»   » ಆರ್ ಜಿ ವಿ ಚಿತ್ರದಲ್ಲಿ ನಟಿಯ ಬೆತ್ತಲೆ ಪ್ರದರ್ಶನ

ಆರ್ ಜಿ ವಿ ಚಿತ್ರದಲ್ಲಿ ನಟಿಯ ಬೆತ್ತಲೆ ಪ್ರದರ್ಶನ

Posted By:
Subscribe to Filmibeat Kannada

ನಟಿಯರು ಬಿಕನಿಯಲ್ಲಿ ಕಾಣಿಸಿಕೊಂಡಾಗ ಭಾರೀ ಸುದ್ದಿಯಾಗುತ್ತಿತ್ತು. ನಂತರ ಅರ್ಧಕುಂಭ ದರ್ಶನ ನೀಡಿದಾಗಲಂತೂ ಮತ್ತಷ್ಟು ಸುದ್ದಿಯಾಗುತ್ತಿತ್ತು. ಈಗ ನಟಿಯೊಬ್ಬಳು ಬೆತ್ತಲೆ ಪ್ರದರ್ಶನ ನೀಡಿದ ಸುದ್ದಿಯೊಂದು ಪಕ್ಕದ ತೆಲುಗು ಚಿತ್ರರಂಗದಿಂದ ಬಂದಿದೆ.

ರಾಮ್ ಗೋಪಾಲ್ ವರ್ಮಾ ಅದ್ಯಾಕೋ ದೆವ್ವ ಪಿಶಾಚಿಗಳ ಹಿಂದೆ ಹೋಗುವುದನ್ನು ಬಿಟ್ಟಿಲ್ಲ. ಈಗ ಮತ್ತೊಂದು ಹಾರರ್ ಚಿತ್ರ ಮಾಡಲು ವರ್ಮಾ ಹೊಂಟವ್ರೆ.

ಕನ್ನಡದಲ್ಲೂ ಚಿತ್ರ ಮಾಡುತ್ತಾರೆಂದು ಸುದ್ದಿಯಾಗಿದ್ದೇ ಯಾಗಿದ್ದು, ಅದು ಏನಾಯಿತೋ? ಈಗ ತೆಲುಗಿನಲ್ಲಿ 'ಐಸ್ ಕ್ರೀಮ್' ಎನ್ನುವ ಚಿತ್ರ ವರ್ಮಾ ಸಾರಥ್ಯದಲ್ಲಿ ಸೆಟ್ಟೇರಿದೆ, ಚಿತ್ರೀಕರಣವೂ ಮುಗಿಯುವ ಹಂತದಲ್ಲಿದೆ.

ಭೀಮಾವರಂ ಬ್ಯಾನರಿನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ರಾಮ್ ಸತ್ಯನಾರಾಯಣ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಾಯಕ ನವದೀಪ್.

ವಿಷಯ ಏನಪ್ಪಾಂದ್ರೆ, ಇದುವರೆಗೂ ಸಹನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತೇಜಸ್ವಿ ಮಡಿವಾಡ ಈ ಚಿತ್ರದ ನಾಯಕಿ. ವಿಷಯ ಅದೂ ಅಲ್ಲ ಈ ಚಿತ್ರದಲ್ಲಿ ಈಕೆ ಪೂರ್ಣ ಬೆತ್ತಲೆಯಾಗಿ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾಳೆ ಎನ್ನುವುದು.

ಈ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಿದರು? ಮುಂದೆ ಓದಿ...

ಸಹನಟಿಯಾಗಿ ನಟಿಸಿದ್ದ ತೇಜಸ್ವಿ

ಇತ್ತೀಚೆಗೆ ಬಿಡುಗಡೆಯಾದ ಮನ್ನಂ ಮತ್ತು ಹರ್ಟ್ ಅಟ್ಯಾಕ್, ಸೀತಮ್ಮ ವಾಕಿಟ್ಲೋ ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದ ತೇಜಸ್ವಿ, ವರ್ಮಾ ಕಣ್ಣಿಗೆ ಬಿದ್ದಿದ್ದಾಳೆ. ವರ್ಮಾ ನಿರ್ದೇಶನದ ಐಸ್ ಕ್ರೀಮ್ ಚಿತ್ರದಲ್ಲಿ ಬಿಂದಾಸ್ ಪಾತ್ರದಲ್ಲಿ ನಟಿಸಲು ತೇಜಸ್ವಿ ಓಕೆ ಅಂದಿದ್ದಾಳೆ, ಚಿತ್ರ ಸೆಟ್ಟೇರಿದೆ.

