'ಮಜಾ ಟಾಕೀಸ್‌' ತೊರೆದಿದ್ದಕ್ಕೆ ಕೊನೆಗೂ ಕಾರಣ ಕೊಟ್ಟ ತರಂಗ ವಿಶ್ವ; ಸೃಜನ್ ಲೋಕೇಶ್ ಜೊತೆ ಮನಸ್ತಾಪ ಆಗಿದ್ದು ನಿಜನಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಟಾಕ್ ಶೋ 'ಮಜಾ ಟಾಕೀಸ್' ಇತ್ತೀಚೆಗಷ್ಟೇ ಮುಗಿದಿದೆ. ಅಂದುಕೊಂಡಿದ್ದಕ್ಕಿಂತ ಬೇಗನೇ ಈ ಶೋ ಅಂತ್ಯ ಕಂಡಿದೆ. ಆದರೆ, ಅದಕ್ಕೂ ಮುನ್ನವೇ ಈ ಶೋನಲ್ಲಿ ಮುತ್ತುಮಣಿಯಾಗಿ ನಟಿಸುತ್ತಿದ್ದ ತರಂಗ ವಿಶ್ವ ಹೊರ ಬಂದಿದ್ದರು. ಇನ್ಮುಂದೆ ಮುತ್ತುಮಣಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಸುಧೀರ್ಘವಾಗಿ ಬರೆದು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆಗ ಕಿರುತೆರೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ 'ಮಜಾ ಟಾಕೀಸ್‌'ನ ಸೃಜನ್ ಲೋಕೇಶ್ ಹಾಗೂ ತರಂಗ ವಿಶ್ವ ಮಧ್ಯೆ ಏನೋ ನಡೆದಿದೆ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳಿಂದಲೇ ಈ ಶೋಯಿಂದ ತರಂಗ ವಿಶ್ವ ಹೊರ ಬಂದಿದ್ದಾರೆಂಬ ಸುದ್ದಿ ಹಬ್ಬಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ತರಂಗ ವಿಶ್ವ ಫಿಲ್ಲಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಜಾ ಟಾಕೀಸ್‌ನಿಂದ ಹೊರ ಬಂದಿದ್ದು ಯಾಕೆ? ಎಂದು ರಿವೀಲ್ ಮಾಡಿದ್ದಾರೆ.

Taranga Vishwa finally opens up about his exit from the Srujan Lokesh Maja Talkies show

ಮುಂದೆ ಓದಿ.

ಮಜಾ ಟಾಕೀಸ್ 200 ಎಪಿಸೋಡ್ ದಾಟಿದಾಗ ಮುತ್ತುಮಣಿ ಪಾತ್ರ ಪರಿಚಯ
ಸೃಜನ್ ಹಾಗೂ ಚಾನೆಲ್‌ ಮಧ್ಯೆ ಏನು ಮಾತುಕತೆ ಆಗಿದೆ ನನಗೆ ಗೊತ್ತಿಲ್ಲ
ಇದು ಗಿಚ್ಚಿಗಿಲಿಗಿಲಿನಾ? ಮಜಾ ಟಾಕೀಸ್‌? ಅನ್ನೋ ಗೊಂದಲ ಎದ್ದಿತ್ತು
ಈ ಸೀಸನ್‌ ನನಗೆ ಸಿಕ್ಕಾಪಟ್ಟೆ ನೆಗೆಟಿವ್ ಆಯ್ತು

ಮಜಾ ಟಾಕೀಸ್‌ನಿಂದ ಮುತ್ತು ಮಣಿ ಅಲಿಯಾಸ್ ತರಂಗ ವಿಶ್ವ ಹೊರಬಂದಿದ್ದರೂ, ಆ ಶೋ ಮೇಲೆ ಅಪಾರ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಮಜಾ ಟಾಕೀಸ್ ಎಂಟ್ರಿ ಕೊಟ್ಟಿದ್ದು ಹೇಗೆ? ಮುತ್ತುಮಣಿ ಪಾತ್ರ ಹುಟ್ಟಿಕೊಂಡಿದ್ದೇಗೆ? ಅನ್ನೋದನ್ನು ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಮಜಾ ಟಾಕೀಸ್‌ನಲ್ಲಿ ವಿಶೇಷವಾದ ಸ್ಥಾನ ಗೌರವ ಸಿಕ್ಕಿತು. ಮೊದಲಿನಿಂದ ಬಂದಿದ್ದ ಮಜಾ ಟಾಕೀಸ್ ಅತ್ಯದ್ಭುತ. ಇದು ಒಬ್ಬನಿಂದ ಅಲ್ಲ. ಎಲ್ಲರೂ ಸೇರಿ ಮಜಾ ಟಾಕೀಸ್ ಆಗಿದ್ದು. ಅಪರ್ಣ ಮೇಡಂ, ಸೃಜನ್ ಲೋಕೇಶ್, ಮಂಡ್ಯ ರಮೇಶ್, ಕುರಿ ಪ್ರತಾಪ್, ಶ್ವೇತ ಚಂಗಪ್ಪ, ದಯಣ್ಣ, ಮನೋಹರಣ್ಣ, ಪವನ್, ನವೀನ್ ಡಿ ಪಡಿಲ್ ಮತ್ತು ಇವರೊಂದಿಗೆ ನಾನು ಎಲ್ಲಾ ಸೇರಿ ಒಂದೊಂದು ಪ್ಲೇವರ್ ಬಂತು. ಫ್ಯಾಮಿಲಿ ಮಂದಿ ಟಿವಿ ಹಾಕಿ ನೋಡಿದಾಗ ಮಜ ತಂದು ಕೊಡ್ತು. ವಿಶೇಷವಾಗಿ ನನ್ನ ಪಾತ್ರ 'ತ' ಅಕ್ಷರ ಬಳಸಿಕೊಂಡು ಮಾಡಿದರೆ ಹೇಗಿರುತ್ತೆ ಅಂತ ಮಾಡಿದ್ದು ಅದ್ಭುತ. ಆ ಯಶಸ್ಸನ್ನು ನಾವು ಎಂಜಾಯ್ ಮಾಡಿದ್ದೇವೆ." ಎಂದಿದ್ದಾರೆ.

