»   » ಅಲ್ಲಿ ರಿಲೀಸಾಗದ ತಮಿಳು ಚಿತ್ರಕ್ಕೆ ಇಲ್ಲಿ ಭಾರೀ ಡಿಮಾಂಡ್

ಅಲ್ಲಿ ರಿಲೀಸಾಗದ ತಮಿಳು ಚಿತ್ರಕ್ಕೆ ಇಲ್ಲಿ ಭಾರೀ ಡಿಮಾಂಡ್

Posted By:
Subscribe to Filmibeat Kannada

ಶಾರೂಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಬೆಂಗಳೂರು ಬಾಕ್ಸಾಫೀಸ್ ಕೊಳ್ಳೆ ಹೊಡೆದ ನಂತರದ ಸರದಿ ಈಗ ತಮಿಳು ಚಿತ್ರಕ್ಕೆ. ವಿಜಯ್ ಅಭಿನಯದ ತಲೈವಾ ಚಿತ್ರ ಬೆಂಗಳೂರು ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿದೆ.

ವಿವಿಧ ಕಾರಣಗಳಿಂದ ಚೆನ್ನೈನಲ್ಲಿ ಈ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗದ ಕಾರಣ ವಿಜಯ್ ಅಭಿಮಾನಿಗಳು ಹೊಸೂರು ಮತ್ತು ಬೆಂಗಳೂರಿನ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸುತ್ತಿದ್ದಾರೆ.

ನಗರದ 33 ಚಿತ್ರಮಂದಿರಗಳಲ್ಲಿ ತಲೈವಾ ಚಿತ್ರ ಬಿಡುಗಡೆಯಾಗಿದೆ. ಎಲ್ಲಾ ಚಿತ್ರಮಂದಿರಗಳು ಕಳೆದ ವಾರಾಂತ್ಯದಲ್ಲಿ ತುಂಬಿದ ಪ್ರದರ್ಶನ ಕಂಡಿದೆ. ಕನ್ನಡಿಗರೂ ಚಿತ್ರ ವೀಕ್ಷಿಸುತ್ತಿರುವುದು ಚಿತ್ರದ ಬಾಕ್ಸಾ ಫೀಸ್ ಗಳಿಕೆಗೆ ಸಿಗುತ್ತಿರುವ ಮತ್ತೊಂದು ಪ್ಲಸ್ ಪಾಯಿಂಟ್.

ಬೆಂಗಳೂರಿನಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಏನಂತಾರೆ? ಸ್ಲೈಡಿನಲ್ಲಿ..

ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ

ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ, ಇಲ್ಲಿನ ಜನರಿಗೆ ಭಾಷೆಯ ಭೇದಭಾವವಿಲ್ಲ. ಕನ್ನಡ ಮಾತನಾಡುವವರ ಜೊತೆ ತಮಿಳು ಚಿತ್ರ ನೋಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ ಚೆನ್ನೈನ ಹಸ್ತಿನಾಪುರಂನಿಂದ ಬಂದ ವಿಜಯ್ ಅಭಿಮಾನಿ ಶಂಕರ್.

ಕನ್ನಡಿಗರೂ ನೋಡಿದ ಚಿತ್ರ

ಕನ್ನಡಿಗರೂ ತಲೈವಾ ಚಿತ್ರ ವೀಕ್ಷಿಸುತ್ತಿದ್ದಾರೆ. ಸಂಪಿಗೆ ಚಿತ್ರಮಂದಿರದಲ್ಲಿ ಶ್ರೀನಿವಾಸ್ ಎನ್ನುವವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, ನಾನೊಬ್ಬ ಕನ್ನಡಿಗ. ಟೋನಿ ಚಿತ್ರವನ್ನು ಈಗಾಗಲೇ ನೋಡಿದ್ದೇನೆ. ತಮಿಳು ನಟ ವಿಜಯ್ ಅವರ ಡ್ಯಾನ್ಸ್ ಅಂದರೆ ನನಗೆ ತುಂಬಾ ಇಷ್ಟ.

ಮಲ್ಟಿ ಪ್ಲೆಕ್ಸ್ ಗಳಲ್ಲಿ ಡಿಮಾಂಡ್

ಚೆನ್ನೈ ಎಕ್ಸ್ ಪ್ರೆಸ್ ನಂತರ ಈ ಚಿತ್ರಕ್ಕೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರಾಂತ್ಯದಲ್ಲಿ ಮಲ್ಟಿ ಪ್ಲೆಕ್ಸ್ ಗಳಲ್ಲಿ ಪ್ರದರ್ಶನದ ಸಂಖ್ಯೆಯನ್ನೂ ಹೆಚ್ಚಿಸಿದ ಬಗ್ಗೆಯೂ ವರದಿಯಾಗಿದೆ.

ಅದಿತಿ ಬೃಂದಾ

ತಲೈವಾ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ.ವಿಜಯ್, ಅಮಲಾ ಪಾಲ್, ಸತ್ಯರಾಜ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಕರ್ನಾಟಕ ರೈಟ್ಸ್ ಅನ್ನು ಅದಿತಿ ಬೃಂದಾ ಸಂಸ್ಥೆಯ ಬೂಪಾಲ್ ರೆಡ್ಡಿ ಪಡೆದುಕೊಂಡಿದ್ದಾರೆ.

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಚೆನ್ನೈ ಎಕ್ಸ್ ಪ್ರೆಸ್ ನಂತೆ ಈ ಚಿತ್ರಕ್ಕೂ ಮಾಧ್ಯಮಗಳಿಂದ ಮತ್ತು ಪತ್ರಿಕೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಇದು ಚಿತ್ರದ ನಾಗಾಲೋಟಕ್ಕೆ ಅಡ್ಡಿಯಾಗಿಲ್ಲ.

English summary
Tamil movie Thalaivaa did not release in Tamil Nadu for some reasons. But it hit the screens in other states including Karnataka and other parts of the world without any hurdle. The Kollywood movie has got a wonderful start at Box Office in Bangalore region.
Please Wait while comments are loading...