ರಕ್ಷಿತ್ ಶೆಟ್ಟಿ ಜನ್ಮದಿನಕ್ಕೆ 'ಚಾರ್ಲಿ' ನೀಡಲಿದೆ ವಿಶೇಷ ಉಡುಗೊರೆ

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಚಿತ್ರ. ಪ್ರಯಾಣ ಮತ್ತು ಶ್ವಾನದ ಜತೆಗಿನ ಒಡೆನಾಟದ ಕಥೆ ಯಾವ ರೀತಿ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ ಎನ್ನುವ ಕುತೂಹಲವಿದೆ. ಈ ನಡುವೆ ಚಾರ್ಲಿ ತಂಡ ಹೊಸ ಉಡುಗೊರೆಯೊಂದನ್ನು ನೀಡುತ್ತಿದೆ. ಈ ಉಡುಗೊರೆ ನೀಡುತ್ತಿರುವುದು ಜೂನ್ 6ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಾಯಕ ನಟ ರಕ್ಷಿತ್ ಶೆಟ್ಟಿ ಅವರಿಗೆ.

Recommended Video

ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಕಿರಣ್ ರಾಜ್ ಮತ್ತು ತಂಡ, ರಕ್ಷಿತ್ ಶೆಟ್ಟಿ ಜನ್ಮದಿನದಂದು ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಲಿದೆ. ಈ ವಿಡಿಯೋದಲ್ಲಿ ಚಿತ್ರದಲ್ಲಿನ ರಕ್ಷಿತ್ ಶೆಟ್ಟಿ ಅವರ ಪಾತ್ರ ರೂಪುಗೊಂಡ ಬಗೆ ಹಾಗೂ '777 ಚಾರ್ಲಿ' ಚಿತ್ರದ ಕೆಲವು ಸ್ವಾರಸ್ಯಕರ ತುಣುಕುಗಳು ಇರಲಿದೆಯಂತೆ.

ಲೈಫ್ ಆಫ್ ಧರ್ಮ

ಲೈಫ್ ಆಫ್ ಧರ್ಮ

ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ 'ಧರ್ಮ' ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಂದಿಗೆ ಪಯಣದಲ್ಲಿ ಜತೆಯಾಗಲಿರುವುದು ಆಕಸ್ಮಿಕವಾಗಿ ಮನೆಯಿಂದ ತಪ್ಪಿಸಿಕೊಂಡು ಬಂದ ಚಾರ್ಲಿ. ರಕ್ಷಿತ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಶನಿವಾರ ಬೆಳಿಗ್ಗೆ 11.04ಕ್ಕೆ ಚಾರ್ಲಿ ತಂಡ 'ಲೈಫ್ ಆಫ್ ಧರ್ಮ' ವಿಡಿಯೋ ಬಿಡುಗಡೆ ಮಾಡಲಿದೆ.

ಪ್ಯಾನ್ ಇಂಡಿಯಾ ಚಿತ್ರ

ಪ್ಯಾನ್ ಇಂಡಿಯಾ ಚಿತ್ರ

ಪುಷ್ಕರ್ ಫಿಲಂಸ್ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ಪರಮ್ವಾಹ್ ಬ್ಯಾನರ್ ಅಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಳಿಕ ಇದು ರಕ್ಷಿತ್ ಶೆಟ್ಟಿ ಅವರ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರವಾಗಿರಲಿದೆ.

ನಾಲ್ಕು ಭಾಷೆಗಳಿಗೆ ಡಬ್

ನಾಲ್ಕು ಭಾಷೆಗಳಿಗೆ ಡಬ್

ಕನ್ನಡದಲ್ಲಿ ತಯಾರಾಗಲಿರುವ 777 ಚಾರ್ಲಿ, ಬಳಿಕ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೂ ಡಬ್ ಅಗಿ ತೆರೆಕಾಣಲಿದೆ. ರಾಜ್ ಬಿ. ಶೆಟ್ಟಿ ಮತ್ತು ಸಂಗೀತಾ ಶೃಂಗೇರಿ ಕೂಡ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನೊಬಿನ್ ಪಾಲ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ನೀಡಿದ್ದಾರೆ.

ಕಾತರದಿಂದ ಕಾಯುತ್ತಿದ್ದೇನೆ

ಕಾತರದಿಂದ ಕಾಯುತ್ತಿದ್ದೇನೆ

ತಮ್ಮ ಜನ್ಮದಿನಕ್ಕೆ ವಿಶೇಷವೊಂದು ಸಿಗಲಿದೆ ಎನ್ನುವುದು ರಕ್ಷಿತ್ ಶೆಟ್ಟಿ ಅವರಿಗೂ ತಿಳಿದಿದೆ. 'ನನ್ನ ತಂಡ ಏನೋ ಮ್ಯಾಜಿಕಲ್ ಆಗಿರುವಂಥದ್ದನ್ನು ಸೃಷ್ಟಿಮಾಡಿದೆ ಎನ್ನುವುದು ನನಗೆ ಖಚಿತವಾಗಿ ಗೊತ್ತು. ಆದರೆ ಇದು ನನಗೂ ನಿಜಕ್ಕೂ ಸರ್ಪ್ರೈಸ್ ಆಗಿರಲಿದೆ. ಅದನ್ನು ನೋಡಲು ಕಾಯಲು ಕಷ್ಟವಾಗುತ್ತಿದೆ' ಎಂದು ಹೇಳಿದ್ದಾರೆ.

More from Filmibeat

English summary
Director Kiranraj and team of 777 Charlie movie to release a special video about Life Of Dharma on June 6 for Rakshit Shetty's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X