twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರ ಸಿನಿಮಾ ನೋಡೋದೇ ಇಲ್ಲ ಎಂದ ತಮಿಳಿಗ, ಅವರ ಮುಂದಿನ ಸಿನಿಮಾಗೆ ಏನ್ ಮಾಡಿದ ಗೊತ್ತಾ!

    |

    ಭಾರತೀಯ ಚಿತ್ರೋದ್ಯಮ ಕಂಡ ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಬಗ್ಗೆ ಮತ್ತು ಅವರ ಸಿನಿಮಾದ ಬಗೆಗಿನ ಕುತೂಹಲಕಾರಿ ವಿಷಯಗಳು ಬರೆದಷ್ಟು, ಬಗೆದಷ್ಟು, ಬುಗ್ಗೆ ಹೊರಚಿಮ್ಮುತ್ತಲ್ಲೇ ಇರುತ್ತದೆ.

    Recommended Video

    ಬಿಡುಗಡೆಗೆ ಸಿದ್ಧವಾಗಿದೆ ಸ್ಟಾರ್ ನಟರ ಸಿನಿಮಾಗಳು | Darshan | Puneeth RajKumar | FILMIBEAT KANNADA

    ಡಾ.ರಾಜ್ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಪಾತ್ರವನ್ನು ಮಾಡಿಲ್ಲ ಎಂದಿಲ್ಲ. ಎಲ್ಲಾ ಪಾತ್ರಗಳಲ್ಲೂ ತಮ್ಮ ಕಲಾಪ್ರೌಢಿಮೆ ತೋರಿಸಿರುವ ರಾಜ್, 198ನೇ ಸಿನಿಮಾಗೆ ಸಂಬಂಧ ಪಟ್ಟ ಕಥೆಯಿದು.

    ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರುರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು

    ಹಾಸ್ಯ ಪ್ರಧಾನವಾದ 'ಭಾಗ್ಯದ ಲಕ್ಷ್ಮೀ ಬಾರಮ್ಮ' ಸಿನಿಮಾ 1986ರಲ್ಲಿ ತೆರೆಕಂಡಿದ್ದು ಮತ್ತು ಸಿಂಗೀತಂ ಶ್ರೀನಿವಾಸ ರಾವ್ ಈ ಚಿತ್ರದ ನಿರ್ದೇಶಕರು. ರಾಜ್ , ಮಾಧವಿ, ಕೆ.ಎಸ್.ಅಶ್ವಥ್ ಪ್ರಧಾನ ಭೂಮಿಕೆಯಲ್ಲಿದ್ದ ಈ ಸಿನಿಮಾ, ರಾಜ್ ಸಿನಿಮಾ ಜರ್ನಿಯ ಬಹುದೊಡ್ಡ ಹಿಟ್ ಸಿನಿಮಾಗಳಲ್ಲೊಂದು.

    ಸಿನಿಮಾಕ್ಕೆ 'ಓಂ' ಎಂದು ಹೆಸರಿಟ್ಟಿದ್ದರ ಹಿಂದಿದೆ ಸ್ವಾರಸ್ಯಕರ ಕತೆಸಿನಿಮಾಕ್ಕೆ 'ಓಂ' ಎಂದು ಹೆಸರಿಟ್ಟಿದ್ದರ ಹಿಂದಿದೆ ಸ್ವಾರಸ್ಯಕರ ಕತೆ

    ಅಣ್ಣಾವ್ರ ಸಿನಿಮಾವನ್ನು ನೋಡೋದೇ ಇಲ್ಲ ಎಂದು ಶಪಥ ಮಾಡಿದ್ದ ತಮಿಳಿಗನೊಬ್ಬ, ಗೆಳೆಯರ ಜೊತೆ ಈ ಸಿನಿಮಾವನ್ನು ನೋಡಿ, ತನ್ನ ನಿಲುವನ್ನೇ ಬದಲಾಯಿಸಿದ್ದನಂತೆ. ಆ ಸ್ವಾರಸ್ಯಕರ ಪ್ರಸಂಗ ಹೀಗಿದೆ:

    ಹಾಸ್ಯ ಪ್ರಾಧಾನ್ಯತೆಯ ಸಿನಿಮಾ ಭಾಗ್ಯದ ಲಕ್ಷ್ಮೀ ಬಾರಮ್ಮ

    ಹಾಸ್ಯ ಪ್ರಾಧಾನ್ಯತೆಯ ಸಿನಿಮಾ ಭಾಗ್ಯದ ಲಕ್ಷ್ಮೀ ಬಾರಮ್ಮ

    ದುಡ್ಡಿನ ಬೆನ್ನೇರಿ ಹೋಗುವ ನಾಯಕ-ನಾಯಕಿ ನಂತರ ದಂಪತಿಗಳಾಗುವ, ಹಾಸ್ಯ ಪ್ರಾಧಾನ್ಯತೆಯ ಸಿನಿಮಾ ಭಾಗ್ಯದ ಲಕ್ಷ್ಮೀ ಬಾರಮ್ಮ. ದಾಕ್ಷಾಯಿಣಿ ಕಂಬೈನ್ಸ್ ಬ್ಯಾನರ್ ನಲ್ಲಿ ಮೂಡಿಬಂದ ಈ ಸಿನಿಮಾ ಭಾರೀ ಯಶಸ್ಸನ್ನು ಪಡೆದಿತ್ತು. 'ಯಾವ ಕವಿಯು ಬರೆಯಲಾರ, ಒಲವಿನಿಂದ, ಕಣ್ಣೋಟದಿಂದ' ಗಝಲ್ ಮಾದರಿಯ ಈ ಹಾಡು, ಈಗಲೂ ಎಲ್ಲರ ಮನೆಯಲ್ಲಿ ಗುನುಗುವಂತದ್ದು.