Taranga Vishwa finally opens up about his exit from the Srujan Lokesh Maja Talkies show

ಮನೆಕಟ್ಟಲು ಬಂದಿದ್ದ ತಮಿಳರಿಂದ ಮುತ್ತುಮಣಿ ಶೈಲಿಯ ಪಾತ್ರ ಹುಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ. "ನಮ್ಮ ಮನೆಯ ಹತ್ತಿರ ಮನೆ ಕಟ್ಟುವ ತಮಿಳಿನವರು ಜಾಸ್ತಿಯಿದ್ದರು. ಅವರು ಮಾತಾಡುವ ಶೈಲಿಯನ್ನು ನೋಡುತ್ತಿದ್ದೇವು. ಚಿಮೆಂಟು ಕಲಿಸು, ಇಟ್ಟಿಗೆ ತಗೊಂಡು ಬಾರೋ ಅಂತ ಹೇಳಿದ್ದರು. ಇದೊಂತರ ಚೆನ್ನಾಗಿ ಇದೆಯಲ್ಲ ಅಂತ ಪ್ರಾಕ್ಟಿಸ್ ಮಾಡುವುದಕ್ಕೆ ಶುರು ಮಾಡಿದೆ. ಕುಬೇರಪ್ಪ ಅಂಡ್ ಸನ್ಸ್ ಸೀರಿಯಲ್ ಮಾಡುತ್ತಿದ್ದೆ. ಅಲ್ಲಿ ನಾನು ಕ್ಯಾಮರಾಮ್ಯಾನ್ ಕನೆಕ್ಟ್ ಆಗ್ಬಿಟ್ವಿ. ಆ ಸೀರಿಯಲ್ ಮುಗಿಯುವವರೆಗೂ ತಮಿಳು ಕನ್ನಡ ಭಾಷೆಯಲ್ಲಿಯೇ ಮಾತಾಡುತ್ತಿದ್ವಿ. ಒಮ್ಮೆ ಮಜಾ ಟಾಕೀಸ್ 200 ಎಪಿಸೋಡ್ ಆಗಿತ್ತು. ಆ ಫಂಕ್ಷನ್ ಮುಗಿದ ಮೇಲೆ ಹೊಸ ಕ್ಯಾರೆಕ್ಟರ್ ತರಬೇಕು ಎನ್ನುವ ಆಲೋಚನೆಯಲ್ಲಿ ಇದ್ದರು. ಆಗ ಸೃಜನ್ ಇಂತಹದ್ದು ಕ್ಯಾರೆಕ್ಟರ್ ಮಾಡಬೇಕು ಅಂದರು. ಒಮ್ಮೆ ದರ್ಶನ್ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಎಲ್ಲರೂ ಸೇರಿದ್ವಿ. ಆಗ ಮತ್ತೆ ಮಾತುಕತೆ ನಡೀತು. " ಎನ್ನುತ್ತಾರೆ.