ಬೆತ್ತಲೆ ಸನ್ನಿವೇಶದ ದೃಶ್ಯಗಳು

ಬೆತ್ತಲೆ ಸನ್ನಿವೇಶದ ದೃಶ್ಯಗಳು ಸ್ವತಃ ನಿರ್ಮಾಪಕರಿಗೂ ಗೊತ್ತಾಗದಂತೆ ವರ್ಮಾ ಮುತುವರ್ಜಿ ವಹಿಸಿದ್ದರು. ತಮಗೆ ಮತ್ತು ಕ್ಯಾಮರಮ್ಯಾನ್ ಅಂಜಿ ಇಬ್ಬರಿಗೆ ಮಾತ್ರ ತಿಳಿಯುವಂತೆ ಚಿತ್ರೀಕರಿಸಿದ್ದರೂ ಕೂಡಾ.

ನಾಲ್ಕು ಗೋಡೆಯ ನಡುವೆ ನಡೆಯುವ ಸನ್ನಿವೇಶ

ನಾಲ್ಕು ಗೋಡೆಯ ನಡುವೆ ನಡೆಯುವ ಈ ದೃಶ್ಯವನ್ನು ಚಿತ್ರೀಕರಿಸಲು ನಾಲ್ಕು ಕ್ಯಾಮರಾ ಫಿಕ್ಸ್ ಮಾಡಲಾಗಿತ್ತು. ಕ್ಯಾಮರಾ ಫಿಕ್ಸ್ ಮಾಡಿದ ನಂತರ ಚಿತ್ರತಂಡ ಅಲ್ಲಿಂದ ಹೊರನಡೆದಿತ್ತಂತೆ. ಎಲ್ಲರೂ ಹೋದನಂತರ ನಾಯಕಿ ತೇಜಸ್ವಿ ಬಟ್ಟೆ ಎಲ್ಲಾ ಬಿಚ್ಚಿದ್ದಾಳೆ. ವರ್ಮಾ ಏನು ಬೇಕೋ (ಚಿತ್ರಕ್ಕೆ) ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಆದ್ರೆ ವಿಷಯ ಲೀಕ್ ಆಯಿತು

ವರ್ಮಾ ಅತ್ಯಂತ ಜವಾಬ್ದಾರಿಯಿಂದ ದೃಶ್ಯವನ್ನು ಚಿತ್ರೀಕರಿಸಿದ್ದರೂ ವಿಷಯ ಹೇಗೋ ಬಹಿರಂಗವಾಗಿದೆ. ಮೊದಲಿಗೆ ಚಿತ್ರತಂಡ ಮತ್ತು ಕ್ಯಾಮರಾ ಹುಡುಗರಿಗೆ ಗೊತ್ತಾಗಿದೆ, ನಂತರ ಮಾಧ್ಯಮಗಳಿಗೆ...

ಚಿತ್ರತಂಡದ ಸಮರ್ಧನೆ

ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆಯೇ, ಈ ಚಿತ್ರಕ್ಕೆ 4 ಗೋಡೆಯ ನಡುವೆ ನಡೆಯುವ ಈ ದೃಶ್ಯವೇ ಪ್ರಮುಖ ಆಕರ್ಷಣೆ ಎಂದು ಬೆತ್ತಲೆ ದೃಶ್ಯ ಇರುವುದನ್ನು ಚಿತ್ರತಂಡ ಒಪ್ಪಿಕೊಂಡಿದೆ. ಕೊನೆಯ ಮಾತೆಂದರೆ, ಚಿತ್ರ ಬಿಡುಗಡೆಯಾದಾಗ ಈ ದೃಶ್ಯ ಪ್ರೇಕ್ಷಕನ ಮುಂದೆ ಬರುದೇ ಇರುತ್ತಾ? ಅಥವಾ ಇಂತಹ ದೃಶ್ಯಗಳು ಮುಂದೆ ಸ್ಕ್ರೀನ್ ಮೇಲೆ ಬರುತ್ತೆ ಎಂದು ಚಿತ್ರಮಂದಿರದಲ್ಲಿ ಪ್ರೇಕ್ಷಕ ಕಣ್ಣುಮುಚ್ಚಿ ಕೂತಿರುತ್ತಾನಾ? ನೋ ವೇ..

English summary
Actress Tejaswi Madivada Tejaswi Madivada does bold scene in RGV Telugu movie titled 'Ice Cream'.
Please Wait while comments are loading...