    ಅಣ್ಣಾವ್ರ ಸಿನಿಮಾ

    ಅಣ್ಣಾವ್ರ ಸಿನಿಮಾ

    ಈ ಸಿನಿಮಾ ಬಿಡುಗಡೆಯಾದ ಹದಿನಾರು ವಾರದ ನಂತರ, ನಡೆದ ಒಂದು ಘಟನೆಯನ್ನು ಆರ್.ಜಗದೀಶ್ ಎನ್ನುವವರು ಚಿತ್ರತಾರಾದಲ್ಲಿ ಸ್ಮರಿಸಿಕೊಂಡಿದ್ದರು. ಹೊಸ ಸಿನಿಮಾ ನೋಡಲು ತಮ್ಮ ಗೆಳೆಯರ ಜೊತೆ ಹೋಗಿದ್ದ ಇವರ ಗುಂಪಿನಲ್ಲಿ ತಮಿಳಿಗನೊಬ್ಬ ಇದ್ದ. ಆದರೆ, ಅವನಿಗೆ ಅಣ್ಣಾವ್ರ ಸಿನಿಮಾ ಅಂದರೆ ಆಗೋದಿಲ್ಲ.

    ಬಿಡುಗಡೆಯಾದ ಹೊಸ ಸಿನಿಮಾ

    ಬಿಡುಗಡೆಯಾದ ಹೊಸ ಸಿನಿಮಾ

    ಬಿಡುಗಡೆಯಾದ ಹೊಸ ಸಿನಿಮಾಕ್ಕೆ ಟಿಕೆಟ್ ಸಿಗದೇ ಇದ್ದಿದ್ದರಿಂದ, ಆಗಲೇ ಮೂರು ಬಾರಿ ನೋಡಿದ್ದ ಭಾಗ್ಯದ ಲಕ್ಷ್ಮೀ ಬಾರಮ್ಮ ಸಿನಿಮಾ ನೋಡಲು ಈ ಗುಂಪಿನ ಜೊತೆ, ಆ ತಮಿಳು ಭಾಷಿಗನೂ ಹೋಗಿದ್ದ. ಆ ಸಿನಿಮಾದಲ್ಲಿ ರಾಜ್ ಅವರ ಅಭಿನಯವನ್ನು ತದೇಕಚಿತ್ತದಿಂದ ನೋಡುತ್ತಿದ್ದ ಆ ತಮಿಳು ಭಾಷಿಗ ಒಂದು ನಿರ್ಧಾರಕ್ಕೆ ಬಂದನಂತೆ.

     ಸೂಪರ್ ಹಿಟ್ ಸಿನಿಮಾ ಅನುರಾಗ ಅರಳಿತು

    ಸೂಪರ್ ಹಿಟ್ ಸಿನಿಮಾ ಅನುರಾಗ ಅರಳಿತು

    ಅಣ್ಣಾವ್ರ ಮುಂದಿನ ಸಿನಿಮಾ ಬಿಡುಗಡೆ ಯಾವಾಗ ಎಂದು ಆ ತಮಿಳಿಗ ತನ್ನ ಸ್ನೇಹಿತರಲ್ಲಿ ಕೇಳಿದನಂತೆ. ಇನ್ನೊಂದು ವಾರದಲ್ಲಿ ಇದೆ ಎಂದು ಅವರ ಗೆಳೆಯರಿಂದ ಉತ್ತರ ಬಂತು. ಭಾಗ್ಯದ ಲಕ್ಷ್ಮೀ ಬಾರಮ್ಮ ಇನ್ನೂ ಚಿತ್ರಮಂದಿರದಲ್ಲಿ ಓಡುತ್ತಿದ್ದಾಗಲೇ, ಅವರ ಇನ್ನೊಂದು ಸೂಪರ್ ಹಿಟ್ ಸಿನಿಮಾ 'ಅನುರಾಗ ಅರಳಿತು' ತೆರೆಕಂಡಿತು. ಆ ಸಿನಿಮಾದ, ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಅನ್ನು ಪಡೆದ ತಮಿಳಿಗ, ಆ ಸಿನಿಮಾವನ್ನು ನೋಡಿದನಂತೆ, ರಾಜ್ ಅಭಿಮಾನಿಯಾದನಂತೆ. ಇದು ರಾಜ್ ಚಿತ್ರಕ್ಕಿರುವ ತಾಕತ್, ಅಲ್ಲದೇ ಇನ್ನೇನು.

    English summary
    A Tamil Person Becomes Huge Fan Of Dr.Rajkumar After Seeing His Super Hit Movie.
    Sunday, May 24, 2020, 8:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X