ಇಷ್ಟೆಲ್ಲ ಹೆಸರು ತಂದುಕೊಟ್ಟ ಮಜಾ ಟಾಕೀಸ್ ದಿಢೀರನೇ ಬಿಟ್ಟಿದ್ದೇಕೆ? ಇನ್ಮುಂದೆ ಮುತ್ತುಮಣಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದೇಕೆ? ಎನ್ನುವುದನ್ನು ಇದೇ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಸೃಜನ್ ಹಾಗೂ ಚಾನೆಲ್‌ ಅವರ ನಡುವೆ ಏನು ಮಾತುಕತೆ ಆಗಿದೆ ನನಗೆ ಗೊತ್ತಿಲ್ಲ. ಅವರೆಲ್ಲರೂ ಇದ್ದರೆ ಮಜಾ ಟಾಕೀಸ್ ಅಂತ ಹೇಳಿದೆ. ಈಗ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿಯವರೂ ಇದ್ದಾರೆ. ಅವರೆಲ್ಲರೂ ಅದ್ಭುತವಾದ ಕಲಾವಿದರು. ಆದರೆ, ಇದಕ್ಕೆ ಅವರೆಲ್ಲರೂ ಹೊಂದಾಣಿಕೆಯಾಗುತ್ತಾರಾ? ಅದನ್ನು ನೋಡಬೇಕು. ಯಾಕಂದ್ರೆ ಇದನ್ನ ಗಿಚ್ಚಿ ಗಿಲಿಗಿಯಾಗಿ ತೆಗೆದುಕೊಳ್ಳಬೇಕಾ? ಇಲ್ಲಾ ಮಜಾ ಟಾಕೀಸ್ ಆಗಿ ತೆಗೆದುಕೊಳ್ಳಬೇಕಾ? ಎನ್ನುವ ಗೊಂದಲ ಜನರಲ್ಲಿ ಮೂಡುತ್ತೆ. ಜನರು ಕೇಳಿದ ಪ್ರಶ್ನೆನೂ ಅದೇನೆ. ನನ್ನಲ್ಲಿ ಹುಟ್ಟಿಕೊಂಡ ಪ್ರಶ್ನೆನೂ ಅದೇನೆ ಆಗಿತ್ತು." ಎಂದು ತರಂಗ ವಿಶ್ವ ಹೇಳುತ್ತಾರೆ.

ಹಾಗೇ ಮಜಾ ಟಾಕೀಸ್‌ನಲ್ಲಿ ಡಬಲ್ ಮೀನಿಂಗ್ ಹೆಚ್ಚಿತ್ತು. ಇದರಿಂದ ನನಗೆ ತುಂಬಾನೇ ನೆಗೆಟಿವ್ ಆಯ್ತು. ಹೀಗಾಗಿ ಮಜಾ ಟಾಕೀಸ್‌ನಿಂದ ಹೊರ ಬಂದಿದ್ದಾಗಿ ತಿಳಿಸಿದ್ದಾರೆ. "ನನಗೆ ಹೊರಗಡೆಯಿಂದ ಡಬಲ್ ಮೀನಿಂಗ್ ಎನ್ನುವ ರಿಪೋರ್ಟ್ ಬರುತ್ತಿತ್ತು. ನಾನೇ ಮಾಡುವುದಕ್ಕೆ ಸಾಧ್ಯ ನಾನೊಬ್ಬ ಪಾತ್ರಧಾರಿ. ಈ ಬಾರಿ ನನಗೆ ಮಜಾ ಟಾಕೀಸ್‌ನ ಪ್ರಕಾರ ಇಲ್ಲ ಅಂತ ನನಗೆ ಅನಿಸಿತು. ಅದು ನನಗೆ ಸಿಕ್ಕಾಪಟ್ಟೆ ನೆಗೆಟಿವ್ ಆಯ್ತು. ಒಂದು ದುಡ್ಡಿನಲ್ಲಿ ಖುಷಿಯಾಗಿರಬೇಕು. ಇನ್ನೊಂದು ಕೆಲಸದಲ್ಲಿ ಖುಷಿಯಾಗಿರಬೇಕು. ನನಗೆ ಎರಡರಲ್ಲೂ ಮಿಸ್ ಹೊಡೆಯುತ್ತಿತ್ತು. ಈ ಬಾರಿ ಮಾತ್ರ. ಎಲ್ಲೋ ಒಂದು ಕಡೆ ಅಂತರವಿದೆ ಅಂತ ಅನಿಸಿತು. ಯಾರಿಗೂ ನೋವಾಗದ ರೀತಿಯಲ್ಲಿ, ಇಷ್ಟು ವರ್ಷ ಮಜಾ ಟಾಕೀಸ್ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಆ ಒಳ್ಳೆಯ ಹೆಸರು ಇಟ್ಟುಕೊಂಡು ಆಚೆ ಬಂದು ಬಿಡೋಣ ಅಂತ ಯೋಚನೆ ಮಾಡಿ, ಒಂದು ಪೋಸ್ಟ್ ಹಾಕಿದೆ. ಇನ್ಮುಂದೆ ಮುತ್ತುಮಣಿಯಾಗಿ ಕಾಣಿಸಿಕೊಳ್ಳಲ್ಲ ಅಂತ ಹೇಳಿದೆ." ಎನ್ನುತ್ತಾರೆ.

More from Filmibeat

English summary
Taranga Vishwa finally opens up about his exit from the Srujan Lokesh Maja Talkies show;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X