ ಮಾಡಬಹುದು ಎನ್ನಲಾಗುತ್ತಿದೆ.

ಬಿಗ್ ಕಾಂಬಿನೇಷನ್

ವೆಂಕಟ್ ಪ್ರಭು ಹಾಗೂ ದಳಪತಿ ವಿಜಯ್ ಇಬ್ಬರದ್ದೂ ಬಿಗ್ ಕಾಂಬಿನೇಷನ್. ಹೀಗಾಗಿ ತಮಿಳು ನಾಡಿನಲ್ಲಿ ಈ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಆದರೆ, ವೆಂಕಟ್ ಪ್ರಭು ಯಾವಾಗ ಈ ಸಿನಿಮಾವನ್ನು ಆರಂಭ ಮಾಡುತ್ತಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಆದರೆ, ಸದ್ಯಕ್ಕೆ ಉಳಿದ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

ಇತ್ತ ಕಿಚ್ಚ ಸುದೀಪ್ ಇನ್ನೂ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ವೆಂಕಟ್ ಪ್ರಭು ಬಳಿಕ ಯಾರೊಂದಿಗೆ ಸಿನಿಮಾ ಮಾಡುತ್ತಾರೆ ಅನ್ನೋದೇ ಅಭಿಮಾನಿಗಳನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ, ಜೂನ್‌ನಲ್ಲಿ ಸುದೀಪ್ ಸಿನಿಮಾ ಅನೌನ್ಸ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

More from Filmibeat

English summary
Tamil director Venkat Prabhu announced 68th movie with Thalapathy Vijay what about sudeep?, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X